ಗುರುನಂದನ್ ನಟನೆಯ 'ರಾಜು ಜೇಮ್ಸ್ ಬಾಂಡ್' ಬಿಡುಗಡೆಗೆ ದಿನಾಂಕ ನಿಗದಿ; ಕನ್ನಡ, ಹಿಂದಿಯಲ್ಲಿ ತೆರೆಗೆ

ಪ್ರೇಮಿಗಳ ದಿನದಂದು ತೆರೆಗೆ ಬರಲಿದೆ ಗುರುನಂದನ್ ನಟನೆಯ ಚಿತ್ರ
ಗುರುನಂದನ್ ನಟನೆಯ 'ರಾಜು ಜೇಮ್ಸ್ ಬಾಂಡ್' ಬಿಡುಗಡೆಗೆ ದಿನಾಂಕ ನಿಗದಿ; ಕನ್ನಡ, ಹಿಂದಿಯಲ್ಲಿ ತೆರೆಗೆ
Updated on

ಫಸ್ಟ್ ರ್ಯಾಂಕ್ ರಾಜು ಚಿತ್ರದ ನಟನೆಗಾಗಿ ಗಮನ ಸೆಳೆದಿದ್ದ ನಟ ಗುರುನಂದನ್ ಇದೀಗ 'ರಾಜು ಜೇಮ್ಸ್ ಬಾಂಡ್‌' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ-ಥ್ರಿಲ್ಲರ್‌ ಅಂಶಗಳನ್ನೊಳಗೊಂಡ ಈ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರವು ಫೆಬ್ರುವರಿ 14ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ.

ಮಂಜುನಾಥ್ ವಿಶ್ವಕರ್ಮ ಮತ್ತು ಕಿರಣ್ ಭರ್ತೂರ್ ಅವರ ಬ್ಯಾನರ್ ಅಡಿಯಲ್ಲಿ ಕರ್ಮ ಬ್ರದರ್ಸ್ ನಿರ್ಮಿಸಿರುವ 'ರಾಜು ಜೇಮ್ಸ್ ಬಾಂಡ್' ಅಮೆರಿಕ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿ ಜಾಗತಿಕವಾಗಿ ಬಿಡುಗಡೆಗೆ ಸಿದ್ಧವಾಗಿದೆ. 'ಹಿಂದಿ ಭಾಷೆಯಲ್ಲೇ ಹಾಡುಗಳನ್ನು ಒಳಗೊಂಡಿರುವ ಹಿಂದಿ-ಡಬ್ಬಿಂಗ್ ಆವೃತ್ತಿಯಿಂದಾಗಿ ಚಿತ್ರವು ಜಾಗತಿಕವಾಗಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುತ್ತದೆ' ಎಂದು ನಿರ್ದೇಶಕರು ಹೇಳುತ್ತಾರೆ.

ಎರಡನೇ ಹಾಡು 'ಕಣ್ಮಣಿ' ಬಿಡುಗಡೆಗೊಳಿಸಿ ಮಾತನಾಡಿದ ನಿರ್ಮಾಪಕ ಕಿರಣ್ ಭರ್ತೂರ್, ಚಿತ್ರವು ದ್ವಿ-ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದರು. 'ರಾಜು ಜೇಮ್ಸ್ ಬಾಂಡ್' ಅನ್ನು ಹಿಂದಿಯಲ್ಲಿ ಸರಿಯಾಗಿ ಡಬ್ ಮಾಡಲಾಗಿದೆ. ಹಿಂದಿ ಗಾಯಕರೇ ಹಾಡಿಗೆ ಧ್ವನಿಯಾಗಿದ್ದಾರೆ. ಹೆಚ್ಚುವರಿಯಾಗಿ, ನಾವು ನೇಪಾಳಿಯಲ್ಲಿ ಬಿಡುಗಡೆ ಮಾಡಲು ಚರ್ಚೆಯಲ್ಲಿದ್ದೇವೆ ಮತ್ತು ಉತ್ತರ ಭಾರತದಲ್ಲಿ ಚಿತ್ರ ಬಿಡುಗಡೆಯ ಹಕ್ಕುಗಳನ್ನು ಈಗಾಗಲೇ ಮಾರಾಟ ಮಾಡಿದ್ದೇವೆ' ಎಂದರು.

ಸಾಂಕ್ರಾಮಿಕ ರೋಗದಿಂದಾಗಿ ಚಿತ್ರವು ತಡವಾಯಿತು. ಚಿತ್ರ ತಾಜಾ, ನಗು ತುಂಬಿದ ಅನುಭವವನ್ನು ನೀಡುತ್ತದೆ. 136 ನಿಮಿಷಗಳ ರನ್‌ಟೈಮ್‌ನೊಂದಿಗೆ, ಚಿತ್ರತಂಡ ಕನಿಷ್ಠ 40 ನಿಮಿಷಗಳ ಶುದ್ಧ ಹಾಸ್ಯದ ಭರವಸೆ ನೀಡುತ್ತಾರೆ. ಚಿತ್ರದ ತಾರಾಗಣದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ಮೃದುಲಾ, ರವಿಶಂಕರ್, ಅಚ್ಯುತ್ ಕುಮಾರ್ ಮತ್ತು ಜೈ ಜಗದೀಶ್ ಇದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.

ಗುರುನಂದನ್ ನಟನೆಯ 'ರಾಜು ಜೇಮ್ಸ್ ಬಾಂಡ್' ಬಿಡುಗಡೆಗೆ ದಿನಾಂಕ ನಿಗದಿ; ಕನ್ನಡ, ಹಿಂದಿಯಲ್ಲಿ ತೆರೆಗೆ
ಗುರುನಂದನ್ ಹೊಸ ಗೆಟಪ್: ರಾಜು ಜೇಮ್ಸ್ ಬಾಂಡ್

ರಾಜು ಜೇಮ್ಸ್ ಬಾಂಡ್ ಹೊರತುಪಡಿಸಿ, ನಟ ಗುರುನಂದನ್ 'ಫಾರೆಸ್ಟ್' ಮತ್ತು 'ಹ್ಯಾಪಿ ಎಂಡಿಂಗ್' ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ತಮ್ಮ ಹೋಮ್ ಬ್ಯಾನರ್ ಮಂದಿ ಮನೆ ಟಾಕೀಸ್ ಅಡಿಯಲ್ಲಿ ತಮ್ಮ ಚೊಚ್ಚಲ ನಿರ್ಮಾಣವಾದ 'ಮಿಸ್ಟರ್ ಜಾಕ್‌'ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com