
ಟಗರುಪಲ್ಯ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ನಾಗಭೂಷಣ ಇದೀಗ ತಮ್ಮ ಮುಂದಿನ 'ವಿದ್ಯಾಪತಿ' ಚಿತ್ರ ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ಉಪಾಧ್ಯಕ್ಷ ಸಿನಿಮಾ ಖ್ಯಾತಿಯ ನಟಿ ಮಲೈಕಾ ಟಿ ವಸುಪಾಲ್ ನಾಯಕಿಯಾಗಿರುವ ಈ ಚಿತ್ರ ಏಪ್ರಿಲ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನಟ ಡಾಲಿ ಧನಂಜಯ್ ಮಾಲೀಕತ್ವದ ಡಾಲಿ ಪಿಕ್ಚರ್ಸ್ ವಿಶೇಷ ವಿಡಿಯೋ ಪ್ರಕಟಣೆಯ ಮೂಲಕ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಚಿತ್ರವು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಸಿನಿಮಾವಾಗಿದೆ.
ಚಿತ್ರದಲ್ಲಿ ಕರಾಟೆ ಮಾಸ್ಟರ್ ಆಗಿ ರಂಗಾಯಣ ರಘು ಸೇರಿದಂತೆ ಹಿರಿಯ ನಟರ ತಾರಾಗಣವಿದೆ. ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾದ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ವಿದ್ಯಾಪತಿ ಆ್ಯಕ್ಷನ್, ಕಾಮಿಡಿಯನ್ನು ಒಳಗೊಂಡಿದ್ದು, ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ನೀಡುವ ಭರವಸೆಯಿದೆ.
ಇಕ್ಕಟ್ ಚಿತ್ರದಲ್ಲೂ ನಟ ನಾಗಭೂಷಣ್ ನಟಿಸಿದ್ದರು. ಚಿತ್ರದಲ್ಲಿ ನಟ ನಾಗಭೂಷಣ್ ಕರಾಟೆ ಕಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದು, ಚಿತ್ರಕ್ಕೆ ಮುರಳಿ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ಸಂಯೋಜನೆ, ಮುರುಳಿ ಅವರ ನೃತ್ಯ ನಿರ್ದೇಶನ ಮತ್ತು ಅರ್ಜುನ್ ಮಾಸ್ಟರ್ ಅವರು ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಸಂಯೋಜಿಸಲಿದ್ದಾರೆ.
Advertisement