
ಹೈದರಾಬಾದ್: ತೆಲುಗು ಚಿತ್ರರಂಗದ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನಟ ಜೂನಿಯರ್ ಎನ್‌ಟಿಆರ್, ತಮ್ಮ ಅಭಿಮಾನಿಗಳ ವಿರುದ್ಧ ಕಿಡಿಕಾರಿರುವ ಘಟನೆ ಭಾನುವಾರ ನಡೆದಿದೆ. ನಟನ ನಡೆಗೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂತ್ಯಕ್ರಿಯೆಯ ನಂತರ ನಟ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಮತ್ತು ನಿಧನರಾದ ನಟನಿಗೆ ಗೌರವ ಸಲ್ಲಿಸುತ್ತಿದ್ದಾಗ, ಅವರ ಅಭಿಮಾನಿಗಳು ಜೈ ಎನ್‌ಟಿಆರ್ ಎಂದು ಕೂಗಲು ಪ್ರಾರಂಭಿಸಿದರು. ಆಗ ಎನ್‌ಟಿಆರ್ ವೇದಿಕೆಯಿಂದ ಕೆಳಗಿಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ನಟ ಸುದ್ದಿಗಾರರೊಂದಿಗೆ, ಕೋಟ ಶ್ರೀನಿವಾಸ ರಾವ್ ಅವರ ಪರಂಪರೆ ಮತ್ತು ತೆಲುಗು ಚಿತ್ರರಂಗದ ಮೇಲಿನ ಪ್ರಭಾವದ ಬಗ್ಗೆ ಮಾತನಾಡುತ್ತಾರೆ. 'ನಮ್ಮ ಎಲ್ಲ ಮಾಧ್ಯಮಗಳಲ್ಲಿ ಅವರ ಮರೆಯಲಾಗದ ಪ್ರದರ್ಶನಗಳ ಮೂಲಕ ಅವರು ಬಿಟ್ಟುಹೋದ ಪರಂಪರೆಯನ್ನು ದುಃಖವಿಲ್ಲದೆ ಆಚರಿಸೋಣ' ಎಂದು ತೆಲುಗಿನಲ್ಲಿ ಹೇಳಿದರು.
ಎನ್‌ಟಿಆರ್ ತಮ್ಮ ಹೇಳಿಕೆಯನ್ನು ಮುಗಿಸಿ ತಿರುಗುತ್ತಿದ್ದಂತೆ, ಕೆಲವು ಅಭಿಮಾನಿಗಳು 'ಜೈ ಎನ್‌ಟಿಆರ್' ಎಂದು ಕೂಗಿದರು. ಇದನ್ನು ಕೇಳಿದ ಎನ್‌ಟಿಆರ್ ಅವರ ಕಡೆಗೆ ತಿರುಗಿ, ಅಭಿಮಾನಿಗಳ ಕಡೆಗೆ ಬೆರಳು ತೋರಿಸಿ, 'ಇಲ್ಲ, ಜೈ ಕೋಟ ಶ್ರೀನಿವಾಸ ರಾವ್!' ಎಂದು ಹೇಳಿದ್ದಾರೆ.
ಆಗ ಅಭಿಮಾನಿಗಳು NTR ಅವರ ಪಠಣವನ್ನು ಪುನರಾವರ್ತಿಸಿದರೆ, ಹಾಜರಿದ್ದ ಇತರರು RRR ತಾರೆಯ ನಡೆಗೆ ಚಪ್ಪಾಳೆ ತಟ್ಟಿದ್ದಾರೆ. 'ಎಂತಹ ಗೌರವ' ಎಂದು ಒಬ್ಬರು ವಿಡಿಯೋಗೆ ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು, 'ನಟ ಗೌರವಾನ್ವಿತರು ಆದರೆ ಅಭಿಮಾನಿಗಳು ಮೂರ್ಖರು' ಎಂದಿದ್ದಾರೆ. ಇನ್ನೂ ಅನೇಕರು ನಟನಿಗೆ ಮುಜುಗರ ಉಂಟುಮಾಡಿದ್ದಕ್ಕೆ ಅಭಿಮಾನಿಗಳನ್ನು ನಿಂದಿಸಿದ್ದಾರೆ.
Advertisement