
ಬೆಂಗಳೂರು: ನಟ ದರ್ಶನ್ ಅವರು ಕೇರಳದಲ್ಲಿ ಶತ್ರು ಸಂಹಾರ ಪೂಜೆ ನೆರವೇರಿಸಿದ ಬೆನ್ನಲ್ಲೇ ನಟಿ ಹಾಗೂ ಮಾಡಲೆ ಪವಿತ್ರಾ ಗೌಡ ಅವರು ಯುಗಾದಿ ಪ್ರಯುಕ್ತ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಹೋಮ ಮಾಡಿಸಿದ್ದಾರೆ.
ಈ ಪೂಜೆಯ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ತಮ್ಮ ಹಿಂಬಾಲಕರಿಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಅಲ್ಲದೆ, ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ, ಆದರೆ ಅದು ನನ್ನನ್ನು ಮುಟ್ಟಲು ಸಾಧ್ಯ ಇಲ್ಲ. ಋಣಾತ್ಮಕತೆಯೇ ತುಂಬಿರುವ ಜಗತ್ತಿನಲ್ಲಿ ನಿಮ್ಮ ದೃಷ್ಟಿ ಪಾಸಿಟಿವಿಟಿಯಿಂದ ಮಿಂಚಲಿ ಎಂದು ಬರೆದಿದ್ದಾರೆ.
ಪವಿತ್ರಾ ಗೌಡ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಪವಿತ್ರಾ ಗೌಡ ಅವರ ಮೇಲೆ ಬಿದ್ದಿರಬಹುದಾದ ಆ ಕೆಟ್ಟ ದೃಷ್ಟಿ ಯಾರದ್ದು ? ಈ ಮೂಲಕ ಯಾರಿಗಾದರೂ ಪವಿತ್ರಾ ಗೌಡ ಸಂದೇಶ ನೀಡುತ್ತಿದ್ದಾರಾ ? ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. ಹಲವರು ಪೋಸ್ಟ್ ಕುರಿತು ಟೀಕೆಗಳನ್ನೂ ಕೂಡ ಮಾಡುತ್ತಿದ್ದಾರೆ.
Advertisement