
ಯುವ ರಾಜ್‌ಕುಮಾರ್ ಅವರ ಎರಡನೇ ಸಿನಿಮಾ, ರೋಹಿತ್ ಪದಕಿ ನಿರ್ದೇಶನದ ಎಕ್ಕ ಚಿತ್ರ ಸದ್ಯ ನಿರ್ಮಾಣ ಹಂತದಲ್ಲಿದೆ. ಈ ಚಿತ್ರವು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ (ಜಯಣ್ಣ ಮತ್ತು ಬೋಗೇಂದ್ರ), ಮತ್ತು KRG ಸ್ಟುಡಿಯೋಸ್ (ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್) ನಡುವಿನ ಸಹಯೋಗವಾಗಿದೆ.
ಆರಂಭದಲ್ಲಿ ಇಬ್ಬರು ನಾಯಕಿಯರು ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರತಂಡ ಘೋಷಿಸಿತ್ತು. ನಟಿ ಸಂಪದಾ ಈಗಾಗಲೇ ನಾಯಕಿಯಾಗಿ ಆಯ್ಕೆಯಾಗಿದ್ದರೆ, ಚಿತ್ರತಂಡ ಇದೀಗ ಸಂಜನಾ ಆನಂದ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ.
ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿನ ಪಾತ್ರದಿಂದ ಗಮನ ಸೆಳೆದ ಸಂಜನಾ ನಂತರ ದುನಿಯಾ ವಿಜಯ್ ಅವರೊಂದಿಗೆ ಸಲಗ ಚಿತ್ರದಲ್ಲಿ ನಟಿಸಿದರು. ದಿನಕರ್ ತೂಗುದೀಪ ನಿರ್ದೇಶನದ ಮುಂಬರುವ ರಾಯಲ್ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದು, ನಟ ವಿರಾಟ್ ಅವರಿಗೆ ಜೋಡಿಯಾಗಿದ್ದಾರೆ. ಈ ಚಿತ್ರ ಜನವರಿ 24 ರಂದು ಬಿಡುಗಡೆಯಾಗಲಿದೆ. ಈಗ ಸಂಜನಾ ಎಕ್ಕ ಚಿತ್ರತಂಡ ಸೇರಲು ಸಿದ್ಧವಾಗಿದ್ದಾರೆ. ಯುವ ರಾಜಕುಮಾರ್ ಅವರೊಂದಿಗೆ ಮೊದಲ ಬಾರಿಗೆ ಜೋಡಿಯಾಗಲಿದ್ದಾರೆ.
ಎಕ್ಕ ಬೆಂಗಳೂರಿನ ಕರಾಳ ಮತ್ತು ಅಪಾಯಕಾರಿ ಭೂಗತ ಜಗತ್ತಿನ ಓರ್ವ ವ್ಯಕ್ತಿಯ ಪ್ರಯಾಣದ ಕಥೆಯಾಗಿದೆ. ಚಿತ್ರದಲ್ಲಿ ಅತುಲ್ ಕುಲಕರ್ಣಿ, ಶ್ರುತಿ ಕೃಷ್ಣ ಮತ್ತು ರಾಹುಲ್ ದೇವ್ ಶೆಟ್ಟಿ ಕೂಡ ಇದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.
Advertisement