
ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮ ಕಥೆ' ಚಿತ್ರದ ಅಭಿನಯಕ್ಕಾಗಿ ಮೆಚ್ಚುಗೆ ಪಡೆದ ನಟ ವಿನಯ್ ರಾಜ್‌ಕುಮಾರ್, ಇತ್ತೀಚೆಗಷ್ಟೇ ಬಿಡುಗಡೆಯಾದ ಪೆಪೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ವಿನಯ್ ರಾಜ್‌ಕುಮಾರ್, ಗ್ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ, ಪ್ರಭು ಮುಂಡ್ಕೂರ್ ಮತ್ತು ರೋಶಿನಿ ಪ್ರಕಾಶ್ ಅಭಿನಯದ ಮರ್ಫಿ ಚಿತ್ರ ನಿರ್ದೇಶಕ ಬಿಎಸ್‌ಪಿ ವರ್ಮಾರೊಂದಿಗೆ ವಿನಯ್ ರಾಜ್‌ಕುಮಾರ್ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಮರ್ಫಿ ಚಿತ್ರವು ವಿಮರ್ಷಾತ್ಮಕವಾಗಿ ಮೆಚ್ಚುಗೆ ಗಳಿಸಿತು ಮತ್ತು ಒಟಿಟಿ ವೇದಿಕೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಬಿಎಸ್‌ಪಿ ವರ್ಮಾ ಅವರು ಮೊದಲ ಬಾರಿಗೆ ವಿನಯ್ ರಾಜ್‌ಕುಮಾರ್ ಅವರೊಂದಿಗೆ ಚಿತ್ರ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಈಗಾಗಲೇ ಈ ಪ್ರಾಜೆಕ್ಟ್ ಕುರಿತು ಹಲವಾರು ಚರ್ಚೆಗಳನ್ನು ನಡೆಸಿದ್ದು, ವರ್ಮಾ ಅವರ ವಿಶಿಷ್ಟ ಕಥೆಯ ಬಗ್ಗೆ ವಿನಯ್ ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ.
ಸ್ಕ್ರಿಪ್ಟ್ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ವಿನಯ್ ಅವರ ವ್ಯಕ್ತಿತ್ವದೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಮತ್ತು ವಿವಿಧ ಪ್ರಕಾರಗಳ ಪಾತ್ರಗಳಲ್ಲಿ ನಟಿಸುವ ಅವರ ಆಯ್ಕೆಗೆ ಅನುವು ಮಾಡಿಕೊಡುತ್ತದೆ. ಈ ಚಿತ್ರವು ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಸ್ಕ್ರಿಪ್ಟ್ ಅನ್ನು ಇನ್ನಷ್ಟು ಉತ್ತಮಗೊಳಿಸಲಾಗುತ್ತಿದೆ. ನಿರ್ದೇಶಕ ಮತ್ತು ನಟರಿಂದ ಅಂತಿಮ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ.
Advertisement