ಪ್ರೇಮಿಗಳ ದಿನದಂದು ದರ್ಶನ್ ಅಭಿನಯದ 'ನಮ್ಮ ಪ್ರೀತಿಯ ರಾಮು' ರೀರಿಲೀಸ್!

ಸಂಜಯ್-ವಿಜಯ್ ನಿರ್ದೇಶನದ, ನಮ್ಮ ಪ್ರೀತಿಯ ರಾಮು ಚಿತ್ರವು ದರ್ಶನ್ ಅವರ ವೃತ್ತಿಜೀವನದಲ್ಲಿ ಅದ್ವಿತೀಯ ಚಿತ್ರಗಳಲ್ಲಿ ಒಂದಾಗಿದೆ.
ನಮ್ಮ ಪ್ರೀತಿಯ ರಾಮು ಚಿತ್ರದ ಸ್ಟಿಲ್
ನಮ್ಮ ಪ್ರೀತಿಯ ರಾಮು ಚಿತ್ರದ ಸ್ಟಿಲ್
Updated on

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ 'ನಮ್ಮ ಪ್ರೀತಿಯ ರಾಮು' ಚಿತ್ರವನ್ನು ಫೆಬ್ರುವರಿ 14 ರಂದು ಮರುಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಫೆಬ್ರುವರಿ 16 ರಂದು ನಟ ದರ್ಶನ್ ಹುಟ್ಟುಹಬ್ಬದ ಸಂದರ್ಭದಲ್ಲೇ ದೊಡ್ಡ ಪರದೆಯ ಮೇಲೆ ಮತ್ತೊಮ್ಮೆ ಚಿತ್ರ ಬಿಡುಗಡೆಯಾಗಲಿದೆ. ಕಳೆದ ವರ್ಷ ಬಿಡುಗಡೆಯಾದ ದರ್ಶನ್ ಅವರ ಕಾಟೇರ, ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು. 2024ರಲ್ಲಿ ಕರಿಯ, ಶಾಸ್ತ್ರಿ ಮತ್ತು ನವಗ್ರಹದಂತಹ ಕ್ಲಾಸಿಕ್‌ ಚಿತ್ರಗಳು ರೀರಿಲೀಸ್ ಆಗಿದ್ದವು.

ಸಂಜಯ್-ವಿಜಯ್ ನಿರ್ದೇಶನದ, ನಮ್ಮ ಪ್ರೀತಿಯ ರಾಮು ಚಿತ್ರವು ದರ್ಶನ್ ಅವರ ವೃತ್ತಿಜೀವನದಲ್ಲಿ ಅದ್ವಿತೀಯ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ನಟ ದೃಷ್ಟಿಹೀನ ಗಾಯಕನಾಗಿ ಕಾಣಿಸಿಕೊಂಡಿದ್ದು, ನಟನೆಗೆ ಮೆಚ್ಚುಗೆ ಪಡೆದಿದ್ದರು. ಇದು ಅತ್ಯಂತ ಸವಾಲಿನ ಮತ್ತು ಉತ್ತಮ ಪಾತ್ರಗಳಲ್ಲಿ ಒಂದಾಗಿದೆ. ಇದು ನನ್ನ ವೃತ್ತಿಜೀವನದ ಅತ್ಯುತ್ತಮ ಪಾತ್ರವಾಗಿದೆ ಎಂದು ದರ್ಶನ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣದ ವೇಳೆ ನಟ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಲು ನಿರಾಕರಿಸಿದರು ಮತ್ತು ತಾವೇ ನೈಜವಾಗಿ ಅಭಿನಯಿಸಿದರು. ಇಳಯರಾಜ ಅವರಿಂದ ಸಂಯೋಜಿಸಲ್ಪಟ್ಟ ಚಿತ್ರದ ಸಂಗೀತವು ಕೂಡ ಮೆಚ್ಚುಗೆ ಪಡೆಯಿತು.

ಇತ್ತೀಚೆಗಷ್ಟೇ ವಿಡಿಯೋ ಬಿಡುಗಡೆ ಮಾಡಿದ್ದ ದರ್ಶನ್, ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ನನಗೆ ವಿಪರೀತ ಕಾಲು ಮತ್ತು ಬೆನ್ನು ನೋವಿದೆ, ಗಂಟೆಗಟ್ಟಲೆ ನಿಂತುಕೊಂಡು ಇರಲು ಸಾಧ್ಯವಾಗುವುದಿಲ್ಲ. ಔಷಧ ತೆಗೆದುಕೊಳ್ಳುತ್ತಿದ್ದೇನೆ, ಅದರ ಪವರ್ ಇರುವವರೆಗೆ 10-15 ದಿನ ನೋವು ಕಡಿಮೆ ಇರುತ್ತದೆ, ಮತ್ತೆ ನೋವು ಆರಂಭವಾಗುತ್ತದೆ, ನನ್ನ ಅನಾರೋಗ್ಯ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಅಷ್ಟೆ. ಯಾರೂ ಬೇಸರ ಮಾಡಿಕೊಳ್ಳಬಾರದು, ಇನ್ನು ಕೆಲವೇ ದಿನಗಳಲ್ಲಿ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದಿದ್ದರು.

ಮುಂದೆ, ಪ್ರಕಾಶ್ ವೀರ್ ನಿರ್ದೇಶನದ 'ಡೆವಿಲ್: ದಿ ಹೀರೋ' ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ. ಫೆಬ್ರುವರಿ 16 ರಂದು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ ಮತ್ತು ಶೀಘ್ರದಲ್ಲೇ ಚಿತ್ರೀಕರಣವನ್ನು ಪುನರಾರಂಭಿಸಲು ಎದುರು ನೋಡುತ್ತಿದೆ.

ನಮ್ಮ ಪ್ರೀತಿಯ ರಾಮು ಚಿತ್ರದ ಸ್ಟಿಲ್
'ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಕ್ಷಮೆಯಿರಲಿ': ನಟ Darshan ವಿಡಿಯೊ ಸಂದೇಶ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com