
'ದಾರಿ ಯಾವುದಯ್ಯ ವೈಕುಂಠಕ್ಕೆ, ಬ್ರಹ್ಮಕಮಲ, ತಾರಿಣಿ ಚಿತ್ರಗಳಿಂದ ಹೆಸರಾದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರು, ತಮ್ಮ ಮುಂದಿನ ಚಿತ್ರ 'ಪುಟ್ಟಣ್ಣನ ಕತ್ತೆ' ಶೀರ್ಷಿಕೆ ಘೋಷಿಸಿದ್ದಾರೆ.
ಇದು ಹಿರೋಯಿಸಂ ತೋರಿಸುವ ವಿಶಿಷ್ಟ ಕಥೆಯಲ್ಲ. ಈ ಬಾರಿ ಕತ್ತೆ ಚಿತ್ರದ ಕೇಂದ್ರಬಿಂದುವಾಗಿದೆ. ಶ್ವಾನಗಳಿಗಿಂತಲೂ ವಿನಮ್ರ ಕತ್ತೆಯೊಂದರಲ್ಲಿ ಹಿರೋನನ್ನು ಕಂಡುಕೊಂಡಿದ್ದೇನೆ ಎಂದು ಹೇಳುವ ನಿರ್ದೇಶಕರು, ವಿಶಿಷ್ಟ ನಿರೂಪಣೆಗೆ ಧ್ವನಿ ಹೊಂದಿಸುತ್ತಿದ್ದಾರೆ.
ಚಿತ್ರದ ಫಸ್ಟ್ ಲುಕ್ ಫೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್‌ನಲ್ಲಿ ಕತ್ತೆಯನ್ನು ತೋರಿಸಲಾಗಿದೆ. ಈ ಪರಿಕಲ್ಪನೆ ಹುಟ್ಟಿದ ಬಗ್ಗೆ ವಿವರಿಸಿದ ಪೂರ್ಣಚಂದ್ರ, ಎಲ್ಲರೂ ಶ್ವಾನಗಳ ಬಗ್ಗೆ ಚಿತ್ರ ಮಾಡ್ತಾರೆ. ಹಾಗಾಗಿ ನಾನೇಕೆ? ಕತ್ತೆಯೊಂದರ ಚಿತ್ರ ಮಾಡಬಾರದು ಎಂದು ಯೋಚಿಸಿದೆ. ತದನಂತರ ಈ ಚಿತ್ರದ ಕಲ್ಪನೆ ಹೊಳೆಯಿತು ಎಂದು ತಿಳಿಸಿದರು.
'ಪುಟ್ಟಣ್ಣನ ಕತ್ತೆ' ಹಳ್ಳಿಯೊಂದರ ಕತ್ತೆಯ ಪ್ರಯಾಣ ಮತ್ತು ಅದರ ಸುತ್ತಲಿನ ಜನರೊಂದಿಗೆ ಬೆಳೆಸಿಕೊಳ್ಳುವ ಬಾಂಧವ್ಯವನ್ನು ಗುರುತಿಸುತ್ತದೆ. ಮಾನವ-ಪ್ರಾಣಿ ಸಂಬಂಧಗಳಲ್ಲಿನ ಅಸಂಬದ್ಧತೆ ಮತ್ತು ಅನಿರೀಕ್ಷಿತ ಕೋಪ, ತಾಪ ಎಲ್ಲವನ್ನೂ ಬಹಿರಂಗಪಡಿಸುತ್ತದೆ. ಸಹಾನೂಭೂತಿ, ಘನತೆ ಮತ್ತು ಸಾಮಾಜಿಕ ನಿಯಮಗಳೊಂದಿಗೆ ಕಥೆ ಸಾಗುತ್ತದೆ.
ಕತ್ತೆಯೊಂದಿಗೆ ಕೆಲಸ ಮಾಡುವುದು ಸುಲಭವಲ್ಲ. ತರಬೇತಿ ಮತ್ತು ಶೂಟಿಂಗ್ ಸವಾಲಿನಿಂದ ಕೂಡಿತ್ತು. ಆದರೆ ತದನಂತರ, ಅದರ ಸಿಬ್ಬಂದಿ ಒಳ್ಳೆಯ ಬಾಂಧವ್ಯ ಮೂಡಿಸಿದರು. ಯಾವುದೇ ತರಬೇತಿ ನೀಡದೆ ಅದರ ವರ್ತನೆ ಅರ್ಥ ಮಾಡಿಕೊಂಡೆವು ಎಂದು ನಿರ್ದೇಶಕರು ಹೇಳಿದರು.
ಚಿತ್ರದಲ್ಲಿ ಅನೀಶ್ ಆರ್ಯನ್, ಭೀಮೇಶ್, ಲಿಯೋ ಶರ್ಮಾ ಮತ್ತು ವಿಭಾ ವಂದನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರ. ಜೊತೆಗೆ ಕಲಾರತಿ ಮಹದೇವ್, ಲಕ್ಕಿ ಶಂಕರ್, ಸಿದ್ದು ಮಂಡ್ಯ, ರಶ್ಮಿ ಮೈಸೂರು, ಬಾಬು, ರೋಹಿಣಿ, ಎನ್‌ಟಿ ರಾಮಸ್ವಾಮಿ, ಮತ್ತು ಕವಿತಾ ಕಂಬಾರರಂತಹ ತಾರಾಗಣವಿದೆ. ತನ್ಮಯ್ ಎಸ್ ಗೌಡರಿಂದ ಪೂರ್ಣಚಂದ್ರ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರಕ್ಕೆ ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಒದಗಿಸಿದ್ದು, ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ.
Advertisement