
ಕನ್ನಡ ಚಲನಚಿತ್ರೋದ್ಯಮದ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಟ್ಟು-ಬೋಲ್ಟ್ ಹೇಳಿಕೆಗೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಕರ್ನಾಟಕದಲ್ಲಿರುವ ಕಂಗನಾ, ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಕೌಪುನಲ್ಲಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿದರು.
16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರೋದ್ಯಮದವರ ಅನುಪಸ್ಥಿತಿ ಬಗ್ಗೆ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ನಟರು, ನಿರ್ಮಾಪಕರು ಮತ್ತು ತಂತ್ರಜ್ಞರ ಅನುಪಸ್ಥಿತಿಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. ಉದ್ಯಮದ 'ನಟ್ಟು ಮತ್ತು ಬೋಲ್ಟ್‌ಗಳನ್ನು ಬಿಗಿಗೊಳಿಸುವುದು ಹೇಗೆಂದು ನನಗೆ ತಿಳಿದಿದೆ ಎಂದಿದ್ದರು. ಅವರ ಈ ಹೇಳಿಕೆಗೆ ಇದೀಗ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ಕಂಗನಾ, 'ಪವಿತ್ರ ಗ್ರಂಥಗಳ ಪ್ರಕಾರ, ಇಂದ್ರ, ಅರ್ಜುನ ಮತ್ತು ಇತರ ಅನೇಕರು ಕಲೆಗಳನ್ನು ಕಲಿತಿದ್ದಾರೆ. ದೇವರು ಯಾವಾಗಲೂ ಕಲಾವಿದರನ್ನು ರಕ್ಷಿಸುತ್ತಾನೆ. ಮಾ ಸರಸ್ವತಿ ಕಲೆಯ ದೇವತೆ ಮತ್ತು ಯಾರಾದರೂ ಕಲಾವಿದರ ನಟ್ಟು ಮತ್ತು ಬೋಲ್ಟ್‌ಗಳನ್ನು ಬಿಗಿಗೊಳಿಸಬಹುದು ಎಂದು ಭಾವಿಸಿದರೆ, ಕಲಾವಿದರನ್ನು ರಕ್ಷಿಸಲು ವಿಷ್ಣು ಅವತಾರ ತಾಳುತ್ತಾನೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು ಅಥವಾ ಯಾರಾದರೂ ಅದೇ ಕೆಲಸವನ್ನು ಮಾಡುತ್ತಾರೆ' ಎಂದು ಅವರು ಹೇಳಿದರು.
Advertisement