ರೀಲ್ಸ್ ಶೋಕಿ ಸಂಕಷ್ಟ: Biggboss ಮಾಜಿ ಸ್ಪರ್ಧಿ ರಜತ್, ವಿನಯ್ ಗೌಡ ವಿರುದ್ಧ ಎಫ್ಐಆರ್

ಕನ್ನಡ ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಗೆ ಸಂಕಷ್ಟ ಎದುರಾಗಿದೆ.
ರಜತ್-ವಿನಯ್ ಗೌಡ
ರಜತ್-ವಿನಯ್ ಗೌಡ
Updated on

ಕನ್ನಡ ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಗೆ ಸಂಕಷ್ಟ ಎದುರಾಗಿದೆ. ಹೌದು... ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ರೀಲ್ಸ್ ಮಾಡಿದ್ದ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಅಡಿ‌ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ಹಾಕಲಾಗಿದೆ. ಈ ವಿಡಿಯೋವನ್ನು ರಜತ್ ಅಪ್​ಲೋಡ್ ಮಾಡಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ರಜತ್ ಕಿಶನ್ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಸದ್ಯ ಬಸವೇಶ್ವರನಗರ ಠಾಣಾ ಪಿಎಸ್ಐ ಭಾನು ಪ್ರಕಾಶ್ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.

ರಜತ್-ವಿನಯ್ ಗೌಡ
ಮಾಜಿ ಪ್ರೇಯಸಿ ಫೋಟೋ ವೈರಲ್; ನಾನ್ ನೋಡ್ಕೋತೀನಿ ಎಂದ ಬಿಗ್ ಬಾಸ್ ಖ್ಯಾತಿಯ ರಜತ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com