
ನವದೆಹಲಿ: ಯೇ ಮಾಯಾ ಚೇಸಾವೆ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಮಂತಾ ಅಂದಿನಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಸಮಂತಾ ಅವರಿಂದ ವಿಚ್ಛೇದನ ಪಡೆದಿರುವ ನಾಗಚೈತನ್ಯ ಅವರು ಇತ್ತೀಚೆಗಷ್ಟೇ ಮತ್ತೊಂದು ವಿವಾಹವಾಗಿದ್ದಾರೆ. ಈ ಕುರಿತು ಸಮಂತಾ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.
GQ ಗೆ ನೀಡಿದ ಸಂದರ್ಶನದಲ್ಲಿ, ನಿಮ್ಮ ಮಾಜಿ ಪತಿ ಅವರ ಜೀವನದಲ್ಲಿ ಮುಂದುವರಿದಿದ್ದಾರೆ ಮತ್ತು ಇನ್ನೊಬ್ಬರೊಂದಿಗೆ ವಿವಾಹವಾಗಿದ್ದಾರೆ. ಇದರಿಂದ ನಿಮ್ಮಲ್ಲಿ ಅಸೂಯೆ ಉಂಟಾಯಿತಾ ಎಂದು ಕೇಳಿದ್ದಕ್ಕೆ ಉತ್ತರಿಸಿದ್ದಾರೆ. ತನ್ನ ಹೃದಯದಲ್ಲಿ 'ಅಸೂಯೆ'ಗೆ ಸ್ಥಳವಿಲ್ಲ. ಆ ನಕಾರಾತ್ಮಕ ಭಾವನೆಗಳ ಮೇಲೆ ಗಮನ ಕೇಂದ್ರೀಕರಿಸುವುದು ಯೋಗ್ಯವಲ್ಲ ಎಂಬುದನ್ನು ನನ್ನ ಹಿಂದಿನ ಅನುಭವಗಳು ನನಗೆ ಕಲಿಸಿವೆ ಎಂದು ಸಮಂತಾ ತಿಳಿಸಿದ್ದಾರೆ.
'ನಾನು ಸಂಪೂರ್ಣವಾಗಿ ನನ್ನಿಂದ ಬೇರ್ಪಡಿಸಲು ಬಯಸುವ ಒಂದು ಗುಣವೆಂದರೆ ಅಸೂಯೆ. ಅದು ನನ್ನಲ್ಲಿ ಮುಖ್ಯ ಭಾಗವಾಗಿರುವುದು ನನಗೆ ಇಷ್ಟವಿಲ್ಲ. ಅಸೂಯೆ ಎಲ್ಲ ಕೆಟ್ಟದ್ದಕ್ಕೂ ಮೂಲ ಎಂದು ನಾನು ಭಾವಿಸುತ್ತೇನೆ. ಉಳಿದಂತೆ ಎಲ್ಲವೂ ಉತ್ತಮವಾಗಿದೆ. ಆದರೆ, ಅಸೂಯೆಯಂತ ಅನಾರೋಗ್ಯಕರ ವಿಚಾರಗಳಿಗೆ ಸ್ಥಳವಿಲ್ಲ' ಎಂದು ಹೇಳಿದರು.
ಸಮಂತಾ ಈ ಹಿಂದೆ ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದರು. ಬಳಿಕ ಅವರು 2021ರಲ್ಲಿ ವಿಚ್ಛೇದನ ಘೋಷಿಸಿದರು. ನಾಗ ಚೈತನ್ಯ ಇದೀಗ ನಟಿ ಶೋಭಿತಾ ಧೂಳಿಪಾಲ ಅವರನ್ನು ಕಳೆದ ವರ್ಷ ಡಿಸೆಂಬರ್ 4 ರಂದು ವಿವಾಹವಾಗಿದ್ದಾರೆ.
ಇತ್ತೀಚೆಗೆ, ಸಮಂತಾ ರುತ್ ಪ್ರಭು ಅವರು 'ಸಿಟಾಡೆಲ್: ಹನಿ ಬನ್ನಿ' ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಪಿಕಲ್‌ಬಾಲ್ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದರು. ಇದು ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳಿಗೆ ಕಾರಣವಾಯಿತು.
ಫೆಬ್ರುವರಿ 1 ರಂದು, ಸಮಂತಾ ರುತ್ ಪ್ರಭು ತಮ್ಮ Instagram ಖಾತೆಯಲ್ಲಿ ವರ್ಲ್ಡ್ ಪಿಕಲ್‌ಬಾಲ್ ಲೀಗ್ ಪಂದ್ಯದ ಹಲವಾರು ಫೋಟೊಗಳನ್ನು ಹಂಚಿಕೊಂಡಿದ್ದರು. ಸಮಂತಾ ಅವರು ಪಿಕಲ್‌ಬಾಲ್ ತಂಡ ಚೆನ್ನೈ ಸೂಪರ್ ಚಾಂಪ್ಸ್ ಮಾಲೀಕತ್ವವನ್ನು ಹೊಂದಿದ್ದಾರೆ.
ಒಂದು ಫೋಟೊದಲ್ಲಿ ಸಮಂತಾ, ರಾಜ್ ನಿಡಿಮೋರು ಅವರ ಕೈ ಹಿಡಿದಿರುವುದು ಸೆರೆಯಾಗಿದ್ದು, ಡೇಟಿಂಗ್ ವದಂತಿಗಳಿಗೆ ಪುಷ್ಟಿ ನೀಡಿದೆ.
ಸಮಂತಾ ರುತ್ ಪ್ರಭು ಅವರು ಕೊನೆಯದಾಗಿ ಅಮೆಜಾನ್ ಪ್ರೈಮ್ ಒರಿಜಿನಲ್ ಸಿಟಾಡೆಲ್: ಹನಿ ಬನ್ನಿಯಲ್ಲಿ ವರುಣ್ ಧವನ್ ಜೊತೆಗೆ ಕಾಣಿಸಿಕೊಂಡಿದ್ದರು. ಬೆಳ್ಳೆ ಪರದೆಯಲ್ಲಿ ಕೊನೆಯ ಬಾರಿಗೆ ವಿಜಯ್ ದೇವರಕೊಂಡ ಅವರೊಂದಿಗೆ ಕುಷಿ (2023) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
Advertisement