
ಅವನೇ ಶ್ರೀಮನ್ನಾರಾಯಣ ಮತ್ತು ಕಿರಿಕ್ ಪಾರ್ಟಿ ಚಿತ್ರಗಳಿಗೆ ಹೆಸರಾದ ಕನ್ನಡ ಚಿತ್ರ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ, ತೆಲುಗಿನ 'ಹಾಯ್ ನಾನ್ನ' ನಿರ್ದೇಶಕರು ರೀಮೇಕ್ ಹಕ್ಕುಗಳನ್ನು ಪಡೆಯದೆ ತಮ್ಮ 2020ರಲ್ಲಿ ತೆರೆಕಂಡ ಕನ್ನಡದ 'ಭೀಮಸೇನ ನಳಮಹಾರಾಜ' ಚಿತ್ರವನ್ನು ನಕಲು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ತೆಲುಗು ಚಿತ್ರವು ತನ್ನ ಚಿತ್ರದ ಮೂಲ ಕಥೆಯನ್ನು ಮತ್ತು ನಿರೂಪಣೆಯನ್ನು ನೇರವಾಗಿ ನನ್ನ ಚಿತ್ರದಿಂದ ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನಟ ನಾನಿ ಮತ್ತು ಚಿತ್ರ ನಿರ್ದೇಶಕರನ್ನು ಟೀಕಿಸಿದ ಅವರು, 'ರೀಮೇಕ್ ಹಕ್ಕುಗಳನ್ನು ಪಡೆಯದೆ, ಹಾಯ್ ನಾನ್ನ ಚಿತ್ರವನ್ನು ನಮ್ಮ ಮೂಲ ಚಿತ್ರ ಭೀಮಸೇನ ನಳಮಹಾರಾಜ ಚಿತ್ರದಿಂದ ಮಾಡಲಾಗಿದೆ. ಇಂತಹ ಕೆಲಸ ಮಾಡುವುದು ಸರಿಯಾಗಿದೆಯಾ, ನಾನಿ' ಎಂದಿದ್ದಾರೆ.
ನಟ ನಾನಿ ಅವರಿಗೆ ಹಾಯ್ ನಾನ್ನ ಚಿತ್ರವು ವೃತ್ತಿಜೀವನದಲ್ಲಿ ಮಹತ್ವದ ಸಿನಿಮಾವಾಗಿದೆ. ಇದು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವ ಮೂಲಕ ಸೂಪರ್‌ಹಿಟ್ ಚಿತ್ರವಾಗಿ ಗುರುತಿಸಿಕೊಂಡಿದೆ. 2023ರ ಡಿಸೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ನಾನಿ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಶೌರ್ಯುವ್ ನಿರ್ದೇಶಿಸಿದ್ದು, ಫ್ಯಾಮಿಲಿ ಪ್ರೇಕ್ಷಕರನ್ನು ಆಕರ್ಷಿಸಿತು.
ಈ ಎರಡೂ ಚಿತ್ರಗಳಲ್ಲಿ ಕಥೆ ಹೇಳುವ ವಿಧಾನಕ್ಕೆ ಪ್ರಮುಖ ಸಾಮ್ಯತೆ ಇದೆ ಎಂಬುದನ್ನು ಚಿತ್ರದ ಅಭಿಮಾನಿಗಳು ಮತ್ತು ಪ್ರೇಕ್ಷಕರು ಗಮನಿಸಿದ್ದಾರೆ. ಈ ಎರಡೂ ಚಿತ್ರಗಳಲ್ಲಿ ನಾಯಕನು ನಾಯಕಿಗೆ ಪ್ರೇಮಕಥೆಯನ್ನು ನಿರೂಪಿಸುತ್ತಾನೆ ಮತ್ತು ಈ ನಿರೂಪಣೆಯಲ್ಲಿ ಮಗು ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಯ್ ನಾನ್ನ ಚಿತ್ರತಂಡ ಈ ಆರೋಪಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
Advertisement