
ನಟ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಚಿತ್ರ ಜೂನ್ 5ರಂದು ಬಿಡುಗಡೆಯಾಗಿದೆ. ತಮಿಳಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಥಗ್ ಲೈಫ್ ಸಹ ಒಂದಾಗಿತ್ತು. ಆದರೆ ಕಮಲ್ ಹಾಸನ್ ಅವರ ಕನ್ನಡದ ಬಗ್ಗೆ ಆ ಒಂದು ಹೇಳಿಕೆ ಇದೀಗ ಚಿತ್ರದ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಮೊದಲ ದಿನದಂದು 30 ಕೋಟಿ ವ್ಯವಹಾರ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ವಾಸ್ತವವು ಇದಕ್ಕಿಂತ ಬಹಳ ಭಿನ್ನವಾಗಿತ್ತು. ಮೊದಲ ದಿನ ಚಿತ್ರವು ಒಟ್ಟು 15.5 ಕೋಟಿಗಳನ್ನು ಸಂಗ್ರಹಿಸಿತು. ಇದರಲ್ಲಿ ಹಿಂದಿ ಆವೃತ್ತಿ ಕೇವಲ 65 ಲಕ್ಷ ರೂಪಾಯಿಗಳನ್ನು ಗಳಿಸಿತ್ತು.
ಎರಡನೇ ದಿನದ ಗಳಿಕೆಯಲ್ಲಿ ಕುಸಿತ
ಎರಡನೇ ದಿನದ ಥಗ್ ಲೈಫ್ ಗಳಿಕೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಈ ಚಿತ್ರ ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಕೇವಲ 7.13 ಕೋಟಿ ವ್ಯವಹಾರ ಮಾಡಿದೆ. ವಿಶೇಷವೆಂದರೆ ಈ ಚಿತ್ರ ಹಿಂದಿಯಿಂದ ಕೇವಲ 29 ಲಕ್ಷ ರೂಪಾಯಿಗಳನ್ನು ಗಳಿಸಿದೆ. ಇದರಿಂದ ಒಂದು ವಿಷಯವೆಂದರೆ ಚಿತ್ರಕ್ಕೆ ಹಿಂದಿ ಪ್ರೇಕ್ಷಕರಿಂದ ಹೆಚ್ಚಿನ ಪ್ರತಿಕ್ರಿಯೆ ಸಿಗುತ್ತಿಲ್ಲ.
ಮೂರನೇ ದಿನದ ಕಲೆಕ್ಷನ್
ಚಿತ್ರದ ಮೂರನೇ ದಿನ ಅಂದರೆ ಇಂದು ಜೂನ್ 7ರ ಮಧ್ಯಾಹ್ನದವರೆಗೆ, ಆರಂಭಿಕ ವರದಿಗಳ ಪ್ರಕಾರ, ಚಿತ್ರವು 2.56 ಕೋಟಿಗಳನ್ನು ಸಂಗ್ರಹಿಸಿದೆ. ಇಂದು ಒಟ್ಟಾರೆ 7.50 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಇದರೊಂದಿಗೆ ಥಗ್ ಲೈಫ್‌ನ ಒಟ್ಟು ಗಳಿಕೆ ಸುಮಾರು 30 ಕೋಟಿಗಳಷ್ಟಾಗುತ್ತದೆ. ಇದು ಚಿತ್ರ ಸೋಲುವುದು ಸ್ಪಷ್ಟವಾಗಿದೆ. ಕಾರಣ ಈ ಚಿತ್ರವನ್ನು ಬರೋಬ್ಬರಿ 180 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮೊದಲ ವಾರದಲ್ಲಿ ಬಜೆಟ್ ನ ಮೂಕ್ಕಾಲು ಭಾಗದಷ್ಟು ಕಲೆಕ್ಷನ್ ಆದರೆ ಮುಂದಿನ ವಾರಗಳಲ್ಲಿ ಚಿತ್ರ ಲಾಭ ಮಾಡುವುದು ಸಹಜ. ಆದರೆ ಇದೂವರೆಗೂ ಚಿತ್ರ ಶೇಕಡ 20ರಷ್ಟು ಕಲೆಕ್ಷನ್ ಮಾಡಿಲ್ಲ.
ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆಯಿಂದಾಗಿ ಚಿತ್ರಕ್ಕೆ ಭಾರೀ ಹಿನ್ನಡೆಯಾಗಿತ್ತು. ಹೌದು... ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಕೊನೆಗೆ ಚಿತ್ರತಂಡವೇ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಹಿಂದೇಟು ಹಾಕಿತು. ಇದು ರಾಜ್ಯದಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.
Advertisement