'ಆರಾಮ್ ಅರವಿಂದ ಸ್ವಾಮಿ' ಖ್ಯಾತಿಯ ನಟ ಅನೀಶ್ ನಿರ್ದೇಶನಕ್ಕೆ ವಾಪಸ್

ಅನೀಶ್ ಈ ಹಿಂದೆ ತಾವೇ ನಟಿಸಿದ್ದ ರಾಮಾರ್ಜುನ ಚಿತ್ರವನ್ನು ನಿರ್ದೇಶಿಸಿದ್ದರು.
ಅನೀಶ್
ಅನೀಶ್
Updated on

2024ರಲ್ಲಿ ತೆರೆಕಂಡ ಅಭಿಷೇಕ್ ಶೆಟ್ಟಿ ನಿರ್ದೇಶನದ ಆರಾಮ್ ಅರವಿಂದ ಸ್ವಾಮಿ ಕಮರ್ಷಿಯಲ್ ಎಂಟರ್ಟೈನರ್ ಯಶಸ್ಸಿನ ನಂತರ, ನಟ ಅನೀಶ್ ಇದೀಗ ನಿರ್ದೇಶಕನ ಕ್ಯಾಪ್ ತೊಡಲು ತಯಾರಿ ನಡೆಸುತ್ತಿದ್ದಾರೆ. ನಟ ಕಮರ್ಷಿಯಲ್ ಅಂಶಗಳನ್ನು ಒಳಗೊಂಡ ಬಲವಾದ ಕಂಟೆಂಟ್ ಹೊಂದಿರುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ.

ಅನೀಶ್ ಈ ಹಿಂದೆ ತಾವೇ ನಟಿಸಿದ್ದ ರಾಮಾರ್ಜುನ ಚಿತ್ರವನ್ನು ನಿರ್ದೇಶಿಸಿದ್ದರು. ಈ ಮುಂಬರುವ ಹೊಸ ಚಿತ್ರಕ್ಕಾಗಿ ಮತ್ತೊಮ್ಮೆ ಕ್ಯಾಮೆರಾ ಹಿಂದೆ ತಮ್ಮ ಕೈಚಳಕ ತೋರಿಸಲು ಸಜ್ಜಾಗಿದ್ದಾರೆ. ಭಾವಪ್ರೀತ್ ಪ್ರೊಡಕ್ಷನ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಈ ಚಿತ್ರಕ್ಕೆ ವಿಜಯ್ ಎಂ ರೆಡ್ಡಿ ಅವರ ಬೆಂಬಲವಿದೆ. ಈ ಚಿತ್ರದ ಮೂಲಕ ವಿಜಯ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ಈ ರೋಚಕ ಸುದ್ದಿಯನ್ನು ಅನೀಶ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ತನ್ನ ಮುಂದಿನ ಯೋಜನೆಯನ್ನು ಘೋಷಿಸಲು ಥ್ರಿಲ್ ಆಗಿದ್ದೇನೆ. ರಾಮಾರ್ಜುನ ಚಿತ್ರದ ನಂತರ, ನಾನು ಮತ್ತೊಮ್ಮೆ ನಿರ್ದೇಶಕನ ಕುರ್ಚಿಗೆ ಮರಳುತ್ತಿದ್ದೇನೆ ಮತ್ತು ಈ ಬಾರಿ ಅದು ದೊಡ್ಡದಾಗಿರಲಿದೆ ಮತ್ತು ಉತ್ತಮವಾಗಿರಲಿದೆ!' ' ಎಂದು ನಟ-ನಿರ್ದೇಶಕರು ಬರೆದಿದ್ದಾರೆ.

ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ನಮ್ಮ ತಂಡವು ಶ್ರಮಿಸುತ್ತಿದೆ. ನೀವು ನನ್ನನ್ನು ಮತ್ತೊಂದು ಭರವಸೆಯ ಮತ್ತು ವಿಶಿಷ್ಟ ಪಾತ್ರದಲ್ಲಿ ನೋಡುತ್ತೀರಿ ಎಂದು ನಾನು ನಂಬುತ್ತೇನೆ. ಹೆಚ್ಚಿನ ಪ್ರೇಕ್ಷಕರನ್ನು ತಲುಪಲು, ನಾವು ಕನ್ನಡ ಮತ್ತು ತೆಲುಗು ಎರಡರಲ್ಲೂ ಏಕಕಾಲದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ ಎಂದಿದ್ದಾರೆ.

ಈಗಾಗಲೇ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಶೀರ್ಷಿಕೆ, ತಾರಾಗಣ ಮತ್ತು ಇತರೆ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಿದೆ. ಚಿತ್ರ ನಿರ್ದೇಶನಕ್ಕೆ ಮರಳಿರುವ ಅನೀಶ್, ತಮ್ಮ ಹೊಸ ವಿಧಾನದೊಂದಿಗೆ, ಚಿಂತನಶೀಲ, ಎಂಗೇಜ್ ಮಾಡುವ ಕಂಟೆಂಟ್ ಜೊತೆಗೆ ಮಾಸ್ ಮನರಂಜನೆಯನ್ನು ನೀಡುವ ಸವಾಲನ್ನು ಸ್ವೀಕರಿಸಲು ಅನೀಶ್ ಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com