ಸುನೀಲ್ ಕುಮಾರ್ ವಿಎ ನಿರ್ದೇಶನದ 'ಕಮಲ್ ಶ್ರೀದೇವಿ' ಚಿತ್ರ ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ತೀವ್ರ ಕುತೂಹಲ ಮೂಡಿಸಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಚಿತ್ರತಂಡ ಘೋಷಿಸಿದೆ. 63 ದಿನಗಳ ಚುರುಕಾದ ಚಿತ್ರೀಕರಣದ ನಂತರ, ಚಿತ್ರತಂಡ ಮೈಸೂರಿನಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.
ಸಚಿವ ಎನ್ ಚೆಲುವರಾಯಸ್ವಾಮಿ ಅವರು ಪ್ರಸ್ತುತ ಪಡಿಸುತ್ತಿರುವ ಚಿತ್ರದಲ್ಲಿ ಅವರ ಮಗ ಸಚಿನ್ ನಾಯಕನಾಗಿದ್ದಾರೆ. ಹ್ಯಾಪಿ ಬರ್ತ್‌ಡೇ (2016) ಮತ್ತು ಬೆಂಗಳೂರು ಬಾಯ್ಸ್ (2023) ನಂತರ ಸಚಿನ್ ಅವರ ಮೂರನೇ ಚಿತ್ರ ಇದಾಗಿದೆ. ಸ್ವರ್ಣಾಂಬಿಕಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಧನಲಕ್ಷ್ಮಿ ಬಿಕೆ ಚಿತ್ರವನ್ನು ನಿರ್ಮಿಸಲಿದ್ದಾರೆ ಮತ್ತು ರಾಜವರ್ದನ್ ಅವರ ಬಾರ್ನ್ ಸ್ವಾಲೋ ಸಹ ನಿರ್ಮಾಣದ ಹೊಣೆ ಹೊತ್ತಿದೆ. ಚಿತ್ರದಲ್ಲಿ ರಾಜವರ್ದನ್ ಕ್ರಿಯೇಟೀವ್ ಹೆಡ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ನಟ ಕಿಶೋರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎರಡನೇ ಸಲ ಮತ್ತು ಕೊನೆಯದಾಗಿ ಕ್ಲಾಂಟಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸಂಗೀತ ಭಟ್ ಸಚಿನ್‌ಗೆ ಜೊತೆಯಾಗಿದ್ದಾರೆ. ಚಿತ್ರದಲ್ಲಿ ರಮೇಶ್ ಇಂದಿರಾ, ಮಿತ್ರ ಮತ್ತು ಎಂಎಸ್ ಉಮೇಶ್ ಸೇರಿದಂತೆ ಇತರರು ನಟಿಸಿದ್ದಾರೆ.
ಕಮಲ್ ಶ್ರೀದೇವಿ ಚಿತ್ರವು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರವು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ಮುಂದೆ ಚಿತ್ರದ ಟೀಸರ್, ಹಾಡುಗಳು ಮತ್ತು ತೆರೆ ಹಿಂದಿನ ದೃಶ್ಯಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.
Advertisement