ಸೆಟ್ಟೇರಿದ 'ಕೌಂತೇಯ' ಚಿತ್ರ; ತಂದೆ-ಮಗಳ ಪಾತ್ರದಲ್ಲಿ ಅಚ್ಯುತ್ ಕುಮಾರ್, ಶರಣ್ಯ ಶೆಟ್ಟಿ

ಚಿತ್ರದ ಮುಹೂರ್ತ ಸಮಾರಂಭವು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ಉದ್ಯಮದ ಪ್ರಮುಖ ವ್ಯಕ್ತಿಗಳು ಹಾಜರಿದ್ದರು. ಹಿರಿಯ ನಟ ಶಶಿಕುಮಾರ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು.
ಸೆಟ್ಟೇರಿದ 'ಕೌಂತೇಯ' ಚಿತ್ರ; ತಂದೆ-ಮಗಳ ಪಾತ್ರದಲ್ಲಿ ಅಚ್ಯುತ್ ಕುಮಾರ್, ಶರಣ್ಯ ಶೆಟ್ಟಿ
Updated on

'ಕೌಂತೇಯ' ಎಂಬ ಹೆಸರಿನ ಕ್ರೈಮ್ ಥ್ರಿಲ್ಲರ್ ಚಿತ್ರ ಸೆಟ್ಟೇರಿದ್ದು, ಚಿತ್ರವು ಕೊಲೆಯೊಂದರ ಸುತ್ತ ಸುತ್ತುತ್ತದೆ. ಬಿಕೆ ಚಂದ್ರಹಾಸ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್ ಮತ್ತು ಶರಣ್ಯ ಶೆಟ್ಟಿ ತಂದೆ-ಮಗಳಾಗಿ ನಟಿಸಿದ್ದಾರೆ.

ನಿವೃತ್ತಿಯ ಅಂಚಿನಲ್ಲಿರುವ ರಂಗನಾಥ್ ಎಂಬ ಸಬ್-ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದಾರೆ. ಕತ್ಯವ್ಯದ ಕೊನೆ ದಿನಗಳಲ್ಲಿ ಆತ ಎದುರಿಸುವ ರೋಚಕ ಪ್ರಯಾಣದ ಕಥೆ ಇದಾಗಿದೆ. 'ಇದು ಭಾವನಾತ್ಮಕ ಆಳವನ್ನು ಹೊಂದಿರುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದೆ' ಎಂದರು.

ಕ್ರೈಂ ರಿಪೋರ್ಟರ್ ಆಗಿ ನಟಿಸಿರುವ ಶರಣ್ಯ, 'ನನ್ನ ಪಾತ್ರವು ತನ್ನ ತಂದೆಯೊಂದಿಗೆ ಬಲವಾದ ಭಾವನಾತ್ಮಕ ಛಾಪು ಮೂಡಿಸುತ್ತದೆ. ಇದು ಶಕ್ತಿಯುತ ಮತ್ತು ಹಲವು ಪದರಗಳಿಂದ ಕೂಡಿದೆ' ಎಂದು ಹೇಳಿದರು.

ಚಿತ್ರದ ಮುಹೂರ್ತ ಸಮಾರಂಭವು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ಉದ್ಯಮದ ಪ್ರಮುಖ ವ್ಯಕ್ತಿಗಳು ಹಾಜರಿದ್ದರು. ಹಿರಿಯ ನಟ ಶಶಿಕುಮಾರ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು. ಬರಹಗಾರ ವಿ ನಾಗೇಂದ್ರ ಪ್ರಸಾದ್ ಮತ್ತು ಗೀತರಚನೆಕಾರ ವಿ ಮನೋಹರ್ ಕೂಡ ಇದ್ದರು.

ಕೌಂತೇಯ ಚಿತ್ರವು ಜೂನ್ 9ರಿಂದ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ. "ಯಾವುದೇ ಹಾಡುಗಳಿಲ್ಲ - ನಿರೂಪಣೆಗೆ ಮರು-ರೆಕಾರ್ಡಿಂಗ್ ನಿರ್ಣಾಯಕವಾಗಿರುತ್ತದೆ" ಎಂದು ಚಂದ್ರಹಾಸ ಗಮನಿಸಿದರು.

ಬಿಕೆ ಶ್ರೀನಿವಾಸ್ ಅವರ ಚೊಚ್ಚಲ ನಿರ್ಮಾಣದ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ನೀತು ವನಜಾಕ್ಷಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಪಿಎಲ್ ರವಿ ಅವರ ಛಾಯಾಗ್ರಹಣ, ಬಿಜೆ ಭರತ್ ಅವರ ಹಿನ್ನೆಲೆ ಸಂಗೀತ, ಹರಿಮಹದೇವ್ ಅವರ ಸಂಭಾಷಣೆ ಮತ್ತು ಅನುರಂಜನ್ ಅವರ ಸಂಕಲನವಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com