
ಶರಣ್, ಚಿಕ್ಕಣ್ಣ, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್ ಮತ್ತು ಪ್ರಭು ಮುಂಡ್ಕೂರ್ ಅಭಿನಯದ ಹಾರರ್-ಕಾಮಿಡಿ ಛೂ ಮಂತರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಜನವರಿ 10 ರಂದು ಚಿತ್ರವು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕರ್ವ ಚಿತ್ರದ ಖ್ಯಾತಿಯ ನವನೀತ್ ನಿರ್ದೇಶನದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಛೂ ಮಂತರ್ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟ ಶರಣ್, ಇದರ ಕ್ರೆಡಿಟ್ ಅನ್ನು ಪ್ರೇಕ್ಷಕರಿಗೆ ಸಲ್ಲಿಸಿದ್ದಾರೆ. ಚಿತ್ರವನ್ನು ಬಾಕ್ಸ್ ಆಫೀಸ್ ಹಿಟ್ ಆಗಿ ಪರಿವರ್ತಿಸಿದ ಪ್ರೇಕ್ಷಕರ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಛೂ ಮಂತರ್ ತಂಡವು ಕನ್ನಡ ಚಿತ್ರರಂಗದ ದಿಗ್ಗಜರಾದ ನಟ ದ್ವಾರಕೀಶ್ ಮತ್ತು ಡಾ. ವಿಷ್ಣುವರ್ಧನ್ ಅವರನ್ನು ಸನ್ಮಾನಿಸಿದ ವಿಶೇಷ ಕಾರ್ಯಕ್ರಮದಲ್ಲಿ ಈ ಯಶಸ್ಸನ್ನು ಆಚರಿಸಲಾಯಿತು. ಚಿತ್ರವು ಕಮರ್ಷಿಯಲ್ ಯಶಸ್ಸು ಸಾಧಿಸಿರುವುದರ ಜೊತೆಗೆ ನಟ ವಿಷ್ಣುವರ್ಧನ್ ನಟಿಸಿದ್ದ ಜನಪ್ರಿಯ ಕನ್ನಡ ಚಲನಚಿತ್ರ 'ಆಪ್ತಮಿತ್ರ'ಕ್ಕೆ ಸಂಪರ್ಕ ಕಲ್ಪಿಸುತ್ತದೆ. ಚಿತ್ರದ ಸೀಕ್ವೆಲ್ ಛೂ ಮಂತರ್ 2 ಘೋಷಣೆ ಮಾಡಲಾಗಿದ್ದು, ಈಗಾಗಲೇ ಚಿತ್ರದ ಕೆಲಸ ನಡೆಯುತ್ತಿದೆ. ಇದೀಗ ತೀವ್ರ ನಿರೀಕ್ಷೆ ಉಂಟು ಮಾಡಿದೆ.
ಶರಣ್ ಅವರು ರೆಸುಲ್ ಪೂಕುಟ್ಟಿ ಅವರೊಂದಿಗಿನ ಸಹಯೋಗದ ಕುರಿತು ಮಾತನಾಡಿದರು. ಆಸ್ಕರ್ ವಿಜೇತ ಸೌಂಡ್ ಡಿಸೈನರ್ ಆಗಿರುವ ಪೊಕುಟ್ಟಿ ಅವರು ತನ್ನ ಚಲನಚಿತ್ರಗಳನ್ನು ಹೇಗೆ ಆಯ್ಕೆ ಮಾಡಿದರು ಎಂಬುದನ್ನು ಬಹಿರಂಗಪಡಿಸಿದರು. 'ನಿರ್ಮಾಪಕರು ಮೊದಲು ರೆಸುಲ್ ಪೂಕುಟ್ಟಿ ಅವರನ್ನು ಚಿತ್ರಕ್ಕೆ ಕರೆತರುವ ಬಗ್ಗೆ ಪ್ರಸ್ತಾಪಿಸಿದಾಗ, ಇದು ಕೇವಲ ತಮಾಷೆ ಎಂದು ನಾನು ಭಾವಿಸಿದೆ. ಮೊದಲಿಗೆ ನಾನು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಆಶ್ಚರ್ಯವಾಗುವಂತೆ, ನಿರ್ಮಾಪಕರು ನಿಜವಾಗಿಯೂ ರೆಸುಲ್ ಅವರನ್ನು ಸಂಪರ್ಕಿಸಿದ ಚಾಟ್ ಅನ್ನು ನನಗೆ ತೋರಿಸಿದರು. ನಂತರ ಅವರು ಛೂ ಮಂತರ್ ಸಿನಿಮಾ ಒಪ್ಪಿಕೊಂಡರು' ಎಂದು ಶರಣ್ ನೆನಪಿಸಿಕೊಂಡರು.
ರೆಸುಲ್ ಪೂಕುಟ್ಟಿ ಅವರು ತಮ್ಮೆದುರಿಗೆ ಬಂದ ಎಲ್ಲ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದು ನನಗೆ ತಿಳಿಯಿತು. ಒಂದು ಸಿನಿಮಾ ತನ್ನ ಪರಿಣತಿಗೆ ಸಾಕಷ್ಟು ಸ್ಥಳಾವಕಾಶ ನೀಡುತ್ತದೆಯೇ ಮತ್ತು ತನ್ನ ಒಳಗೊಳ್ಳುವಿಕೆ ಅದನ್ನು ನಿಜವಾಗಿಯೂ ವರ್ಧಿಸುತ್ತದೆಯೇ ಎಂಬುದನ್ನು ಅವರು ಮೊದಲು ಪರಿಗಣಿಸುತ್ತಾರೆ. ಛೂ ಮಂತರ್ ಚಿತ್ರದ ಭಾಗಗಳನ್ನು ನೋಡಿದ ನಂತರ, ಅವರು ಅರ್ಥಪೂರ್ಣವಾಗಿ ಕೊಡುಗೆ ನೀಡಬಹುದೆಂಬ ವಿಶ್ವಾಸ ಹೊಂದಿದರು. ಈಗ ನಾವು ಚಿತ್ರದಲ್ಲಿ ಅದರ ಅದ್ಭುತ ಫಲಿತಾಂಶಗಳನ್ನು ನೋಡುತ್ತಿದ್ದೇವೆ' ”ಎಂದು ಶರಣ್ ವಿವರಿಸಿದರು.
ಕಾಮಿಡಿ, ಹಾರರ್ ಮತ್ತು ಅನನ್ಯ ಧ್ವನಿ ವಿನ್ಯಾಸದ ಮಿಶ್ರಣದೊಂದಿಗೆ, ಛೂ ಮಂತರ್ ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಆಕರ್ಷಿಸುವುದನ್ನು ಮುಂದುವರೆಸಿದೆ.
Advertisement