
ಕಾಲಿವುಡ್ ಪ್ರಸಿದ್ಧ ನಟ ವಿಜಯ್ ಸೇತುಪತಿ ಅವರ ಪುತ್ರ ಸೂರ್ಯ ಸೇತುಪತಿ 'Phoenix ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸುತ್ತಿದ್ದಂತೆಯೇ ವಿವಾದಕ್ಕೆ ಗುರಿಯಾಗಿದ್ದಾರೆ. ಹೌದು ಇತ್ತೀಚಿಗೆ ಬಿಡುಗಡೆಯಾದ
ಆಕ್ಷನ್ ಚಿತ್ರ Phoenix ನಲ್ಲಿ ಯುವ ಕುಸ್ತಿಪಟುವಾಗಿ ನಟಿಸಿರುವ ಸೂರ್ಯ, ಚಿತ್ರದ ಪ್ರೀಮಿಯರ್ ವೇಳೆಯಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುವಾಗ ಚೋಯಿಂಗ್ ಗಮ್ ಆಗಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಇದು ಸೊಕ್ಕಿನ ನಡವಳಿಕೆ, ನೆಪೋಟಿಸಿಂ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಇದೀಗ ಈ ವೈರಲ್ ವಿಡಿಯೋ ಕುರಿತ ವಿವಾದದ ಬಗ್ಗೆ ವಿಜಯ್ ಸೇತುಪತಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಮಗನ ಚೊಚ್ಚಲ ಚಿತ್ರ 'ಫೀನಿಕ್ಸ್' ನ ಪ್ರೀಮಿಯರ್ ವೇಳೆಯಲ್ಲಿ ಸಾರ್ವಜನಿಕವಾಗಿ ಮಗನ ಸುತ್ತ ಎದಿದ್ದ ವಿವಾದವನ್ನು ತಣ್ಣಗಾಗಿಸಿದರು. ಪ್ರೀಮಿಯರ್ ವೇಳೆಯಲ್ಲಿ ತಂಡ ಹಾಗೂ ನೆರೆದಿದ್ದ ಪ್ರೇಕ್ಷಕರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಆದಾಗ್ಯೂ, ಕೆಲವು ಆನ್‌ಲೈನ್ ವೀಡಿಯೊಗಳನ್ನು ತೆಗೆದುಹಾಕುವಂತೆ ಒತ್ತಡ ಹೇರಿದ್ದಾರೆ ಎಂಬಂತಹ ಆರೋಪ ಕುರಿತು ಕೇಳಿದಾಗ ಸ್ಪಷ್ಟೀಕರಣ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್ ಸೇತುಪತಿ, ‘ಆ ರೀತಿ ಏನಾದರೂ ಆಗಿದ್ದರೆ ಅದು ಗೊತ್ತಿಲ್ಲದೇ ಆಗಿರುತ್ತದೆ ಅಥವಾ ಬೇರೆ ಯಾರೋ ಮಾಡಿರಬಹುದು. ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ' ಎಂದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಮಾಧ್ಯಮಗಳ ಮುಂದೆ ಪ್ರದರ್ಶನದ ನಂತರ ವಿಜಯ್ ಸೇತುಪತಿ ತಮ್ಮ ಮಗನಿಗೆ ಕೈಕುಲುಕಿ ಅಪ್ಪಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಅವರು ಚಿತ್ರಕ್ಕಾಗಿ ನಿರ್ದೇಶಕ ಅನ್ಲ್ ಅರಸು ಅವರನ್ನು ಅಭಿನಂದಿಸಿದ್ದಾರೆ.
ಸೂರ್ಯ ಅವರ 'ಫೀನಿಕ್ಸ್' ಚಿತ್ರವು ಯುವ ಕುಸ್ತಿಪಟುವಿನ ಕಥೆಯನ್ನು ಮತ್ತು ಅಧಿಕಾರಕ್ಕಾಗಿ ಹಸಿದ ಜನರ ವಿರುದ್ಧದ ಅವನ ಹೋರಾಟವನ್ನು ವಿವರಿಸುತ್ತದೆ. ಈ ಚಿತ್ರದಲ್ಲಿ ಅಭಿನಕ್ಷತ್ರ, ಜೆ ವಿಘ್ನೇಶ್, ಸಂಪತ್ ರಾಜ್, ದೇವದರ್ಶಿನಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಅನ್ಲ್ ಅರಸು ನಿರ್ದೇಶಿಸಿದ್ದಾರೆ ಮತ್ತು ಎಕೆ ಬ್ರೇವ್‌ಮನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಾಜಲಕ್ಷ್ಮಿ ಅನ್ಲ್ ಅರಸು ನಿರ್ಮಿಸಿದ್ದಾರೆ. 'ಫೀನಿಕ್ಸ್' ಜುಲೈ 4, 2025 ರಂದು ಸಿದ್ಧಾರ್ಥ್ ಅವರ '3BHK' ಜೊತೆಗೆ ಬಿಡುಗಡೆಯಾಯಿತು.
Advertisement