ಕಾರ್ತಿಕ್ ಮಹೇಶ್ ನಟನೆಯ 'ರಾಮರಸ' ಸಿನಿಮಾ ತಂಡ ಸೇರಿದ ನಟ ಶರಣ್; ಚಿತ್ರದಲ್ಲಿ ವಿಶಿಷ್ಟ ಪಾತ್ರ

ಚಿತ್ರತಂಡ ಶರಣ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.
ನಟ ಶರಣ್
ನಟ ಶರಣ್
Updated on

ಶರಣ್ ನಟನೆಯ ಅಧ್ಯಕ್ಷ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಹೆಬಾ ಪಟೇಲ್, ಕೆಲವು ವರ್ಷಗಳ ನಂತರ ಇದೀಗ 'ರಾಮರಸ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಚಿತ್ರದಲ್ಲಿ ಬಾಲಾಜಿ ಮನೋಹರ್ ಜೊತೆಗೆ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ನಾಯಕರಾಗಿ ನಟಿಸಿದ್ದು, ನಟ ಶರಣ್ ಕೂಡ ಚಿತ್ರತಂಡ ಸೇರಿದ್ದಾರೆ. ಬಿಎಂ ಗಿರಿರಾಜ್ ನಿರ್ದೇಶನದ ಚಿತ್ರದಲ್ಲಿ ಆಸಕ್ತಿದಾಯಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಗುರು ದೇಶಪಾಂಡೆ ನಿರ್ಮಿಸಿರುವ ಈ ಚಿತ್ರ ಇದೀಗ ವ್ಯಾಪಕ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ಶರಣ್ ದೇವರ ರಾಜ, ಹೋಮ, ಹವನ ಮತ್ತು ಯಜ್ಞಗಳ ಅಧಿಪತಿ ಇಂದ್ರ ದೇವೇಂದ್ರನಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರತಂಡ ಶರಣ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಶರಣ್ ಪಾತ್ರದ ನಿಜವಾದ ಉದ್ದೇಶವನ್ನು ಫ್ರಾಂಚೈಸಿಯ ಮುಂದಿನ ಅಧ್ಯಾಯದಲ್ಲಿ ಸಂಪೂರ್ಣವಾಗಿ ಅನಾವರಣಗೊಳಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಚಿತ್ರಕ್ಕೆ ಬಿಜೆ ಭರತ್ ಅವರ ಸಂಗೀತ ಮತ್ತು ಕೃಷ್ಣ ಕುಮಾರ್ ಅವರ ಛಾಯಾಗ್ರಹಣವಿದೆ.

ನಟ ಶರಣ್
'ರಾಮರಸ' ಚಿತ್ರದ ಮೂಲಕ ಹೆಬಾ ಪಟೇಲ್ ಕನ್ನಡಕ್ಕೆ ಕಂಬ್ಯಾಕ್; ಬಿಗ್ ಬಾಸ್ ಖ್ಯಾತಿಯ ಮಹೇಶ್ ಕಾರ್ತಿಕ್ ನಾಯಕ

ಭ್ರಮರಿ ಪಾತ್ರದಲ್ಲಿ ಹೆಬಾ ಪಟೇಲ್ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರವನ್ನು ಅಮಲೇರಿಸುವ ಶಕ್ತಿಯಾಗಿ, ಮಕರಂದವನ್ನು ಬೆನ್ನಟ್ಟುವ ಜೇನುನೊಣದ ಭ್ರಮೆಯಾಗಿ, ಅದರಿಂದ ಶಾಶ್ವತವಾಗಿ ತಪ್ಪಿಸಿಕೊಳ್ಳಲಾಗದ ಮತ್ತು ಅಪಾಯಕಾರಿಯನ್ನಾಗಿ ಚಿತ್ರಿಸಲಾಗಿದೆ. ಅಲ್ಲದೆ, ಈ ಚಿತ್ರದಲ್ಲಿ ರಾಮರಸದ ಬಯಕೆ, ನಿಗೂಢತೆ ಮತ್ತು ಭಾವೋದ್ರೇಕದ ವಿಷಯಗಳನ್ನು ತೆರೆ ಮೇಲೆ ತರಲಾಗಿದೆ ಎಂದು ನಿರ್ಮಾಪಕ ಗುರು ದೇಶಪಾಂಡೆ ವಿವರಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com