
ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ ತಂಡೇಲ್ ಸಿನಿಮಾ ಫೆ.07 ರಂದು ಬಿಡುಗಡೆಯಾಗಿದೆ. ಆದರೆ ದುರದೃಷ್ಟವಶಾತ್ ಸಿನಿಮಾಗೆ ಪೈರಸಿ ಕಾಟ ಎದುರಾಗಿದೆ.
ಚಂದೂ ಮೊಂಡೇಟಿ ನಿರ್ದೇಶನದ ಚಿತ್ರ ಹಲವು ಪೈರಸಿ ವೆಬ್ ಸೈಟ್ ಗಳಲ್ಲಿ ಬಿಡುಗಡೆಯಾಗಿದೆ.
ಪಿಂಕ್ ವಿಲ್ಲಾ ವರದಿಯ ಪ್ರಕಾರ, ಪೈರಸಿ ವೆಬ್ ಸೈಟ್ ಒಂದರಲ್ಲಿ ಥಂಡೇಲ್ ಸಿನಿಮಾ ಉಚಿತವಾಗಿ ಡೌನ್ ಲೋಡ್ ಗೆ ಲಭ್ಯವಿದೆ. ಶ್ರೀಕಾಕುಳಂ ನ ಮೀನುಗಾರನೋರ್ವ ಪಾಕಿಸ್ತಾನದ ಜಲಗಡಿ ಪ್ರವೇಶಿಸಿ ಬಂಧನಕ್ಕೆ ಒಳಗಾಗಿ ಅನುಭವಿಸುವ ಚಿತ್ರಹಿಂಸೆಯ ಕಥೆಯನ್ನು ತಂಡೇಲ್ ಒಳಗೊಂಡಿದೆ. ನಾಗ ಚೈತನ್ಯ ನಾಯಕನ ಪಾತ್ರ (ಮೀನುಗಾರನ ಪಾತ್ರ) ದಲ್ಲಿ ನಟಿಸಿದ್ದು, ಸಾಯಿ ಪಲ್ಲವಿ ನಾಯಕಿಯಾಗಿದ್ದಾರೆ.
ಥಿಯೇಟರ್ ಗಳಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ನಾಗ ಚೈತನ್ಯ ಸಾಯಿ ಪಲ್ಲವಿಯ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಎಸ್ ಪಿ ಸಂಗೀತಕ್ಕೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದು ಡಿಎಸ್ ಪಿ ಅವರ ಇತ್ತೀಚಿನ ವರ್ಷಗಳಲ್ಲಿನ ಅತ್ಯುತ್ತಮ ಸಂಗೀತ ಎಂದು ವಿಶ್ಲೇಷಿಸಲಾಗುತ್ತಿದೆ. ಸಿನಿಮಾದಲ್ಲಿ ಉತ್ತಮ ಚಿತ್ರಕಥೆ ಇದ್ದು, ಕ್ಲೈಮ್ಯಾಕ್ಸ್ ಬಗ್ಗೆ ಕುತೂಹಲ ಹೆಚ್ಚಿಸುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪೈರಸಿಗೆ ತುತ್ತಾಗಿರುವ ದಕ್ಷಿಣ ಭಾರತದ ಲೆಟೆಸ್ಟ್ ಸಿನಿಮಾ ಥೆಂಡೇಲ್ ಆಗಿದೆ. ಇದಕ್ಕೂ ಮೊದಲು ವಿದಾಮುಯಾರ್ಚಿ, ಗೇಮ್ ಚೇಂಜರ್, ಪುಷ್ಪಾ 2 ಹಾಗೂ ಇನ್ನಿತರ ಸಿನಿಮಾಗಳು ಆನ್ ಲೈನ್ ನಲ್ಲಿ ಲೀಕ್ ಆಗಿದ್ದವು.
ಆನ್ ಲೈನ್ ನಲ್ಲಿ ಲೀಕ್ ಆದ ನಂತರವೂ ತಂಡೇಲ್ ವೀಕ್ಷಿಸಲು ಥಿಯೇಟರ್ ಗಳಿಗೆ ಬರುವವರ ಸಂಖ್ಯೆ ಕಡಿಮೆಯೇನೂ ಆಗಿಲ್ಲ. ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಜೀ ತೆಲುಗು ಪಡೆದುಕೊಂಡಿದ್ದು ಈ ಸಿನಿಮಾ ಶೀಘ್ರದಲ್ಲೇ ಒಟಿಟಿಯಲ್ಲೂ ಬಿಡುಗಡೆಯಾಗುವ ನಿರೀಕ್ಷೆ ಇದೆ.
Advertisement