ಅರ್ಥಪೂರ್ಣ ಪಾತ್ರಕ್ಕಾಗಿ ಕಾಯುತ್ತಿದ್ದೆ, 'ವೈಲ್ಡ್ ಟೈಗರ್ ಸಫಾರಿ' ಮೂಲಕ ನನಸಾಗಿದೆ: ನಿಮಿಕಾ ರತ್ನಾಕರ್

ಈ ಚಿತ್ರವು ಮಂಗಳೂರಿನ ಹಿನ್ನೆಲೆಯಲ್ಲಿ ನಡೆಯಲಿದ್ದು, ಕರಾವಳಿ ಪ್ರದೇಶಗಳು, ಬೆಂಗಳೂರು ಮತ್ತು ಉತ್ತರ ಭಾರತದಲ್ಲಿ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿದೆ.
ನಿಮಿಕಾ ರತ್ನಾಕರ್
ನಿಮಿಕಾ ರತ್ನಾಕರ್
Updated on

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ 'ಶೇಕ್ ಇಟ್ ಪುಷ್ಪವತಿ' ಹಾಡಿನ ಮೂಲಕ ಖ್ಯಾತಿ ಪಡೆದ ನಟಿ ನಿಮಿಕಾ ರತ್ನಾಕರ್, ಇದೀಗ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ 'ತ್ರಿಶೂಲಂ', 'ಫೀನಿಕ್ಸ್' ಮತ್ತು 'ಫ್ಲರ್ಟ್' ಚಿತ್ರಗಳಲ್ಲಿ ನಟಿಸಿರುವ ಅವರು, ಇದೀಗ 'ವೈಲ್ಡ್ ಟೈಗರ್ ಸಫಾರಿ' ಎಂಬ ಆ್ಯಕ್ಷನ್-ಪ್ಯಾಕ್ಡ್ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

ಈ ಚಿತ್ರವು ಇತ್ತೀಚೆಗೆ ಅದ್ಧೂರಿಯಾಗಿ ಮುಹೂರ್ತ ಸಮಾರಂಭವನ್ನು ನೆರವೇರಿಸಿದೆ. ವೈಲ್ಡ್ ಟೈಗರ್ ಸಫಾರಿ ಚಿತ್ರಕ್ಕಾಗಿ ಬಲಿಷ್ಠ ತಾಂತ್ರಿಕ ತಂಡ ಒಂದುಗೂಡಿದೆ. ಕೆಜಿಎಫ್‌ ಚಿತ್ರದ ಬರಹಗಾರರಲ್ಲಿ ಒಬ್ಬರಾದ ಚಂದ್ರಮೌಳಿ ನಿರ್ದೇಶಿಸಿದ ಈ ಚಿತ್ರದಲ್ಲಿ ಕೆಜಿಎಫ್ ಕಲಾ ನಿರ್ದೇಶಕ ಶಿವಕುಮಾರ್ ಮತ್ತು ಛಾಯಾಗ್ರಾಹಕ ಎಜೆ ಶೆಟ್ಟಿ ಇದ್ದಾರೆ. ಪ್ರಿಯಮ್ ಮಾಲಿ ಸಂಗೀತ ಸಂಯೋಜಿಸಲಿದ್ದಾರೆ.

'ನಾನು ಸದ್ಯ ಆ್ಯಕ್ಷನ್ ಸೀಕ್ವೆನ್ಸ್‍‌ಗಳಿಗಾಗಿ ತರಬೇತಿ ಪಡೆಯುತ್ತಿದ್ದು, ಮಾರ್ಚ್ 14 ರಂದು ವೈಲ್ಡ್ ಟೈಗರ್ ಸಫಾರಿ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಿದ್ದೇನೆ. ಸಾಂಪ್ರದಾಯಿಕ ಹುಲಿ ನೃತ್ಯವನ್ನು ಚಿತ್ರ ಒಳಗೊಂಡಿದೆ. ಚಿತ್ರವು ಅದ್ಭುತ ಪ್ರೇಮಕಥೆ ಮತ್ತು ಗ್ಯಾಂಗ್‌ಸ್ಟರ್ ಕಥೆಯನ್ನು ಒಳಗೊಂಡಿದೆ. ಚಿತ್ರವು ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಈ ಚಿತ್ರವು ಮಂಗಳೂರಿನ ಹಿನ್ನೆಲೆಯಲ್ಲಿ ನಡೆಯಲಿದ್ದು, ಕರಾವಳಿ ಪ್ರದೇಶಗಳು, ಬೆಂಗಳೂರು ಮತ್ತು ಉತ್ತರ ಭಾರತದಲ್ಲಿ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿದೆ' ಎಂದು ಅವರು ಹೇಳುತ್ತಾರೆ.

ಚಿತ್ರದಲ್ಲಿ ಶಿಥಿಲ್ ಪೂಜಾರಿ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದು, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಮತ್ತು ಎಬಿಸಿಡಿ ಖ್ಯಾತಿಯ ಬಾಲಿವುಡ್ ನೃತ್ಯಗಾರರಾದ ಧರ್ಮೇಶ್ ಮತ್ತು ಸುಶಾಂತ್ ಪೂಜಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

'ಕ್ರಾಂತಿ ಚಿತ್ರದ ಹಾಡಿನ ನಂತರ, ನನಗೆ ಆಫರ್‌ಗಳ ಸುರಿಮಳೆಯೇ ಬಂತು. ಹೆಚ್ಚಾಗಿ ಹಾಡಿಗೆ ನೃತ್ಯ ಮಾಡಲು ಕೇಳಿದ್ದಾರೆ. ಆದರೆ, ನಾನು ಹೆಚ್ಚು ತೂಕವಿರುವ ಪಾತ್ರಗಳನ್ನು ಆಯ್ಕೆ ಮಾಡಲು ಬಯಸಿದ್ದೆ. ನನಗೆ ಕೆಲವು ಆಸಕ್ತಿದಾಯಕ ಅವಕಾಶಗಳು ಸಿಕ್ಕಿದ್ದರೂ, ಅವು ನನ್ನ ದೃಷ್ಟಿಕೋನಕ್ಕೆ ಹೊಂದಿಕೆಯಾಗಲಿಲ್ಲ. ಅದಕ್ಕಾಗಿಯೇ ನಾನು ಫೀನಿಕ್ಸ್‌ನಲ್ಲಿ ಮನೆಕೆಲಸದ ವಿಶಿಷ್ಟ ಪಾತ್ರವನ್ನು ಆರಿಸಿಕೊಂಡೆ. ಅದು ವಿಭಿನ್ನವೆನಿಸಿತು. ನಾನು ಯಾವಾಗಲೂ ಸರಿಯಾದ ಪ್ರೇಮಕಥೆಯನ್ನು ಮಾಡಲು ಬಯಸಿದ್ದೆ ಮತ್ತು ವೈಲ್ಡ್ ಟೈಗರ್ ಸಫಾರಿ ಮೂಲಕ ಇದು ನನಸಾಗಿತು' ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com