17 ವರ್ಷಗಳ ಬಳಿಕ ದರ್ಶನ್ ಜೊತೆ ನಟನೆ: ರಾಜಕಾರಣಿಯಾಗಿ ನಟಿಸುವ ಕನಸು 'ಡೆವಿಲ್' ಚಿತ್ರದಲ್ಲಿ ನನಸಾಗಿದೆ- ಶರ್ಮಿಳಾ ಮಾಂಡ್ರೆ

ಕಳೆದ ವರ್ಷ ನವೆಂಬರ್ 8 ರಂದು ನವಗ್ರಹ ಚಿತ್ರವು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿತ್ತು.
ಶರ್ಮಿಳಾ ಮಾಂಡ್ರೆ
ಶರ್ಮಿಳಾ ಮಾಂಡ್ರೆ
Updated on

ನವಗ್ರಹ ಚಿತ್ರದಲ್ಲಿ ನಟ ದರ್ಶನ್ ಜೊತೆಗೆ ನಟಿಸಿದ್ದ ನಟಿ ಶರ್ಮಿಳಾ ಮಾಂಡ್ರೆ ಇದೀಗ 17 ವರ್ಷಗಳ ನಂತರ ಮತ್ತೆ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಪ್ರಕಾರ, ಸಮಯ ಕಳೆದಿಲ್ಲ ಎಂಬಂತೆ ಭಾಸವಾಗುತ್ತಿದೆ. 2008ರಲ್ಲಿ ನವಗ್ರಹದಿಂದ ಹಿಡಿದು 2025ರ ಡೆವಿಲ್ ವರೆಗೆ, ಒಂದೇ ರೀತಿ ಭಾಸವಾಗುತ್ತಿದೆ. 10 ಅಥವಾ 15 ವರ್ಷಗಳು ಕಳೆದಿದ್ದರೂ ಸಹ, ಜನರು ಮತ್ತೆ ಕೆಲವು ಪಾತ್ರಗಳ ಸಂಯೋಜನೆಯನ್ನು ನೋಡಲು ಇಷ್ಟಪಡುತ್ತಾರೆ. ದರ್ಶನ್ ಜೊತೆ ತೆರೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ಇದು ವಿಶೇಷವೆನಿಸುತ್ತದೆ. ಡೆವಿಲ್ ಚಿತ್ರದ ಪಾತ್ರವರ್ಗ ಮತ್ತು ಕಥೆಯು ವಿಶಿಷ್ಟವಾದದ್ದನ್ನು ಹೊಂದಿದೆ. ಅದಕ್ಕಾಗಿಯೇ ನಾನು ಚಿತ್ರದ ಭಾಗವಾಗಲು ನಿರ್ಧರಿಸಿದೆ' ಎಂದು ಅವರು ಹೇಳುತ್ತಾರೆ.

ಪ್ರಕಾಶ್ ವೀರ್ ಜೊತೆಗೆ ಶರ್ಮಿಳಾ ಮಾಂಡ್ರೆ ಅವರ ಮೊದಲ ಸಹಯೋಗ ಇದಾಗಿದೆ. 'ನಾವು ಯಾವಾಗಲೂ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಮಾತನಾಡುತ್ತಿದ್ದೆವು. ಆದರೆ, ಕೆಲವು ಕಾರಣಗಳಿಂದ ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕೊನೆಗೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನನಗೆ ತುಂಬಾ ಸಂತೋಷವಾಗಿದೆ' ಎಂದು ಹೇಳುತ್ತಾರೆ.

ಚಿತ್ರದಲ್ಲಿ ನಾನು ಒಬ್ಬ ರಾಜಕಾರಣಿಯಾಗಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಈ ಪಾತ್ರವನ್ನು ಮಾಡಬೇಂದು ಬಹಳ ದಿನಗಳಿಂದ ಆಸೆಯಿತ್ತು. ಇದು ಪ್ರಭಾವ ಬೀರುವ ಪಾತ್ರ ಮತ್ತು ಅದನ್ನು ಪರದೆಯ ಮೇಲೆ ಜೀವಂತಗೊಳಿಸಲು ನಾನು ಉತ್ಸುಕಳಾಗಿದ್ದೇನೆ' ಎಂದು ಅವರು ಹೇಳುತ್ತಾರೆ.

ಕಳೆದ ವರ್ಷ ನವೆಂಬರ್ 8 ರಂದು ನವಗ್ರಹ ಚಿತ್ರವು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿತ್ತು. 'ಇದೊಂದು ಅವಾಸ್ತವಿಕ ಅನುಭವವಾಗಿತ್ತು ಮತ್ತು ಚಿತ್ರದ ಸುತ್ತಲಿನ ಕ್ರೇಜ್ ಅದ್ಭುತವಾಗಿತ್ತು. ನಾನು ಕೂಡ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದೆ. ಇದು ನಿಜವಾಗಿಯೂ ಉತ್ತಮವಾಗಿತ್ತು' ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಶರ್ಮಿಳಾ ಮಾಂಡ್ರೆ
ಮೈಸೂರಿನಲ್ಲಿ 'ಡೆವಿಲ್' ಚಿತ್ರದ ಶೂಟಿಂಗ್: ಚಾಮುಂಡಿ ದೇವಿ ದರ್ಶನ ಪಡೆದ ದಾಸ

ಸದ್ಯ ಮೈಸೂರಿನಲ್ಲಿ 'ಡೆವಿಲ್' ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಶರ್ಮಿಳಾ, ಮಾರ್ಚ್‌ನಲ್ಲಿ ತಮ್ಮ ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಲಿದ್ದು, ಏಪ್ರಿಲ್‌ನಲ್ಲಿ ಉಳಿದ ದೃಶ್ಯಗಳನ್ನು ಮುಗಿಸಲಿದ್ದಾರೆ. ಜೈ ಮಾತಾ ಕಂಬೈನ್ಸ್ ಪ್ರಸ್ತುತಪಡಿಸುವ ಮತ್ತು ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸಿರುವ ಈ ಚಿತ್ರದಲ್ಲಿ ರಚನಾ ರೈ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್ ಖಳನಾಯಕನಾಗಿ ನಟಿಸಿದ್ದು, ನಟರಾದ ತುಳಸಿ, ಅಚ್ಯುತ್ ಕುಮಾರ್ ಇದ್ದಾರೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com