
ಬೆಂಗಳೂರು: ಕನ್ನಡದ ಸ್ಟಾರ್ ನಟರಾದ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಬಗ್ಗೆ ನಟ ಮಡೆನೂರು ಮನು ಅವಹೇಳನಕಾರಿಯಾಗಿ ಮಾತನಾಡಿದ್ದ ಆಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದರಿಂದ ನಟರ ಅಭಿಮಾನಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದರು.
ಈ ವಿಚಾರವಾಗಿ ಇತ್ತೀಚೆಗೆ ಶಿವರಾಜ್‌ಕುಮಾರ್ ಅವರಿಗೆ ಕ್ಷಮೆಯಾಚಿಸಿದ್ದ ನಟ ಮಡೆನೂರು ಮನು ಇದೀಗ ನಟ ದರ್ಶನ್ ಅವರಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ತುಂಬಾ ಡಿ ಬಾಸ್ ಫ್ಯಾನ್ಸ್ ನನಗೆ ಫೋನ್ ಮೆಸೇಜ್ ಎಲ್ಲ ಮಾಡಿದ್ದರು. ಒಂದ ಸಲ ದರ್ಶನ್ ಅವರನ್ನ ಮೀಟ್ ಮಾಡಿ, ಅಂದ್ರು, ಡಿ ಬಾಸ್ ನಾನು ಪುಟ್ಟ ಕಲಾವಿದ. ನನ್ನನ್ನು ದಯವಿಟ್ಟು ಕ್ಷಮಿಸಿ. ನಾನು ಸುಮಾರು ಸಲ ಅವರನ್ನು ಭೇಟಿಯಾಗುವ ಉದ್ದೇಶದಿಂದ ಕರೆ ಮಾಡಿದೆ, ಮೆಸೇಜ್ ಮಾಡಿದೆ. ಆದರೆ ಅವರು ಬ್ಯುಸಿಯಾಗಿದ್ದಾರೆ ಎನ್ನುವುದು ನನಗೆ ಗೊತ್ತಾಯ್ತು ಎಂದು ಹೇಳಿರುವ ಮಡೆನೂರು ಮನು, ಹೀಗಾಗಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎನ್ನುವ ಉದ್ದೇಶದಿಂದ ನಾನು ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ನನ್ನ ಉಸಿರು ಇರುವವರೆಗೂ ನಿಮ್ಮನ್ನೆಲ್ಲ ನಾನು ಮರೆಯೋದಿಲ್ಲ ಎಂದು ಹೇಳಿದ್ದಾರೆ ಮಡೆನೂರು ಮನು.
ಡಿ ಬಾಸ್ ನಾನೊಬ್ಬ ಪುಟ್ಟ ಕಲಾವಿದ. ಒಂದು ಸಂಘ, ಸಹವಾಸಗಳನ್ನು ಮಾಡಿ, ಜೊತೆಯಲ್ಲಿ ಇರುವವರನ್ನು ನಂಬಿ, ಈ ಆಡಿಯೋಗೆ ನಾನು ಬಲಿಯಾಗಿದ್ದೇನೆ ಎಂದಿರುವ ಮಡೆನೂರು ಮನು, ದಯಮಾಡಿ ನನ್ನ ಕ್ಷಮಿಸಿ..ಕ್ಷಮಿಸಿ..ಕ್ಷಮಿಸಿ.. ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.
ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆ ಹೊತ್ತಲ್ಲಿ ನಟ ಮಡೇನೂರು ಮನು ಅವರ ಆಡಿಯೋ ವೈರಲ್ ಆಗಿತ್ತು. ಜತೆಗೆ ಸಹನಟಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿ ಬಂಧನವಾಗಿದ್ದರು. ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ಆಡಿಯೋ ನನ್ನದಲ್ಲ. ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಬಗ್ಗೆ ಮಾತನಾಡಿಲ್ಲ ಎಂದು ಮಡೆನೂರು ಮನು ರಿಲೀಸ್ ಆದ ಬಳಿಕ ಹೇಳಿಕೆ ನೀಡಿದ್ದರು. ಇದೀಗ ಮತ್ತೆ ವಿಡಿಯೋ ಮೂಲಕ ದರ್ಶನ್ ಫ್ಯಾನ್ಸ್‌ಗೆ ಕ್ಷಮೆಯಾಚಿಸಿದ್ದಾರೆ.
Advertisement