ನಕುಲ್ ಗೌಡ, ಮಾನ್ವಿತಾ ಕಾಮತ್ ನಟಿಸಿರುವ ಪಿಸಿ ಶೇಖರ್ ನಿರ್ದೇಶನದ 'BAD' ಬಿಡುಗಡೆ ದಿನಾಂಕ ಫಿಕ್ಸ್

ಚಿತ್ರದ ಸಂಕಲನದಲ್ಲಿಯೂ ಶೇಖರ್ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಜಿ ರಾಜಶೇಖರ್ ಅವರ ಕಲಾ ನಿರ್ದೇಶನ ಮತ್ತು ಶಕ್ತಿ ಶೇಖರ್ ಅವರ ಛಾಯಾಗ್ರಹಣವಿದೆ. BAD ಚಿತ್ರದ ಸಂಭಾಷಣೆಗಳನ್ನು ಸಚಿನ್ ಜಗದೀಶ್ವರ್ ಎಸ್‌ಬಿ ಬರೆದಿದ್ದಾರೆ.
BAD ಚಿತ್ರದ ಸ್ಟಿಲ್
BAD ಚಿತ್ರದ ಸ್ಟಿಲ್
Updated on

ಪಿಸಿ ಶೇಖರ್ ನಿರ್ದೇಶನದ, ನಕುಲ್ ಗೌಡ ಮತ್ತು ಮಾನ್ವಿತಾ ಕಾಮತ್ ಅಭಿನಯದ 'BAD' ಚಿತ್ರ ಮಾರ್ಚ್ 28ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಕ್ಕೆ ಎಸ್ಆರ್ ವೆಂಕಟೇಶ್ ಗೌಡ ಬಂಡವಾಳ ಹೂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಕವಿರಾಜ್ ಬರೆದ 'ನೀ ಬರುವೆ ಅಂತ' ಎಂಬ ರೊಮ್ಯಾಂಟಿಕ್ ಹಾಡನ್ನು ಝೇಂಕಾರ್ ಮ್ಯೂಸಿಕ್ ಲೇಬಲ್ ಮೂಲಕ ಬಿಡುಗಡೆ ಮಾಡಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡನ್ನು 'ಸರೆಗಮಪ' ರಿಯಾಲಿಟಿ ಶೋ ಮೂಲಕ ಹೆಸರುವಾಸಿಯಾದ ಪೃಥ್ವಿ ಭಟ್ ಹಾಡಿದ್ದಾರೆ. ಈ ಹಾಡಿಗೆ ಮೆಚ್ಚುಗೆ ಪಡೆದಿದೆ.

ನಾಯಕಿ ನಾಯಕನ ಆಗಮನಕ್ಕಾಗಿ ಕಾಯುತ್ತಿರುವಾಗ ಅವಳ ಕಲ್ಪನೆಗೆ ಈ ಹಾಡು ಜೀವ ತುಂಬುತ್ತದೆ. ಆ ಕಾಯುವ ಅವಧಿಯಲ್ಲಿ ಅವಳು ಏನನ್ನು ಊಹಿಸುತ್ತಾಳೆ ಎಂಬುದನ್ನು ಇದು ಚಿತ್ರಿಸುತ್ತದೆ ಎಂದು ನಿರ್ದೇಶಕ ಶೇಖರ್ ವಿವರಿಸಿದರು. ಆರು ನಕಾರಾತ್ಮಕ ಗುಣಲಕ್ಷಣಗಳನ್ನು (ಕಾಮ, ಕ್ರೋಧ, ಮದ, ಮತ್ಸರ ಇತ್ಯಾದಿ) ಪ್ರತಿನಿಧಿಸುವ ಆರು ನಟರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಾರೆ. ಇದು ಕಥೆಗೆ ವಿಶೇಷ ಸ್ಪರ್ಶ ನೀಡುತ್ತದೆ.

ಚಿತ್ರದ ಸಂಕಲನದಲ್ಲಿಯೂ ಶೇಖರ್ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಜಿ ರಾಜಶೇಖರ್ ಅವರ ಕಲಾ ನಿರ್ದೇಶನ ಮತ್ತು ಶಕ್ತಿ ಶೇಖರ್ ಅವರ ಛಾಯಾಗ್ರಹಣವಿದೆ. BAD ಚಿತ್ರದ ಸಂಭಾಷಣೆಗಳನ್ನು ಸಚಿನ್ ಜಗದೀಶ್ವರ್ ಎಸ್‌ಬಿ ಬರೆದಿದ್ದಾರೆ.

ಚಿತ್ರದ ತಾರಾಗಣದಲ್ಲಿ ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಮತ್ತು ಇತರರು ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com