ಬಾಕ್ಸ್ ಆಫೀಸ್‌ನಲ್ಲಿ ತಗ್ಗಿದ ಪುಷ್ಪ 2 ಅಬ್ಬರ: ಅಲ್ಲು ಅರ್ಜುನ್ ನಟನೆಯ ಚಿತ್ರ ಶೀಘ್ರದಲ್ಲೇ ಥಿಯೇಟರ್‌ಗಳಿಂದ ಎತ್ತಂಗಡಿ?

ಬಾಕ್ಸ್ ಆಫೀಸ್‌ನಲ್ಲಿ ಚೇತರಿಕೆ ಕಾಣುವ ನಿರೀಕ್ಷೆ
ಪುಷ್ಪ 2 ಸಿನಿಮಾದ ಸ್ಟಿಲ್
ಪುಷ್ಪ 2 ಸಿನಿಮಾದ ಸ್ಟಿಲ್
Updated on

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ಈಗಾಗಲೇ ದೇಶದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಚಿತ್ರ ಬಿಡುಗಡೆಯಾಗಿ 40ನೇ ದಿನಕ್ಕೆ ಪುಷ್ಪ 2 ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1,831 ಕೋಟಿ ರೂ. ಗಳಿಸಿದೆ. ಚಿತ್ರ ಬಿಡುಗಡೆಯಾದ ಆರನೇ ವಾರಕ್ಕೆ ಚಿತ್ರದ ಗಳಿಕೆಯಲ್ಲಿ ಗಣನೀಯ ಕುಸಿತ ಕಂಡಿದ್ದು, ಶೀಘ್ರದಲ್ಲೇ ಚಿತ್ರಮಂದಿಗಳಿಂದ ಮರೆಯಾಗಬಹುದು ಎನ್ನಲಾಗಿದೆ.

ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಪುಷ್ಪ 2 ಸಿನಿಮಾ ಬಿಡುಗಡೆಯಾದ ಆರನೇ ವಾರದ ಸೋಮವಾರದಂದು ಬಾಕ್ಸ್ ಆಫೀಸ್‌ನಲ್ಲಿ ಕೇವಲ 1 ಕೋಟಿ ರೂ. ಗಳಿಸಿದೆ. ಚಿತ್ರವು ತೆಲುಗು ಆವೃತ್ತಿಯಲ್ಲಿ 24 ಲಕ್ಷ ರೂ., ಹಿಂದಿಯಲ್ಲಿ 75 ಲಕ್ಷ ರೂ. ಮತ್ತು ತಮಿಳು ಆವೃತ್ತಿಯಲ್ಲಿ 1 ಲಕ್ಷ ರೂ. ಗಳಿಸಿದೆ. ಇದಕ್ಕೂ ಮೊದಲು, ಚಿತ್ರವು ಶುಕ್ರವಾರದಂದು ಸಹ 1.5 ಕೋಟಿ ರೂ.ಗಳನ್ನು ಸಂಗ್ರಹಿಸುವ ಮೂಲಕ ಕಡಿಮೆ ಗಳಿಕೆಯನ್ನು ದಾಖಲಿಸಿತ್ತು.

ಚಿತ್ರವು ತನ್ನ ಆರಂಭಿಕ ವಾರದಲ್ಲಿ 725.8 ಕೋಟಿ ರೂ. ಸಂಗ್ರಹಿಸಿತ್ತು ಮತ್ತು ಅಂದಿನಿಂದ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಹೊಸ ಚಿತ್ರಗಳ ಬಿಡುಗಡೆಯ ಹೊರತಾಗಿಯೂ ಪುಷ್ಪ 2 ಸಿನಿಮಾ ಇಂದಿಗೂ ಎರಡು ಅಂಕಿಗಳ ಗಳಿಕೆಯನ್ನು ಮುಂದುವರೆಸಿದೆ. ಚಿತ್ರ ಬಿಡುಗಡೆಯಾದ ಎರಡನೇ ವಾರದಲ್ಲಿ ಅಂದಾಜು ₹ 264.8 ಕೋಟಿ ಗಳಿಸಿತ್ತು. ಆದರೆ, ಮೂರನೇ ವಾರದಲ್ಲಿ ಇದು ಕುಸಿತ ಕಂಡಿತ್ತು.

ವಿಶ್ವದಾದ್ಯಂತ ₹ 1,831 ಕೋಟಿ ಮತ್ತು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ₹ 1,438 ಕೋಟಿ ಗಳಿಕೆಯೊಂದಿಗೆ ಪುಷ್ಪ 2 ಚಿತ್ರವು ಎಸ್ಎಸ್ ರಾಜಮೌಳಿ ನಿರ್ದೇಶನದ, ಪ್ರಭಾಸ್ ಅಭಿನಯದ ಬಾಹುಬಲಿ 2 ಅನ್ನು ಹಿಂದಿಕ್ಕಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಅಭಿನಯದ ಚಿತ್ರವು ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಸಾಲಿಗೆ ಸೇರಿದೆ. ಇದೀಗ ಅಮೀರ್ ಖಾನ್ ಅಭಿನಯದ ದಂಗಲ್ ದಾಖಲೆಯ ಮೇಲೆ ಕಣ್ಣಿಟ್ಟಿದೆ.

ಪುಷ್ಪ 2 ಸಿನಿಮಾದ ಸ್ಟಿಲ್
ಬಿಡುಗಡೆಯಾಗಿ 4 ವಾರ ಕಳೆದರೂ ಬಾಕ್ಸ್‌ ಆಫೀಸ್‌ನಲ್ಲಿ ನಿಲ್ಲದ 'ಪುಷ್ಪ 2' ಓಟ; ಶೀಘ್ರದಲ್ಲೇ 2,000 ಕೋಟಿ ರೂ ಗಳಿಕೆ?

ಆದಾಗ್ಯೂ, ಬಾಕ್ಸ್ ಆಫೀಸ್‌ನಲ್ಲಿ ಚೇತರಿಕೆ ಕಾಣುವ ನಿರೀಕ್ಷೆ ಇನ್ನೂ ಇದೆ. ಪುಷ್ಪ 2 ಚಿತ್ರತಂಡ ಇತ್ತೀಚೆಗೆ 20 ನಿಮಿಷಗಳ ಹೆಚ್ಚುವರಿ ತುಣುಕನ್ನು ಚಿತ್ರಕ್ಕೆ ಸೇರಿಸುವುದಾಗಿ ಘೋಷಿಸಿದೆ. ಇದನ್ನು ಪುಷ್ಪ 2: ದಿ ರೂಲ್ ರಿಲೋಡೆಡ್ ಎಂದು ಹೆಸರಿಟ್ಟಿದೆ. ಈ ವಿಸ್ತೃತ ಆವೃತ್ತಿಯನ್ನು ಜನವರಿ 11 ರಂದು ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಮಾಡಲು ನಿರ್ಧರಿಸಲಾಗಿದ್ದರೂ, ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಯಿತು. ಇದೀಗ ಜನವರಿ 17ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com