'ಭೈರತಿ ರಣಗಲ್' ತಮಿಳು, ಮಲಯಾಳಂ ಆವೃತ್ತಿ ಒಟಿಟಿಯಲ್ಲಿ ಬಿಡುಗಡೆ; Sun NXT ನಲ್ಲಿ ಸ್ಟ್ರೀಮಿಂಗ್!

ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಾಣದ ಭೈರತಿ ರಣಗಲ್ ನವೆಂಬರ್ 29 ರಂದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.
A Still From  Bhairathi Ranagal Movie
ಭೈರತಿ ರಣಗಲ್ ಸಿನಿಮಾ ಸ್ಟಿಲ್
Updated on

ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಟ ಶಿವರಾಜ್‌ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಇದೀಗ ತೆಲುಗು ಮತ್ತು ಮಲಯಾಳಂ ಆವೃತ್ತಿಯಲ್ಲಿ ಶುಕ್ರವಾರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ನರ್ತನ್ ನಿರ್ದೇಶಿಸಿದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದ್ದು, ವಿಶ್ವದಾದ್ಯಂತ 24 ಕೋಟಿ ರೂ. ಗಳಿಕೆ ಕಂಡಿದೆ.

ಸನ್ ನೆಕ್ಸ್ಟ್ ವೇದಿಕೆಯಲ್ಲಿ ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಪ್ರದರ್ಶನ ಕಾಣುತ್ತಿದೆ. ನರ್ತನ್ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಾಹುಲ್ ಬೋಸ್, ರುಕ್ಮಿಣಿ ವಸಂತ್, ದೇವರಾಜ್, ಅವಿನಾಶ್, ಛಾಯಾ ಸಿಂಗ್, ಶಬೀರ್ ಕಲ್ಲರಕ್ಕಲ್, ಶ್ರೀಮುರಳಿ, ಮಧು ಗುರುಸ್ವಾಮಿ, ಮತ್ತು ಬಾಬು ಹಿರಣ್ಣಯ್ಯ ಕೂಡ ನಟಿಸಿದ್ದಾರೆ.

ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಾಣದ ಭೈರತಿ ರಣಗಲ್ ನವೆಂಬರ್ 29 ರಂದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

ಶ್ರೀಮುರಳಿ ಮತ್ತು ಶಿವರಾಜ್‌ಕುಮಾರ್ ನಟಿಸಿದ್ದ ಹಿಟ್ ಚಿತ್ರ ಮುಫ್ತಿ (2017)ಯ ಪ್ರೀಕ್ವೆಲ್ ಭೈರತಿ ರಣಗಲ್ ಸಿನಿಮಾ ಕ್ರಿಸ್‌ಮಸ್ ಸಂದರ್ಭದಲ್ಲಿ ಬುಧವಾರ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com