
'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಸಿನಿಮಾ ಚಿತ್ರಮಂದಿರಗಳಲ್ಲಿ ನಾಲ್ಕನೇ ವಾರ ಪ್ರದರ್ಶನ ಕಾಣುತ್ತಿದ್ದು, 25 ದಿನಗಳನ್ನು ಪೂರೈಸುವ ಸನಿಹದಲ್ಲಿದೆ. ಇದೇ ಮೊದಲ ಬಾರಿಗೆ ಕೇಶವ ಮೂರ್ತಿ ಅವರು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ಸಾಂಪ್ರದಾಯಿಕ ರೂಢಿಗಳಿಗೆ ಸವಾಲೆಸೆಯುತ್ತದೆ ಮತ್ತು ಕಂಟೆಂಟ್ ಆಧರಿತ ಚಿತ್ರಗಳು ಯಶಸ್ಸು ಕಾಣುತ್ತವೆ ಎಂಬ ಸಂದೇಶ ನೀಡಿದೆ.
ಚಿತ್ರದ ಯಶಸ್ಸಿನ ಕುರಿತು ಮಾತನಾಡಿದ ಕೇಶವ ಮೂರ್ತಿ, 'ಚಿತ್ರಗಳು ಯಶಸ್ವಿಯಾಗಲು ಸ್ಟಾರ್‌ಗಳ ಅಗತ್ಯವಿಲ್ಲ ಎಂಬುದಕ್ಕೆ ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿರುವುದೇ ಸಾಕ್ಷಿ. ಸರಿಯಾದ ಕಂಟೆಂಟ್ ಮತ್ತು ನಿರೂಪಣೆಯೊಂದಿಗೆ ನೀವು ಪ್ರೇಕ್ಷಕರ ಹೃದಯವನ್ನು ಗೆಲ್ಲಬಹುದು' ಎಂದರು.
ನಾನು ವಿಭಿನ್ನವಾದದ್ದನ್ನು ರಚಿಸಲು ಬಯಸುತ್ತೇನೆ. ಅದು ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತದ್ದಾಗಿರಬೇಕು. ಸಾಮಾನ್ಯ ಸಿದ್ಧ ಸೂತ್ರಗಳಿಂದ ಹೊರಬಂದು, ಜನರು ಚಿತ್ರಮಂದಿರಗಳಿಂದ ಹೊರಬಂದ ನಂತರವೂ ಅವರೊಂದಿಗೆ ಉಳಿಯುವಂತ ಕಥೆಯನ್ನು ರಚಿಸುವುದು ಮುಖ್ಯವಾಗಿತ್ತು ಎನ್ನುತ್ತಾರೆ.
ಮಲ್ಟಿಪ್ಲೆಕ್ಸ್‌ನಲ್ಲಿ ಸ್ಕ್ರೀನ್‌ಗಳನ್ನು ಪಡೆಯುವುದು ಒಂದು ಸವಾಲಾಗಿತ್ತು. ಆದರೆ, ಚಿತ್ರವು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಯಾವುದೇ ಚಿತ್ರಕ್ಕೆ ಚಿತ್ರಮಂದಿರಗಳನ್ನು ಪಡೆಯುವುದು ಸುಲಭವಲ್ಲ. ಆದರೆ, ಪ್ರೇಕ್ಷಕರಿಂದ ದೊರೆಯುವ ಅಗಾಧ ಬೆಂಬಲವು ಸ್ವತಂತ್ರ ಸಿನೆಮಾಕ್ಕೆ ದೊಡ್ಡ ಮೌಲ್ಯೀಕರಣವಾಗಿದೆ ಎಂದು ಕೇಶವ ಮೂರ್ತಿ ಹೇಳುತ್ತಾರೆ.
ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಮೂರು ಭಾಗಗಳಲ್ಲಿ ಇದ್ದು, ಕಳ್ಳತನ, ಆಸ್ತಿ ಮತ್ತು ಮಾನವ ದುರ್ಬಲತೆಗಳ ವಿಷಯಗಳ ಕುರಿತು ಹೇಳುತ್ತದೆ. ಚಿತ್ರದಲ್ಲಿ ನಟ ದಿಲೀಪ್ ರಾಜ್, ಪ್ರಸನ್ನ ವಿ ಶೆಟ್ಟಿ, ಅಪೂರ್ವ ಭಾರದ್ವಾಜ್, ಮಧುಸೂದನ್ ಗೋವಿಂದ್ ಮತ್ತು ಶಿಲ್ಪಾ ಮಂಜುನಾಥ್ ನಟಿಸಿದ್ದಾರೆ.
'ಇದು ಕೇವಲ ಆರಂಭವಷ್ಟೇ. ನಮ್ಮ ಯಶಸ್ಸು ಹೆಚ್ಚಿನ ನಿರ್ದೇಶಕರಿಗೆ ರಿಸ್ಕ್ ತೆಗೆದುಕೊಳ್ಳಲು ಮತ್ತು ಅವರ ದೃಷ್ಟಿ ನಿಜವಾಗಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಈಗ ಪ್ರಾರಂಭಿಸಿದ್ದೇವೆ ಮತ್ತು ಈ ರೀತಿಯ ಸಿನಿಮಾದ ಈ ಹೊಸ ಅಲೆ ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ' ಎಂದು ಹೇಳುತ್ತಾರೆ.
Advertisement