
ತುಮಕೂರು: ನಗರದ ಸಿದ್ಧಗಂಗಾ ಮಠಕ್ಕೆ ನಟ ಯುವ ರಾಜ್‌ಕುಮಾರ್ ನಟನೆಯ ಎಕ್ಕ ಚಿತ್ರತಂಡ ಭಾನುವಾಪ ಭೇಟಿ ನೀಡಿದ್ದು, ಈ ವೇಳೆ ಎಡವಟ್ಟು ನಡೆದಿದೆ,
ನಟನ ಬೌನ್ಸರ್‌ಗಳು ಇದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಆಕೆಯ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಆದರೂ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸದೇ ಅಮಾನವೀಯ ವರ್ತನೆ ತೋರದ ಆರೋಪ ಕೇಳಿ ಬಂದಿದೆ.
ಎಕ್ಕ ಚಿತ್ರತಂಡವು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಅಪಘಾತ ನಡೆದಿದೆ. ಸಿದ್ಧಗಂಗಾ ಮಠದ ಶಾಲೆಗೆ ಮಗುವನ್ನು ಬಿಟ್ಟು ಹೋಗಲು ಮಹಿಳೆ ಬಂದಿದ್ದರು. ವಾಪಸ್ ತೆರಳುತ್ತಿದ್ದ ವೇಳೆ ಎಕ್ಕ ಚಿತ್ರತಂಡ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲೇ ಬೌನ್ಸರ್ ಕಾರು ಮಹಿಳೆಗೆ ಡಿಕ್ಕಿಯಾಗಿದೆ. ಈ ವೇಳೆ ಬಳ್ಳಾರಿ ಮೂಲದ ಲಿಂಗಮ್ಮ ಎಂಬುವರ ಕಾಲಿಗೆ ಪೆಟ್ಟು ಬಿದ್ದಿದೆ. ಅಪಘಾತದಲ್ಲಿ ಮಹಿಳೆಯ ಕಾಲಿಗೆ ಗಂಭೀರ ಪೆಟ್ಟಾಗಿದೆ.
ಮಹಿಳೆ ನರಳಾಡುತ್ತ ಆಸ್ಪತ್ರೆಗೆ ಸೇರಿಸುವಂತೆ ಕೋರಿದರೂ ಗಮನಸದೇ ಎಕ್ಕ ಚಿತ್ರತಂಡ ಸ್ಥಳದಿಂದ ತೆರಳಿದೆ. ಚಿತ್ರತಂಡದ ಜತೆ ನಟ ಯುವರಾಜ್ ಕುಮಾರ್ ಸಹ ಇದ್ದರು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Advertisement