
ಮುಂಬೈ: ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ತಮ್ಮ 544 ನೇ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದು, ಚಿತ್ರದಲ್ಲಿ ಪ್ಯಾನ್-ಇಂಡಿಯಾ ಸ್ಟಾರ್ ಪ್ರಭಾಸ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಖ್ಯಾತ ಚಲನಚಿತ್ರ ನಿರ್ದೇಶಕ ಹನು ರಾಘವಪುಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಚಿತ್ರ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ.
ಈ ಕುರಿತು ಗುರುವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಭಾಸ್ ಅವರನ್ನು ಅಪ್ಪಿಕೊಂಡಿರುವ ಫೋಟೊ ಇರುವ ಪೋಸ್ಟ್ ಹಂಚಿಕೊಂಡಿರುವ ಖೇರ್, 'ಘೋಷಣೆ: ಭಾರತೀಯ ಚಿತ್ರರಂಗದ ಬಾಹುಬಲಿ ಏಕೈಕ ನಟ ಪ್ರಭಾಸ್ ಜೊತೆಗೆ ನಾನು ನಟಿಸುತ್ತಿರುವುದಕ್ಕೆ ಸಂತೋಷವಾಗಿದೆ. ಇದು ನನ್ನ 544ನೇ ಚಿತ್ರವಾಗಿದ್ದು, ಇನ್ನೂ ಈ ಚಿತ್ರಕ್ಕೆ ಹೆಸರಿಟ್ಟಿಲ್ಲ' ಎಂದು ಬರೆದಿದ್ದಾರೆ.
ಖೇರ್ ಅವರು ಚಿತ್ರದ ನಿರ್ದೇಶಕ ಮತ್ತು ಛಾಯಾಗ್ರಾಹಕರನ್ನು ಶ್ಲಾಘಿಸಿದರು. 'ಚಿತ್ರವನ್ನು ಅತ್ಯಂತ ಪ್ರತಿಭಾವಂತ ಹನು ರಾಘವಪುಡಿ ನಿರ್ದೇಶಿಸಿದ್ದಾರೆ! ಮತ್ತು ಮೈತ್ರಿ ಮೂವಿ ಮೇಕರ್ಸ್ ತಂಡವು ನಿರ್ಮಿಸುತ್ತಿದೆ. ನನ್ನ ಆತ್ಮೀಯ ಸ್ನೇಹಿತ ಮತ್ತು ಪ್ರತಿಭಾವಂತ ಸುದೀಪ್ ಚಟರ್ಜಿ ಅವರ ಛಾಯಾಗ್ರಹಣವಿದೆ. ಡಾಪ್! ಕಮಾಲ್ ಕಿ ಕಹಾನಿ ಹೈ ಔರ್ ಕ್ಯಾ ಚಾಹಿಯೇ ಲೈಫ್ ಮೇನ್ ದೋಸ್ತಾನ್! ಎಂದಿದ್ದಾರೆ.
ಅನುಪಮ್ ಖೇರ್ ಅವರು ಕಂಗನಾ ರಣಾವತ್ ನಿರ್ದೇಶಿಸಿ ನಟಿಸಿದ್ದ 'ಎಮರ್ಜೆನ್ಸಿ' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ 1975-77ರ ತುರ್ತು ಪರಿಸ್ಥಿತಿಯ ವೇಳೆಯ ರಾಜಕೀಯ ಪ್ರಕ್ಷುಬ್ಧತೆಯನ್ನು ಚಿತ್ರಿಸುತ್ತದೆ.
Advertisement