'Yours Sincerely ರಾಮ್' ಚಿತ್ರದಲ್ಲಿ ಗಣೇಶ್ ಜೊತೆಗೆ ಮೀರಾ ಜಾಸ್ಮಿನ್: ಕನ್ನಡಕ್ಕೆ ಮತ್ತೆ ಕರೆತರಲಿದ್ದಾರಾ ವಿಖ್ಯಾತ್?

ಸದ್ಯ ನಿರ್ಮಾಣ ಹಂತದಲ್ಲಿರುವ ಚಿತ್ರಕ್ಕೆ, ಇತ್ತೀಚೆಗೆ ಜನಪ್ರಿಯ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬೆಂಗಳೂರಿನಲ್ಲಿ ಹಾಡೊಂದರ ಚಿತ್ರೀಕರಣ ನಡೆಸಿದ್ದರು.
ಮೀರಾ ಜಾಸ್ಮಿನ್ - Yours Sincerely ರಾಮ್ ಚಿತ್ರದ ಪೋಸ್ಟರ್
ಮೀರಾ ಜಾಸ್ಮಿನ್ - Yours Sincerely ರಾಮ್ ಚಿತ್ರದ ಪೋಸ್ಟರ್
Updated on

ತೀವ್ರ ನಿರೀಕ್ಷೆ ಹುಟ್ಟುಹಾಕಿರುವ 'Your’s Sincerely ರಾಮ್' ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಮತ್ತು ಗಣೇಶ್ ಅವರು ನಟಿಸಿದ್ದು, ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ ವಿಖ್ಯಾತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರತಂಡ ವಿಶೇಷವಾಗಿ ವಿನ್ಯಾಸಗೊಳಿಸಿದ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದ್ದು, ಇಬ್ಬರು ನಟರು ಬೈಸಿಕಲ್ ಸವಾರಿ ಮಾಡುತ್ತಿದ್ದಾರೆ. ಈ ಹಿಂದೆ ಸೈನಿಕರ ನಡುವೆ ವಿಧೂಷಕರಾಗಿ ನಿಂತಿರುವ ಪೋಸ್ಟರ್ ರಿಲೀಸ್ ಮಾಡಲಾಗಿತ್ತು.

ಸದ್ಯ ನಿರ್ಮಾಣ ಹಂತದಲ್ಲಿರುವ ಚಿತ್ರಕ್ಕೆ, ಇತ್ತೀಚೆಗೆ ಜನಪ್ರಿಯ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬೆಂಗಳೂರಿನಲ್ಲಿ ಹಾಡೊಂದರ ಚಿತ್ರೀಕರಣ ನಡೆಸಿದ್ದರು. ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರದ ಮೂಲಕ ನಟಿ ಮೀರಾ ಜಾಸ್ಮಿನ್ ಕನ್ನಡ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ವಿವಿಧ ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಮೀರಾ ಜಾಸ್ಮಿನ್ ಅವರಿಗೆ ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. ಅವರು ಪುನೀತ್ ರಾಜ್‌ಕುಮಾರ್ ನಟನೆಯ ಮೌರ್ಯ (2004) ಚಿತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಅರಸು (2007) ಚಿತ್ರದಲ್ಲಿ ಪುನೀತ್‌ ಮತ್ತು ರಮ್ಯಾ ಜೊತೆಗೆ ನಟಿಸಿದ್ದರು. ನಟ ಶಿವರಾಜಕುಮಾರ್ ಅವರೊಂದಿಗೆ ದೇವರು ಕೊಟ್ಟ ತಂಗಿ (2009) ಮತ್ತು ಇಜ್ಜೋಡು (2010) ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಮೂಲಗಳ ಪ್ರಕಾರ, ಚಿತ್ರತಂಡವು ಮೀರಾ ಜಾಸ್ಮಿನ್ ಅವರ ಪಾತ್ರದ ಬಗ್ಗೆ ಆರಂಭಿಕ ಚರ್ಚೆಗಳನ್ನು ನಡೆಸಿದೆ ಮತ್ತು ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ಕರೆತರುವ ಕೆಲಸ ಮಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎಂದು ಹೇಳಲಾಗಿದೆ.

ಮೀರಾ ಜಾಸ್ಮಿನ್ - Yours Sincerely ರಾಮ್ ಚಿತ್ರದ ಪೋಸ್ಟರ್
Yours Sincerely Raam: ರಮೇಶ್ ಅರವಿಂದ್-ಗಣೇಶ್ ಅಭಿನಯದ ಚಿತ್ರಕ್ಕೆ ಟೈಟಲ್ ಫಿಕ್ಸ್

Yours Sincerely ರಾಮ್ ಕಥೆಯು ಅನೇಕ ಯುಗಗಳನ್ನು ವ್ಯಾಪಿಸಿದೆ. 1990 ರ ದಶಕವು ನಿರೂಪಣೆಯ ಹೃದಯವಾಗಿ ಕಾರ್ಯನಿರ್ವಹಿಸುತ್ತದೆ. ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣ, ಜೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com