Eddelu Manjunatha 2
'ಎದ್ದೇಳು ಮಂಜುನಾಥ 2' ಚಿತ್ರ

'ಎದ್ದೇಳು ಮಂಜುನಾಥ 2' ಚಿತ್ರಕ್ಕೆ ಗುರುಪ್ರಸಾದ್‌ ಪತ್ನಿಯಿಂದಲೇ ತಡೆ; ಸಾವಿಗೂ ಮುನ್ನ ಪತ್ನಿ ಜೊತೆ ಗುರು ಜಗಳದ ಆಡಿಯೋ ವೈರಲ್!

ನಿರ್ದೇಶಕ ದಿವಂಗತ ಗುರು ಪ್ರಸಾದ್ ಕೊನೆಯ ಸಿನಿಮಾ ರಿಲೀಸ್‌ಗೆ ಸಮಸ್ಯೆ ಎದುರಾಗಿದ್ದು, ರಿಲೀಸ್‌ಗೆ ಗುರುಪ್ರಸಾದ್‌ ಪತ್ನಿ ಸುಮಿತ್ರಾ ಅವರೇ ತಡೆ ಮಾಡಿದ್ದಾರೆ.
Published on

ಬೆಂಗಳೂರು: ನಟ, ನಿರ್ದೇಶಕ ಗುರುಪ್ರಸಾದ್‌ ಅವರ ಕೊನೆಯ ಸಿನಿಮಾ ʼಎದ್ದೇಳು ಮಂಜುನಾಥ2ʼ ಚಿತ್ರಕ್ಕೆ ಅವರ ಪತ್ನಿಯೇ ಕೋರ್ಟ್‌ ಮೆಟ್ಟಿಲೇರಿ ತಡೆ ತಂದಿದ್ದಾರೆ.

ಹೌದು.. ನಟ, ನಿರ್ದೇಶಕ ಗುರುಪ್ರಸಾದ್‌ ಅವರ ಕೊನೆಯ ಸಿನಿಮಾ ʼಎದ್ದೇಳು ಮಂಜುನಾಥʼಕ್ಕೆ ತಡೆಯಾಜ್ಞೆ ಸಿಕ್ಕಿದ್ದು, ಗುರು ಸಿನಿಮಾ ರಿಲೀಸ್‌ ಮಾಡದಂತೆ ಪತ್ನಿಯೇ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇನ್ನೊಂದು ಕಡೆ ಗುರು ಜೊತೆಗೆ ಸುಮಿತ್ರಾ ಮಾತನಾಡಿರೋ ಆಡಿಯೋ ಫುಲ್‌ ವೈರಲ್‌ ಆಗ್ತಿದೆ. ನಿರ್ದೇಶಕ ದಿವಂಗತ ಗುರು ಪ್ರಸಾದ್ ಕೊನೆಯ ಸಿನಿಮಾ ರಿಲೀಸ್‌ಗೆ ಸಮಸ್ಯೆ ಎದುರಾಗಿದ್ದು, ರಿಲೀಸ್‌ಗೆ ಗುರುಪ್ರಸಾದ್‌ ಪತ್ನಿ ಸುಮಿತ್ರಾ ಅವರೇ ತಡೆ ಮಾಡಿದ್ದಾರೆ.

ನಾಳೆ ʼಎದ್ದೇಳು ಮಂಜುನಾಥʼ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಗುರುಪ್ರಸಾದ್​ ಪತ್ನಿ ಸುಮಿತ್ರಾ ಅವರು ಸಿನಿಮಾ ರಿಲೀಸ್​ ಮಾಡದಂತೆ ಸ್ಟೇ ತಂದಿದ್ದಾರೆ. ಗುರು ಪ್ರಸಾದ್ ಪತ್ನಿ ನಡೆಗೆ ನಿರ್ಮಾಪಕರು ಆಕ್ರೋಶಗೊಂಡಿದ್ದಾರೆ.

Eddelu Manjunatha 2
ಗುರುಪ್ರಸಾದ್ ನಿರ್ದೇಶಿಸಿ ನಟಿಸಿರುವ ಕೊನೆಯ ಚಿತ್ರ 'ಎದ್ದೇಳು ಮಂಜುನಾಥ 2' ಟೀಸರ್ ಬಿಡುಗಡೆ

ನಿರ್ಮಾಪಕರು ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ಚಿತ್ರ ನಿರ್ಮಾಪಕ ರಮೇಶ್, 'ಎಲ್ಲವೂ ಅಂದುಕೊಂಡಂತಾಗಿದ್ರೆ ಅದ್ದೂರಿಯಾಗಿ ಕೊನೆಯ ಸಿನಿಮಾ ರಿಲೀಸ್‌ ಮಾಡಬಹುದಿತ್ತು. ಗುರುಪ್ರಸಾದ್ ಅವರಿಗೆ ಗೌರವ ಕೊಡುವಂತೆ ಈ ಸಿನಿಮಾ ರಿಲೀಸ್ ಮಾಡಬೇಕಿತ್ತು. ಕೆಲವು ವಾರಗಳ ಹಿಂದೆ ನಾಲ್ಕು ಲಕ್ಷ ರೂಪಾಯಿ ಹಣ ಕೊಡಿ ಎಂದು ಸುಮಿತ್ರಾ ಹೇಳಿದ್ದರು. ನಾನು ಕೊಟ್ಟಿರಲಿಲ್ಲ. ಈ ಸಿನಿಮಾಕ್ಕೋಸ್ಕರ ನಾನು ಗುರುಪ್ರಸಾದ್‌ಗೆ 40 ಲಕ್ಷ ರೂಪಾಯಿ ಕೊಟ್ಟಿದ್ದೆ. ಆದರೆ ಅವರು ಸಾಯುವ ಮುನ್ನ ಸಿನಿಮಾ ಫುಟೇಜ್‌ ಡಿಲಿಟ್‌ ಮಾಡಿ ಸತ್ತಿದ್ದಾರೆ. ನಾವು ತುಂಬಕಷ್ಟಪಟ್ಟು ಫುಟೇಜ್‌ ರಿಕವರಿ ಮಾಡಿದೆವು. ಈ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿ ಚರ್ಚೆ ನಡೆದು ಈ ಸಿನಿಮಾ ಲಾಭದಲ್ಲಿ 51% ಸುಮಿತ್ರಾಗೆ ನೀಡಲಾಗುವುದು ಎಂದು ಕೂಡ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಈಗ ಹಣದ ಸಂಬಂಧ ಸುಮಿತ್ರಾ ಅವರು ಈ ರೀತಿ ಸ್ಟೇ ತಂದಿದ್ದಾರೆ ಎಂದು ಹೇಳಿದ್ದಾರೆ.

ನಾಳೆ ರಿಲೀಸ್ ಸಾಧ್ಯತೆ

ಮೂಲಗಳ ಪ್ರಕಾರ ಗುರು ಪತ್ನಿ ಸುಮಿತ್ರಾ ಅವರು ಸಿನಿಮಾದ ನಿರ್ಮಾಪಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಹಕ್ಕನ್ನು ಮೊದಲು ಮೈಸೂರ್ ರಮೇಶ್ ಅವರಿಗೆ ಗುರು ಪ್ರಸಾದ್‌ ಬರೆದುಕೊಟ್ಡಿದ್ದರು. ಆ ನಂತರ ಸುಮಿತ್ರಾ ಅವರು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ. ಆದರೆ ಇಂದು ನಿರ್ಮಾಪಕರಾದ ರವಿ ದೀಕ್ಷಿತ್, ಮೈಸೂರ್ ರಮೇಶ್ ಕೂಡ ಕೋರ್ಟ್ ಮೆಟ್ಟಿಲೇರಿ ಕೋರ್ಟ್‌ ಮೆಟ್ಟಿಲೇರಿದ್ದು, ನಾಳೆ ರಿಲೀಸ್‌ ಮಾಡೋ ಪ್ರಯತ್ನದಲ್ಲಿದ್ದಾರೆ.

ಸಾವಿಗೂ ಹಿಂದಿನ ದಿನ ಮಾತುಕತೆ ವೈರಲ್

ಸಾವಿಗೂ ಒಂದು ದಿನ ಮೊದಲು ಗುರುಪ್ರಸಾದ್‌ ಹಾಗೂ ಅವರ ಪತ್ನಿ ಸುಮಿತ್ರಾ ನಡುವೆ ನಡೆದ ಮಾತುಕತೆ ಆಡಿಯೋ ಈಗ ವೈರಲ್‌ ಆಗ್ತಿದೆ. ಸಾವಿನ ಮುನ್ನ ಪತ್ನಿ ಜೊತೆಗೆ ಗುರುಪ್ರಸಾದ್ ಮಾತಿನ ಚಕಮಕಿ ನಡೆದಿತ್ತು. “ನಿನಗೆ, ಮಗುಗೆ ಏನಾದ್ರು ಮಾಡಿಟ್ಟು ಸಾಯ್ತಿನಿ. ನಾನು ಒಂದು ರೂಪಾಯಿಗೂ ಒದ್ದಾಡ್ತಿದೀನಿ. ಸ್ವಲ್ಪ ತಾಳ್ಮೆಯಿಂದ ಇರಬೇಕು.

ನಿಮ್ಮ ಪ್ಲ್ಯಾನ್‌ ಏನು ಅಂತ ನನಗೆ ಗೊತ್ತಿದೆ. ಬ್ಯುಸಿನೆಸ್‌ ಮಾಡಿ ಹಣ ಬಂದ್ಮೇಲೆ ನಿಮಗೆ ಕೊಟ್ಟು ಸಾಯ್ತೀನಿ. ನನ್ನ ಆರೋಗ್ಯ ಕೂಡ ಚೆನ್ನಾಗಿಲ್ಲ” ಅಂತ ಗುರುಪ್ರಸಾದ್ ಅವರು ಆಡಿಯೋದಲ್ಲಿ ಹೇಳಿದ್ದರು. ಇನ್ನೊಂದು ಕಡೆ ಅವರ ಪತ್ನಿ “ನಿಮಗೆ ತೊಂದರೆ ಕೊಡಬಾರದು ಅಂತ ನಾನು ಜಗಳ ಆಡದೆ ಹೊರಗಡೆ ಬಂದಿದ್ದೇನೆ. ನೀವು ಮಗುಗೆ ಮಾಡಿ. ನಿಮಗೆ ತೊಂದರೆ ಕೊಡೋಕೆ ಇಷ್ಟ ಇಲ್ಲ” ಎಂದು ಹೇಳಿರೋದು ಆಡಿಯೋದಲ್ಲಿದೆ.

ಗುರುಪ್ರಸಾದ್ ಸಾವಿನ ಮಾತು ಸ್ವತಃ ತಾವೇ ಈ ಆಡಿಯೋ ರೆಕಾರ್ಡ್ ಮಾಡಿ ತಮ್ಮ ಆಪ್ತರಿಗೆ ಕಳಿಸಿದ್ರಂತೆ. ಈಗ ಪತ್ನಿ ಸುಮಿತ್ರಾ ಸಿನಿಮಾಗೆ ಸ್ಟೇ ತಂದಿರೋ ಹಿನ್ನೆಲೆ ಸದ್ಯ ಅವರ ಆಪ್ತ ಬಳಗ ಗುರುಪ್ರಸಾದ್ ಸಾವಿನ ಸತ್ಯ ಗೊತ್ತಾಗಲಿ ಅಂತ ಆಡಿಯೋ ರಿಲೀಸ್ ‌ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com