'ರುದ್ರ ಗರುಡ ಪುರಾಣ' ಟಿಪಿಕಲ್ ಕಮರ್ಷಿಯಲ್ ಸಿನಿಮಾ ಅಲ್ಲ: ಪ್ರಿಯಾಂಕಾ ಕುಮಾರ್

ಚಿತ್ರವು ಜನವರಿ 24ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಿಯಾಂಕಾ ಕುಮಾರ್ - ರುದ್ರ ಗರುಡ ಪುರಾಣ ಚಿತ್ರದ ಸ್ಟಿಲ್
ಪ್ರಿಯಾಂಕಾ ಕುಮಾರ್ - ರುದ್ರ ಗರುಡ ಪುರಾಣ ಚಿತ್ರದ ಸ್ಟಿಲ್
Updated on

ಮಾಡೆಲ್-ನಟಿ ಪ್ರಿಯಾಂಕಾ ಕುಮಾರ್ ಅವರು 'ಬ್ಯಾಡ್ ಮ್ಯಾನರ್ಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಇದೀಗ ಕೆಎಸ್ ನಂದೀಶ್ ನಿರ್ದೇಶನದ, ನಟ ರಿಷಿ ಅಭಿನಯದ ರುದ್ರ ಗರುಡ ಪುರಾಣದ ಭಾಗವಾಗಿದ್ದಾರೆ.

'ನಿರ್ದೇಶಕ ಕೆಎಸ್ ನಂದೀಶ್ ಅವರು ನಾಯಕಿಯನ್ನು ಹುಡುಕುತ್ತಿದ್ದರು. ಚಿತ್ರಕ್ಕೆ ನಾಯಕಿಯಾಗುವ ಅದೃಷ್ಟ ನನ್ನದಾಯಿತು. ರುದ್ರ ಗರುಡ ಪುರಾಣವು ಟಿಪಿಕಲ್ ಕಮರ್ಷಿಯಲ್ ಎಂಟರ್‌ಟೈನರ್ ಅಲ್ಲ ಎಂಬುದೇ ನನ್ನ ಪಾತ್ರದ ಬಗ್ಗೆ ನನ್ನನ್ನು ಹೆಚ್ಚು ಉತ್ಸುಕಗೊಳಿಸಿತು. ಇದು ಒಂದು ಮಿಸ್ಟರಿ ಥ್ರಿಲ್ಲರ್, ಕನ್ನಡ ಚಿತ್ರರಂಗದಲ್ಲಿ ಅಪರೂಪವಾಗಿರುವ ಪ್ರಕಾರವಾಗಿದೆ. ಇಂತಹ ಚಿತ್ರ ನನಗೆ ಇಷ್ಟವಾಗುತ್ತದೆ' ಎಂದಿದ್ದಾರೆ ಪ್ರಿಯಾಂಕಾ.

'ನಾನು ಥ್ರಿಲ್ಲರ್‌ಗಳನ್ನು ನೋಡುವುದನ್ನು ಆನಂದಿಸುತ್ತೇನೆ ಮತ್ತು ಅಂತಹ ಚಿತ್ರವೊಂದರ ಭಾಗವಾಗಿರುವುದು ನನಗೆ ಖುಷಿ ನೀಡಿದೆ. ಈ ಪ್ರಕಾರದ ಸಿನಿಮಾಗಳಲ್ಲಿ ಸ್ತ್ರೀ ಪಾತ್ರಗಳಿಗೆ ಹೆಚ್ಚಿನ ಮಾನ್ಯತೆ ಇರುವುದಿಲ್ಲ. ಆದರೆ, ರುದ್ರ ಗರುಡ ಪುರಾಣದಲ್ಲಿ ನನ್ನ ಪಾತ್ರವು ರಿಷಿ ನಿರ್ವಹಿಸಿದ ರುದ್ರ ಪಾತ್ರದ ಬಗ್ಗೆ ಅನುಮಾನಗಳನ್ನು ಹೊಂದಿರುತ್ತದೆ. ನಾನು ಆತನನ್ನು ತನಿಖೆ ಮಾಡಲು ಪ್ರಾರಂಭಿಸುತ್ತೇನೆ ಮತ್ತು ನಿರ್ದೇಶಕರು ಕಥೆಗೆ ಅನನ್ಯ ಸ್ಪರ್ಶವನ್ನು ಸೇರಿಸಿದ್ದಾರೆ' ಎಂದು ಅವರು ಸೇರಿಸುತ್ತಾರೆ.

ತಮ್ಮ ಭಾಗಗಳ ಸಂಪೂರ್ಣ ಚಿತ್ರೀಕರಣ ತಮ್ಮ ತವರೂರಾದ ಮೈಸೂರಿನಲ್ಲಿ ನಡೆದಿರುವುದಕ್ಕೆ ಸಖತ್ ಥ್ರಿಲ್ ಆಗಿದ್ದಾರೆ ಪ್ರಿಯಾಂಕಾ. 'ಇದು ವೈಯಕ್ತಿಕ ಪ್ರಯಾಣದಂತೆ ಭಾಸವಾಯಿತು. ಪ್ರೇಕ್ಷಕರೊಂದಿಗೆ ಚಿತ್ರವನ್ನು ವೀಕ್ಷಿಸಲು ನಾನು ಕಾತರದಿಂದ ಕಾಯುತ್ತಿದ್ದೇನೆ' ಎನ್ನುತ್ತಾರೆ.

ಚಿತ್ರದಲ್ಲಿ ಪ್ರಿಯಾಂಕಾ ಅವರು ಮಧ್ಯಮ ವರ್ಗದ ಕುಟುಂಬದ ಸಾಫ್ಟ್‌ವೇರ್ ಇಂಜಿನಿಯರ್ ದಿವ್ಯಾ ಪಾತ್ರದಲ್ಲಿ ನಟಿಸಿದ್ದಾರೆ. ಆಕೆಯ ಪೋಷಕರು ಮದುವೆಯಾಗುವಂತೆ ಒತ್ತಡ ಹೇರುತ್ತಾರೆ. ಆಕೆ ರುದ್ರನನ್ನು ಭೇಟಿಯಾದಾಗ ಆಕೆಯ ಜೀವನ ತಿರುವು ಪಡೆಯುತ್ತದೆ ಮತ್ತು ಅಲ್ಲಿಂದ ಕಥೆಯು ತೆರೆದುಕೊಳ್ಳುತ್ತದೆ. ನಟ ರಿಷಿ ಅವರೊಂದಿಗೆ ಕೆಲಸ ಮಾಡುವುದು ಕಲಿಕೆಯ ಅನುಭವವಾಗಿತ್ತು. 'ಅವರು ನನ್ನೊಂದಿಗೆ ಹಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ' ಎಂದು ಅವರು ಹೇಳುತ್ತಾರೆ.

ಪ್ರಿಯಾಂಕಾ ಕುಮಾರ್ - ರುದ್ರ ಗರುಡ ಪುರಾಣ ಚಿತ್ರದ ಸ್ಟಿಲ್
ಜನವರಿ 24ಕ್ಕೆ 'ರುದ್ರ ಗರುಡ ಪುರಾಣ' ರಿಲೀಸ್; ಸದ್ಯದ ರಾಜಕೀಯ ವ್ಯವಸ್ಥೆಯನ್ನು ಅಣಕಿಸುವ 'ಹುಕ್ಕ ಎಲ್ಲಿ' ಹಾಡು ಬಿಡುಗಡೆ

ಈಮಧ್ಯೆ, ಪ್ರಿಯಾಂಕಾ ಅವರು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಮನ್ಸೋರೆ ನಿರ್ದೇಶನದ 'ದೂರ ತೀರ ಯಾನ'ದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯು ತಾನು ಭಾಗಿಯಾಗಿರುವ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ. 'ನಟನೆ ನನ್ನ ನಿಜವಾದ ಉತ್ಸಾಹ ಮತ್ತು ದೂರ ತೀರ ಯಾನ ನನಗಿಷ್ಟವಾದ ಸಿನಿಮಾವಾಗಿದೆ. ಸರಿಯಾದ ಅವಕಾಶಕ್ಕಾಗಿ ನಾನು ತಾಳ್ಮೆಯಿಂದ ಕಾಯಲು ಇದು ಒಂದು ಕಾರಣವಾಗಿದೆ. ಮುಂದಿನ ಯೋಜನೆಗಳಲ್ಲಿ, ನಾನು ನಟಿಯಾಗಿ ಬೆಳೆಯಲು ಅನುವು ಮಾಡಿಕೊಡುವ ಪಾತ್ರಗಳನ್ನು ಹುಡುಕುತ್ತೇನೆ' ಎಂದು ಅವರು ಬಹಿರಂಗಪಡಿಸುತ್ತಾರೆ.

ನನಗೆ ಅಭಿನಯ ತುಂಬಾ ಮುಖ್ಯವಾಗಿದೆ. ಅದು ಸಣ್ಣ-ಬಜೆಟ್ ಅಥವಾ ದೊಡ್ಡ ಚಿತ್ರವಾಗಿರಲಿ ನಾನು ಅಭಿನಯಕ್ಕೆ ಮಹತ್ವ ಇರುವುದನ್ನು ನೋಡುತ್ತೇನೆ. ರಂಗ ಶಂಕರ ಥಿಯೇಟರ್‌ನಲ್ಲಿ ನನ್ನ ಸಂಕ್ಷಿಪ್ತ ತರಬೇತಿಯ ವೇಳೆ ನಟನೆಯ ಬಗ್ಗೆ ನನ್ನ ಉತ್ಸಾಹವನ್ನು ನಾನು ಕಂಡುಕೊಂಡೆ. ನಾನು ಧಾರಾವಾಹಿಗಳು ಮತ್ತು ಕೆಲವು ಚಲನಚಿತ್ರಗಳನ್ನು ಮಾಡಿದ್ದರೂ, ನಾನು ಇನ್ನೂ ಕಲಿಯಲು ಬಹಳಷ್ಟು ಇದೆ ಮತ್ತು ರಂಗಭೂಮಿ ನನಗೆ ಉತ್ತಮ ಗುರುವಾಗಿದೆ. ಎರಡು ವರ್ಷಗಳ ಹಿಂದೆ, ನನ್ನ ನಟನಾ ಶೈಲಿ ವಿಭಿನ್ನವಾಗಿತ್ತು. ಇಂದು ನಾನು ಪರದೆಯ ಮೇಲೆ ಮತ್ತು ಹೊರಗೆ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿದ್ದೇನೆ' ಎಂದು ವಿವರಿಸುತ್ತಾರೆ.

ಪ್ರಿಯಾಂಕಾ ಕುಮಾರ್ - ರುದ್ರ ಗರುಡ ಪುರಾಣ ಚಿತ್ರದ ಸ್ಟಿಲ್
ರುದ್ರ ಗರುಡ ಪುರಾಣ ಚಿತ್ರದ ಟೀಸರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com