'ನನ್ನ ಮುಂದಿನ ಜೀವನಕ್ಕೆ ತೊಂದರೆ ಆಗದಿರಲಿ'; ದರ್ಶನ್‌ಗೆ ನಾನೊಬ್ಬಳೆ​ ಪತ್ನಿ, ಪವಿತ್ರಾಗೌಡ ಅಲ್ಲ: ಪೊಲೀಸ್​ ಆಯುಕ್ತಗೆ ವಿಜಯಲಕ್ಷ್ಮಿ ಪತ್ರ!

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಪವಿತ್ರಾ ಗೌಡ ಅವರು ದರ್ಶನ್​ ಪತ್ನಿ ಎಂದು ಹೇಳಿದ್ದರು.
ವಿಜಯಲಕ್ಷ್ಮೀ-ಪವಿತ್ರಾಗೌಡ-ದರ್ಶನ್
ವಿಜಯಲಕ್ಷ್ಮೀ-ಪವಿತ್ರಾಗೌಡ-ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ನಟ ದರ್ಶನ್​, ನಟಿ ಪವಿತ್ರಾ ಗೌಡ ಸೇರಿದಂತೆ 15ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು ಸದ್ಯ ಆರೋಪಿಗಳು ಪರಪ್ಪರನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಪವಿತ್ರಾ ಗೌಡ ಅವರು ದರ್ಶನ್​ ಪತ್ನಿ ಎಂದು ಹೇಳಿದ್ದರು.

ಈ ಹೇಳಿಕೆ ಕುರಿತಂತೆ ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬೆಂಗಳೂರು ಪೊಲೀಸ್ ಕಮಿಷನರ್​ ದಯಾನಂದ್ ಅವರಿಗೆ ಪತ್ರ ಬರೆದಿದ್ದು ಸುದ್ದಿಗೋಷ್ಠಿಯಲ್ಲಿ ನೀವು ದರ್ಶನ್ ರ ಎರಡನೇ​ ಪತ್ನಿ ಪವಿತ್ರಾ ಗೌಡ ಎಂದು ತಪ್ಪಾಗಿ ಹೇಳಿದ್ದೀರಿ. ಹೀಗಾಗಿ ರಾಷ್ಟ್ರಮಟ್ಟದ ಮಾಧ್ಯಮಗಳು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ದಂಪತಿ ಬಂಧನ​ ಅಂತ ಸುದ್ದಿ ಮಾಡಿವೆ. ಇದು ನನ್ನ ಮತ್ತು ನನ್ನ ಮಗ ವಿನೀಶ್​ ಗೆ ಮುಂದಿನ ದಿನಗಳಲ್ಲಿ ತೊಂದರೆ ಆಗಬಾರದು. ಪೊಲೀಸ್​ ದಾಖಲೆಗಳಲ್ಲಿ ಈ ಮಾಹಿತಿ ಸ್ಪಷ್ಟವಾಗಿರಲಿ. ಇದರಿಂದ ನನಗೆ ಭವಿಷ್ಯದಲ್ಲಿ ತೊಂದರೆ ಆಗದಿರಲಿ ಎಂದು ಪತ್ರದಲ್ಲಿ ವಿಜಯಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.

ವಿಜಯಲಕ್ಷ್ಮೀ-ಪವಿತ್ರಾಗೌಡ-ದರ್ಶನ್
Darshan case: ಅಂಧಾಭಿಮಾನಕ್ಕೆ ''ಬರೆ'' ಎಳೆದ ಮಕ್ಕಳ ಆಯೋಗ; ಕಂದಮ್ಮನಿಗೆ ''ಖೈದಿ'' ವೇಷ ಹಾಕಿದ್ದ ಅಭಿಮಾನಿ ವಿರುದ್ಧ ಪ್ರಕರಣ ದಾಖಲು!

ಪವಿತ್ರಾಗೌಡ ದರ್ಶನ್ ಪತ್ನಿಯಲ್ಲ ಆಕೆ ನನ್ನ ಗಂಡನ ಸ್ನೇಹಿತೆ ಅಷ್ಟೆ. ದರ್ಶನ್​ ಅವರನ್ನು ನಾನು ಮಾತ್ರ ಕಾನೂನಾತ್ಮಕವಾಗಿ ಮದುವೆ ಆಗಿದ್ದೇನೆ. ನಮ್ಮ ಮದುವೆ 2003ರ ಮೇ 19ರಂದು ಧರ್ಮಸ್ಥಳದಲ್ಲಿ ನಡೆದಿತ್ತು ಎಂದು ವಿಜಯಲಕ್ಷ್ಮಿ ಅವರು ಈ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com