'ಡಿ ಬಾಸ್' ಮದುವೆ ವಾರ್ಷಿಕೋತ್ಸವ ಸಂಭ್ರಮ: ಪತ್ನಿಗಾಗಿ ಹಾಡು ಹಾಡಿದ ದರ್ಶನ್! Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ಅನಿವರ್ಸರಿ ಸಂಭ್ರಮದಲ್ಲಿದ್ದಾರೆ. ಇಂದಿಗೆ ಅವರು ದಾಂಪತ್ಯ ಜೀವನ ಆರಂಭಿಸಿ 22 ವರ್ಷಗಳಾಗಿವೆ. ಹೀಗಾಗಿ ದಂಪತಿ ಅದ್ದೂರಿಯಾಗಿ ಮದುವೆ ವಾರ್ಷಿಕೋತ್ಸವ ಆಚರಿಸಿದ್ದಾರೆ.
ಈ ಕುರಿತ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಲ್ಲದೇ, ದರ್ಶನ್ ಜೊತೆಗೆ ಮುದ್ದಾಗಿ ಪೋಸ್ ನೀಡಿರುವ ಫೋಟೋವೊಂದನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವ ವಿಜಯಲಕ್ಷ್ಮಿ ‘ಶಾಶ್ವತವಾಗಿ’ ಎಂದು ಬರೆದುಕೊಂಡಿದ್ದಾರೆ.
ಮದುವೆ ಆ್ಯನಿವರ್ಸರಿ ಖುಷಿಯಲ್ಲಿರುವ ಈ ಜೋಡಿಗೆ ಫ್ಯಾನ್ಸ್ ಶುಭ ಕೋರುತ್ತಿದ್ದಾರೆ.
ಪತ್ನಿ ಕೈಹಿಡಿದು ‘ಮುದ್ದು ರಾಕ್ಷಸಿ’ಹಾಡಿಗೆ ರೊಮ್ಯಾಂಟಿಕ್ ಆಗಿ ದರ್ಶನ್ ಡ್ಯಾನ್ಸ್ ಮಾಡಿದ್ದಾರೆ. ಪತ್ನಿಗಾಗಿ ದರ್ಶನ್ ಹಿಂದಿ ಹಾಡೊಂದನ್ನು ಹಾಡಿದ್ದಾರೆ. ವಿಜಯಲಕ್ಷ್ಮಿ ಕೂಡ ಹಾಡು ಹಾಡುತ್ತಾ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಈ ಜೋಡಿ ಯಾವಾಗಲೂ ಹೀಗೆಯೇ ಇರಲಿ, ಈ ದಂಪತಿ ಮೇಲೆ ಯಾರ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಶುಭ ಹಾರೈಸುತ್ತಿದ್ದಾರೆ.
ಕಳೆದ ವರ್ಷ ದುಬೈಯಲ್ಲಿ ಮದುವೆ ವಾರ್ಷಿಕೋತ್ಸವವನ್ನು ಈ ದಂಪತಿ ಆಚರಿಸಿದ್ದರು. ಆದರೆ, ತದನಂತರ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಬಳಿಕ ಜಾಮೀನಿನ ಮೇಲೆ ಅವರನ್ನು ಜೈಲಿನಿಂದ ಹೊರಗೆ ತರುವಲ್ಲಿ ವಿಜಯಲಕ್ಷ್ಮಿ ಮಹತ್ವದ ಪಾತ್ರ ವಹಿಸಿದ್ದರು.
ದೇವಾಲಯಗಳಲ್ಲಿ ಹರಕೆ, ವಿಶೇಷ ಪೂಜೆ ಪುನಸ್ಕಾರದ ಮೂಲಕ ಕಾನೂನು ಹೋರಾಟದಲ್ಲಿ ದರ್ಶನ್ ಗೆಲುವಿನಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಮೇಲೆ ಗೆಳತಿ ಪವಿತ್ರ ಗೌಡ ಸಹವಾಸ ಮಾಡದ ದರ್ಶನ್ ವ್ಯವಹಾರವನ್ನು ವಿಜಯಲಕ್ಷ್ಮಿ ಅವರೇ ನೋಡಿಕೊಳ್ಳುತ್ತಿದ್ದು, ದರ್ಶನ್ ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ವಿಜಯಲಕ್ಷ್ಮಿ ಜೊತೆಯಾಗಿರುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ