ಮತ್ತೆ ನಿರ್ದೇಶನದತ್ತ ನಟ ಚರಣ್ ರಾಜ್: 'ಕರುನಾಡ ಕಣ್ಮಣಿ' ಚಿತ್ರಕ್ಕೆ ಆ್ಯಕ್ಷನ್ ಕಟ್; ಸ್ಯಾಂಡಲ್‌ವುಡ್‌ಗೆ ಪುತ್ರ ಪದಾರ್ಪಣೆ

ದೇವ್ ಜೊತೆಗೆ ನಟ ಕಿಶೋರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದೇವ್ ಚರಣ್ ರಾಜ್ -  ಚರಣ್ ರಾಜ್
ದೇವ್ ಚರಣ್ ರಾಜ್ - ಚರಣ್ ರಾಜ್
Updated on

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ ಚರಣ್ ರಾಜ್, ಹಿಂದಿ ಮತ್ತು ಒಡಿಯಾ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇದೀಗ ಸ್ವಲ್ಪ ವಿರಾಮದ ನಂತರ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಈ ಹಿಂದೆ ಅಣ್ಣನ್ ತಂಗಚಿ (1999), ಯದಾರ್ಥ ಪ್ರೇಮ ಕಥಾ (2012) ಮತ್ತು ಕುಪ್ಪನ್ (2024) ಚಿತ್ರಗಳನ್ನು ನಿರ್ದೇಶಿಸಿದ್ದ ನಟ, 'ಕರುನಾಡ ಕಣ್ಮಣಿ' ಎಂಬ ಕನ್ನಡ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಮರ್ಡರ್ ಮಿಸ್ಟರಿಯಾಗಿರುವ ಕರುನಾಡ ಕಣ್ಮಣಿ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಲಿದೆ.

ಈ ಚಿತ್ರದ ನಿರ್ಮಾಣವು ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ. ಈ ಚಿತ್ರದ ಮೂಲಕ ಚರಣ್ ರಾಜ್ ಅವರ ಪುತ್ರ ದೇವ್ ಚರಣ್ ರಾಜ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ದೇವ್ ಜೊತೆಗೆ ನಟ ಕಿಶೋರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚರಣ್ ರಾಜ್ ಮಾತನಾಡಿ, 'ನಿಮ್ಮ ಪ್ರೀತಿ ಮತ್ತು ಬೆಂಬಲ ಯಾವಾಗಲೂ ನನ್ನ ಶಕ್ತಿಯಾಗಿದೆ. ನನ್ನ ಮಗ ಇದೀಗ ಚಿತ್ರರಂಗದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧನಾಗಿದ್ದು, ಈಗಲೂ ನಿಮ್ಮಿಂದ ಅದೇ ಪ್ರೋತ್ಸಾಹ ಮುಂದುವರೆಯಲಿ ಎಂದು ನಾನು ಬಯಸುತ್ತೇನೆ' ಎಂದು ಹೇಳಿದರು.

ಚಿತ್ರಕ್ಕೆ ಸಾಗರ್ ಗುರುರಾಜ್ ಅವರ ಸಂಗೀತ ಮತ್ತು ಪೃಥ್ವಿ ಅವರ ಛಾಯಾಗ್ರಹಣವಿದೆ. ಚಿತ್ರದ ತಾರಾಗಣವನ್ನು ಇನ್ನೂ ಅಂತಿಮಗೊಳಿಸಲಾಗುತ್ತಿದ್ದು, ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ದೇವ್ ಚರಣ್ ರಾಜ್ -  ಚರಣ್ ರಾಜ್
ಗುರುಪ್ರಸಾದ್ ನಿರ್ದೇಶಿಸಿ ನಟಿಸಿರುವ ಕೊನೆಯ ಚಿತ್ರ 'ಎದ್ದೇಳು ಮಂಜುನಾಥ 2' ಟೀಸರ್ ಬಿಡುಗಡೆ

ಕಾಲೇಜು ಪರಿಸರದಲ್ಲಿ ಸೆಟ್ಟೇರಲಿರುವ 'ಕರುನಾಡ ಕಣ್ಮಣಿ' ಚಿತ್ರವು ಕಾಲೇಜು ರಜೆ ಆರಂಭವಾದ ನಂತರ ಚಿತ್ರೀಕರಣ ಆರಂಭವಾಗಲಿದೆ. ಕನ್ನಡದ ಭಾಗಗಳನ್ನು ಬೆಂಗಳೂರಿನಲ್ಲಿ, ತಮಿಳು ಭಾಗಗಳನ್ನು ಪುದುಚೇರಿ ಮತ್ತು ಕಡಲೂರಿನಲ್ಲಿ ಚಿತ್ರೀಕರಿಸಲಾಗುವುದು ಮತ್ತು ತೆಲುಗು ಸೀಕ್ವೆನ್ಸ್‌ಗಳು ಹೊಂಗನೂರಿನಲ್ಲಿ ನಡೆಯಲಿವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com