ಹಿರಿಯ ನಟ ಕೋಟ ಶ್ರೀನಿವಾಸ್ ರಾವ್ ಇನ್ನಿಲ್ಲ: ಟಾಲಿವುಡ್ ಚಿತ್ರರಂಗ, ಸಿಎಂ ಚಂದ್ರಬಾಬು ನಾಯ್ಡು ಸೇರಿ ಗಣ್ಯರಿಂದ ಸಂತಾಪ

ಹಿರಿಯ ನಟ ವಯೋಸಹಜ ಕಾಯಿಲೆ ಹಾಗೂ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ.
Kota Srinivasa Rao
ಹಿರಿಟ ನಟ ಕೋಟ ಶ್ರೀನಿವಾವಾಸ ರಾವ್
Updated on

ಹೈದರಾಬಾದ್: ತೆಲುಗು ಚಿತ್ರರಂಗದ ಹಿರಿಟ ನಟ ಕೋಟ ಶ್ರೀನಿವಾವಾಸ ರಾವ್ (83) ಅವರು ಭಾನಿವಾರ ವಿಧಿವಶರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹೈದರಾಬಾದ್​ನಲ್ಲಿರುವ ತಮ್ಮ ನಿವಾಸದಲ್ಲಿಯೇ ಇಂದು ಮುಂಜಾನೆ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಹಿರಿಯ ನಟ ವಯೋಸಹಜ ಕಾಯಿಲೆ ಹಾಗೂ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ.

ಕೋಟ ಶ್ರೀನಿವಾಸ ರಾವ್ ಜುಲೈ 10, 1942 ರಂದು ಕೃಷ್ಣ ಜಿಲ್ಲೆಯ ಕಂಕಿಪಡುವಿನಲ್ಲಿ ಜನಿಸಿದರು. 4 ದಶಕಗಳ ಕಾಲ ಚಿತ್ರೋದ್ಯಮಕ್ಕೆ ಸೇವೆ ಸಲ್ಲಿಸಿದ ಅವರು, ತಮ್ಮ ವೃತ್ತಿಜೀವನದಲ್ಲಿ ಹಲವು ವಿಶಿಷ್ಟ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಂಗಭೂಮಿಯ ಹಿನ್ನಲೆಯಿಂದ ಬಂದ ಶ್ರೀನಿವಾಸ ರಾವ್​, ಹಲವು ವರ್ಷಗಳ ಕಾಲ ಚಿತ್ರಪ್ರೇಮಿಗಳಿಗೆ ಮನರಂಜನೆಯ ರಸದೌತಣ ನೀಡಿದ್ದಾರೆ.

1978ರಲ್ಲಿ ‘ಪ್ರಾಣಂ ಖರೀಧು’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು​, ತಮಿಳು, ಹಿಂದಿ ಮತ್ತು ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಲ್ಲಿಯವರೆಗೆ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಕೋಟ ಶ್ರೀನಿವಾಸ ರಾವ್ ಅವರ ಪತ್ನಿ ರುಕ್ಮಿಣಿ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ಕೋಟ ಶ್ರೀನಿವಾಸ್ ಅವರ ಮಗ ಕೋಟ ವೆಂಕಟ ಆಂಜನೇಯ ಪ್ರಸಾದ್ ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಹಂತದಲ್ಲಿದ್ದಾಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಮಗನ ಅಕಾಲಿಕ ಮರಣದಿಂದ ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಶ್ರೀನಿವಾಸ ರಾವ್ ಅವರ ಕಿರಿಯ ಸಹೋದರ ಶಂಕರ್ ರಾವ್ ಕೂಡ ಒಬ್ಬ ನಟ.

Kota Srinivasa Rao
ಬಾಲಿವುಡ್ ನಟ ಅನಿಲ್ ಕಪೂರ್ ತಾಯಿ ನಿರ್ಮಲ್ ಕಪೂರ್ ನಿಧನ

ಕೋಟ ಶ್ರೀನಿವಾಸ್ ರಾವ್ ಅವರು ಕೇವಲ ನಟರಲ್ಲ. ರಾಜಕೀಯಕ್ಕೂ ಪ್ರವೇಶಿಸಿ ಯಶಸ್ಸು ಕಂಡಿದ್ದರು. 1999ರಿಂದ 2004ರವರೆಗೆ ವಿಜಯವಾಡ ಪೂರ್ವ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡದ ಲೇಡಿ ಕಮಿಷನರ್, ರಕ್ತ ಕಣ್ಣೀರು, ಲವ್, ನಮ್ಮ ಬಸವ, ನಮ್ಮಣ್ಣ, ಶ್ರೀಮತಿ, ಕಬ್ಜಾ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಹಿರಿಯ ನಟನ ಅಗಲಿಕೆ ಸುದ್ದಿ ತಿಳಿದು ಟಾಲಿವುಡ್​ ಚಿತ್ರರಂಗ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ,

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಚಂದ್ರಬಾಬು ನಾಯ್ಡು ಅವರು, ಬಹುಮುಖ ಪಾತ್ರಗಳಿಂದ ಸಿನಿಮಾ ಪ್ರೇಕ್ಷಕರ ಪ್ರೀತಿಯನ್ನು ಗಳಿಸಿದ ಖ್ಯಾತ ನಟ ಕೋಟಾ ಶ್ರೀನಿವಾಸ ರಾವ್ ಅವರ ನಿಧನ ತೀವ್ರ ದುಃಖ ತದಿದೆ. ಸುಮಾರು ನಾಲ್ಕು ದಶಕಗಳಿಂದ ಸಿನಿಮಾ ಮತ್ತು ರಂಗಭೂಮಿ ಕ್ಷೇತ್ರಗಳಿಗೆ ಅವರ ಕಲಾತ್ಮಕ ಕೊಡುಗೆಗಳು ಮತ್ತು ಅವರು ನಿರ್ವಹಿಸಿದ ಪಾತ್ರಗಳು ಅವಿಸ್ಮರಣೀಯವಾಗಿವೆ.

ಖಳನಾಯಕ ಮತ್ತು ಕಲಾವಿದರಾಗಿ ಅವರು ನಿರ್ವಹಿಸಿದ ಹಲವಾರು ಸ್ಮರಣೀಯ ಪಾತ್ರಗಳು ತೆಲುಗು ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅವರ ನಿಧನವು ತೆಲುಗು ಚಲನಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ ತಂದಿದೆ. 1999 ರಲ್ಲಿ, ಅವರು ವಿಜಯವಾಡದಿಂದ ಶಾಸಕರಾಗಿ ಗೆದ್ದು ಸಾರ್ವಜನಿಕರಿಗೆ ಸೇವೆ ಸಲ್ಲಿಸಿದರು. ಅವರ ಕುಟುಂಬಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com