
ನವದೆಹಲಿ: ನಟಿ ಸಮಂತಾ ರುತ್ ಪ್ರಭು ಜೊತೆಗೆ ವಿಚ್ಛೇದನ ಪಡೆದ ಬಳಿಕ ಇದೇ ಮೊದಲ ಬಾರಿಗೆ ನಟ ನಾಗ ಚೈತನ್ಯ ಮೌನ ಮುರಿದಿದ್ದಾ. ಸಮಂತಾ ಕೂಡ ತಮ್ಮ ಜೀವನದಲ್ಲಿ ಮುಂದುವರಿದಿದ್ದಾರೆ ಎಂದಿದ್ದಾರೆ.
ಸಮಂತಾ ಇತ್ತೀಚೆಗಷ್ಟೇ 'ಸಿಟಾಡೆಲ್: ಹನಿ ಬನ್ನಿ' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಸರಣಿಯ ನಿರ್ದೇಶಕ ರಾಜ್ ನಿಡಿಮೋರು ಜೊತೆಗೆ ನಟಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಕೇಳಿಬಂದಿದ್ದು, ಈ ನಡುವೆ ಮಾಜಿ ಪತಿ ನಾಗ ಚೈತನ್ಯ ಈ ಹೇಳಿಕೆ ನೀಡಿದ್ದಾರೆ.
ರಾ ಟಾಕ್ಸ್ ವಿತ್ ವಿಕೆ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ನಾಗ ಚೈತನ್ಯ, 'ನಾನು ಜೀವನದಲ್ಲಿ ತುಂಬ ಮುಂದಕ್ಕೆ ಸಾಗಿದ್ದೇನೆ. ಆಕೆ (ಸಮಂತಾ) ಕೂಡ ಮುಂದಕ್ಕೆ ಸಾಗಿದ್ದಾರೆ. ನಾವಿಬ್ಬರೂ ಈಗ ನಮ್ಮದೇ ಆದ ಜೀವನವನ್ನು ನಡೆಸುತ್ತಿದ್ದೇವೆ. ನನಗೆ ಮತ್ತೆ ಪ್ರೀತಿ ಉಂಟಾಗಿದೆ. ನಾನು ಈಗ ತುಂಬಾ ಸಂತೋಷವಾಗಿದ್ದೇನೆ ಮತ್ತು ನಮ್ಮಿಬ್ಬರಿಗೆ ಪರಸ್ಪರ ತುಂಬಾ ಗೌರವವಿದೆ. ಇದು ನನ್ನ ಜೀವನದಲ್ಲಿ ಮಾತ್ರವೇ ಸಂಭವಿಸಿಲ್ಲ, ಹೀಗಿರುವಾಗ ನಾನು ಮಾತ್ರ ಏಕೆ ಅಪರಾಧಿಯಂತೆ ಕಾಣಿಸಿಕೊಳ್ಳುತ್ತಿದ್ದೇನೆ? ಎಂದಿದ್ದಾರೆ.
'ನಾವು ನಮ್ಮದೇ ಆದ ದಾರಿಯಲ್ಲಿ ಹೋಗಬೇಕೆಂದು ಬಯಸಿದ್ದೇವೆ. ನಮ್ಮದೇ ಆದ ಕಾರಣಗಳಿಗಾಗಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಮತ್ತು ನಾವು ಪರಸ್ಪರ ಗೌರವಿಸುತ್ತೇವೆ. ಈಗ ನಾವು ನಮ್ಮ ಜೀವನದಲ್ಲಿ, ನಮ್ಮದೇ ಆದ ರೀತಿಯಲ್ಲಿ ಸಾಗುತ್ತಿದ್ದೇವೆ. ಇನ್ನೇನು ವಿವರಣೆ ಬೇಕು, ನನಗೆ ಅರ್ಥವಾಗುತ್ತಿಲ್ಲ. ಪ್ರೇಕ್ಷಕರು ಮತ್ತು ಮಾಧ್ಯಮಗಳು ಅದನ್ನು ಗೌರವಿಸುತ್ತವೆ ಎಂದು ನಾನು ಭಾವಿಸುತ್ತೇನೆ. ನಾವು ಖಾಸಗಿತನ ಕಾಪಾಡುವಂತೆ ವಿನಂತಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದು ನಮ್ಮ ಖಾಸಗಿ ವಿಚಾರ. ಆದರೆ, ದುರದೃಷ್ಟವಶಾತ್, ಇದು ಪ್ರಮುಖ ವಿಷಯವಾಗಿದೆ. ಇದು ಗಾಸಿಪ್ ಮತ್ತು ಮನರಂಜನೆಯ ವಿಚಾರವಾಯಿತು' ಎಂದು ನಾಗ ಚೈತನ್ಯ ಬೇಸರ ಹೊರಹಾಕಿದ್ದಾರೆ.
ಸಮಂತಾ ಅವರಿಂದ ಬೇರ್ಪಡುವ ನಿರ್ಧಾರದ ಬಗ್ಗೆ ಮಾತನಾಡಿದ ಅವರು, 'ನಾವು ಈಗ ಕೈಗೊಂಡಿರುವ ಯಾವುದೇ ನಿರ್ಧಾರವಾಗಿದ್ದರೂ ಅದನ್ನು ತುಂಬಾ ಯೋಚಿಸಿ ಮತ್ತು ಇನ್ನೊಬ್ಬರ ಬಗ್ಗೆ ಬಹಳ ಗೌರವವನ್ನು ಇಟ್ಟುಕೊಂಡು ಮಾಡಿದ ನಿರ್ಧಾರವಾಗಿದೆ. ಇದು ನನಗೆ ತುಂಬಾ ಸೂಕ್ಷ್ಮವಾದ ವಿಷಯವಾದ್ದರಿಂದ ನಾನು ಹೇಳುತ್ತಿದ್ದೇನೆ. ನಾನು ಕೂಡ ಒಡೆದ ಕುಟುಂಬದಿಂದ ಬಂದಿರುವುದರಿಂದ ಅದರ ಪರಿಣಾಮ ಹೇಗಿರುತ್ತದೆ ಎಂಬುದನ್ನು ತಿಳಿದಿದ್ದೇನೆ. ಸಂಬಂಧವನ್ನು ಮುರಿಯುವ ಮೊದಲು ನಾನು 1000 ಬಾರಿ ಯೋಚಿಸುತ್ತೇನೆ ಏಕೆಂದರೆ ಅದರ ಪರಿಣಾಮಗಳ ಬಗ್ಗೆ ನನಗೆ ತಿಳಿದಿದೆ... ಇದು ಪರಸ್ಪರ ತೆಗೆದುಕೊಂಡ ನಿರ್ಧಾರವಾಗಿತ್ತು' ಎಂದು ತಿಳಿಸಿದ್ದಾರೆ.
'ಇದೇ ವಿಚಾರಕ್ಕೆ ನನಗೆ ನಿರಾಶೆಯಾಗಲು ಇದು ರಾತ್ರೋರಾತ್ರಿ ಸಂಭವಿಸಿದ್ದಲ್ಲ. ಅದು ಸಂಭವಿಸಿತು ಎಂದು ನನಗೆ ಬೇಸರವಾಗಿದೆ ಆದರೆ, ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ. ನೀವು ನಿಮ್ಮನ್ನು ನಿರ್ಮಿಸಿಕೊಳ್ಳಿ, ನೀವು ಪ್ರಗತಿಯಲ್ಲಿರುತ್ತೀರಿ ಮತ್ತು ಶೀಘ್ರದಲ್ಲೇ ನೀವು ಸರಿಯಾದ ಮಾರ್ಗವನ್ನು ಕಂಡುಕೊಳ್ಳುತ್ತೀರಿ. ಅದು ನನಗೆ ಸಂಭವಿಸಿದೆ' ಎಂದು ಅವರು ಹೇಳಿದರು.
ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು 2017ರಲ್ಲಿ ವಿವಾಹವಾದರು. ಆದರೆ, 2021ರಲ್ಲಿ ಅವರು ವಿಚ್ಛೇದನ ಪಡೆದರು. ನಾಗ ಚೈತನ್ಯ ಈಗ ನಟಿ ಶೋಭಿತಾ ಧೂಳಿಪಾಲ ಅವರನ್ನು ವಿವಾಹವಾಗಿದ್ದಾರೆ.
Advertisement