'ರುದ್ರ ಗರುಡ ಪುರಾಣ' ಕಥೆಯು 17ಎ ಕಾವೇರಿ ಎಕ್ಸ್‌ಪ್ರೆಸ್ ಬಸ್‌ನೊಂದಿಗೆ ಸಂಪರ್ಕ ಹೊಂದಿದೆ: ನಿರ್ದೇಶಕ ಕೆಎಸ್ ನಂದೀಶ್

ಡಿಯರ್ ವಿಕ್ರಮ್ ಚಿತ್ರದ ನಂತರ ನಂದೀಶ್ ಅವರು 'ರುದ್ರ ಗರುಡ ಪುರಾಣ'ವನ್ನು ನಿರ್ದೇಶಿಸಿದ್ದು, ಇದು ಜನವರಿ 24 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ರುದ್ರ ಗರುಡ ಪುರಾಣ ಪೋಸ್ಟರ್
ರುದ್ರ ಗರುಡ ಪುರಾಣ ಪೋಸ್ಟರ್
Updated on

ಸವಾರಿ, ಪೃಥ್ವಿ ಮತ್ತು ಚಂಬಲ್‌ನಂತಹ ಚಿತ್ರಗಳಲ್ಲಿ ನಿರ್ದೇಶಕ ಜೇಕಬ್ ವರ್ಗೀಸ್ ಅವರೊಂದಿಗೆ ಕೆಲಸ ಮಾಡಿದ್ದ ಕೆಎಸ್ ನಂದೀಶ್ ಇದೀಗ ರುದ್ರ ಗರುಡ ಪುರಾಣ ಚಿತ್ರದ ಮೂಲಕ ನಿರ್ದೇಶಕನ ಪ್ರಯಾಣ ಆರಂಭಿಸಿದ್ದಾರೆ. ಇದು ನನಗೆ ಸಿಕ್ಕಿದ ಅತ್ಯುತ್ತಮ ಅವಕಾಶ ಎನ್ನುವ ಅವರು, ಜೇಕಬ್ ಅವರ ಗಮನ ಹೇಗಿರುತ್ತಿತ್ತು ಎಂದರೆ ಪ್ರತಿಯೊಂದು ಅಂಶವು ಎಷ್ಟು ನಿರ್ಣಾಯಕ ಎಂಬುದನ್ನು ನನಗೆ ಕಲಿಸಿತು. ಇದು ನನ್ನದೇ ಆದ ಹಾದಿಯಲ್ಲಿ ನಡೆಯುವ ವಿಶ್ವಾಸ ನೀಡಿತು ಎನ್ನುತ್ತಾರೆ.

ಡಿಯರ್ ವಿಕ್ರಮ್ ಚಿತ್ರದ ನಂತರ ನಂದೀಶ್ ಅವರು 'ರುದ್ರ ಗರುಡ ಪುರಾಣ'ವನ್ನು ನಿರ್ದೇಶಿಸಿದ್ದು, ಇದು ಜನವರಿ 24 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರ 1955 ರಲ್ಲಿ ಇದ್ದಕ್ಕಿಂದ್ದಂತೆ ಕಣ್ಮರೆಯಾಗಿ, ಮೂರು ದಶಕಗಳ ನಂತರ ಮತ್ತೆ ಕಾಣಿಸಿಕೊಂಡ Pan Am Flight 914 ನಿಂದ ಸ್ಫೂರ್ತಿ ಪಡೆದಿದೆ. 'ನನ್ನ ಕಥೆಯು ಈ ನಿಗೂಢದಿಂದ ಸ್ಫೂರ್ತಿ ಪಡೆಯುತ್ತದೆ ಆದರೆ ವಾಸ್ತವದಲ್ಲಿ 17A ಕಾವೇರಿ ಎಕ್ಸ್‌ಪ್ರೆಸ್ ಬಸ್‌ನೊಂದಿಗೆ ಸಂಪರ್ಕ ಹೊಂದಿದೆ. ವಿಮಾನದ ರಹಸ್ಯದ ಕುರಿತು ಚರ್ಚೆಯಾಗುತ್ತಿರುವಾಗ, ನಮ್ಮ ಚಿತ್ರವು ರೋಮಾಂಚಕ ತಿರುವುಗಳೊಂದಿಗೆ ಕ್ರೈಂ, ಸಸ್ಪೆನ್ಸ್‌ನ ನಿರೂಪಣೆಯ ಮೂಲಕ ಪರಿಹಾರವನ್ನು ಒದಗಿಸುತ್ತದೆ' ಎಂದು ಅವರು ವಿವರಿಸುತ್ತಾರೆ.

'ನಟ ರಿಷಿಗೆ ಪೋಲೀಸ್ ಪಾತ್ರ ಮಾಡಲು ಪರಿಪೂರ್ಣ ವ್ಯಕ್ತಿತ್ವವಿತ್ತು. ಅವರ ನಟನಾ ಕೌಶಲ್ಯ ಮತ್ತು ಅವರ ಬಹುಮುಖ ಪ್ರತಿಭೆಯು ಈ ಪಾತ್ರಕ್ಕೆ ಸೂಕ್ತವಾಗಿಸುತ್ತದೆ. ಅವರು ರುದ್ರ ಗರುಡ ಪುರಾಣವನ್ನು ಉನ್ನತೀಕರಿಸುತ್ತಾರೆ ಮತ್ತು ಈ ಚಿತ್ರವು ಅವರ ವೃತ್ತಿಜೀವನವನ್ನು ಉನ್ನತೀಕರಿಸುತ್ತದೆ ಎಂದು ನಾನು ನಂಬುತ್ತೇನೆ' ಎಂದು ಅವರು ಹಂಚಿಕೊಳ್ಳುತ್ತಾರೆ.

ರುದ್ರ ಗರುಡ ಪುರಾಣ ಪೋಸ್ಟರ್
ಜನವರಿ 24ಕ್ಕೆ 'ರುದ್ರ ಗರುಡ ಪುರಾಣ' ರಿಲೀಸ್; ಸದ್ಯದ ರಾಜಕೀಯ ವ್ಯವಸ್ಥೆಯನ್ನು ಅಣಕಿಸುವ 'ಹುಕ್ಕ ಎಲ್ಲಿ' ಹಾಡು ಬಿಡುಗಡೆ

ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ನಟಿಸಿದ್ದಾರೆ. 'ನಿರ್ದೇಶಕನಾಗಿ ನಾನು ಪ್ರೇಕ್ಷಕರ ಸಮಯವನ್ನು ಗೌರವಿಸಲು ಬಯಸುತ್ತೇನೆ. ಏಕೆಂದರೆ, ಎರಡೂವರೆ ಗಂಟೆಗಳನ್ನು ಸಿನಿಮಾ ನೋಡಲು ಮೀಸಲಿಡುವ ಪ್ರೇಕ್ಷಕರು ತೃಪ್ತರಾಗಬೇಕೆಂದು ನಾನು ಬಯಸುತ್ತೇನೆ. ರುದ್ರ ಗರುಡ ಪುರಾಣವು ಅದನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ' ಎಂದು ಅವರು ವಿಶ್ವಾಸದಿಂದ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com