

ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ 'ಲ್ಯಾಂಡ್‌ಲಾರ್ಡ್', 2026ರಲ್ಲಿ ಬಿಡುಗಡೆಯಾಗುವ ಮೊದಲ ಕನ್ನಡ ಚಿತ್ರವಾಗಲಿದ್ದು, ಜನವರಿ 23 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ರಾಜ್ಯೋತ್ಸವದಂದು ತಂಡವು ಟೀಸರ್ ಬಿಡುಗಡೆ ಮಾಡಿದ್ದು, ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿತು. ಲ್ಯಾಂಡ್‌ಲಾರ್ಡ್ ಚಿತ್ರಕ್ಕೆ ಜಡೇಶ್ ಕೆ ಹಂಪಿ ಆ್ಯಕ್ಷನ್ ಕಟ್ ಹೇಳಿದ್ದು, ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆವಿ ಸತ್ಯಪ್ರಕಾಶ್ ಮತ್ತು ಕೆಎಸ್ ಹೇಮಂತ್ ಗೌಡ ನಿರ್ಮಿಸಿದ್ದಾರೆ. 14 ವರ್ಷಗಳ ನಂತರ ನಿರ್ಮಾಣ ಸಂಸ್ಥೆಯು ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದೆ.
ದುನಿಯಾ ವಿಜಯ್ ಮಾತನಾಡಿ, 'ಇಂತಹ ಕಥೆಯನ್ನು ರಚಿಸಿದ ಜಡೇಶ್‌ಗೆ ಮತ್ತು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿರ್ಮಾಪಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾವಿಬ್ಬರೂ (ರಚಿತಾ ರಾಮ್) ಒಂದೇ ಸ್ಥಳದಿಂದ ಬಂದಿದ್ದೇವೆ ಮತ್ತು ವರ್ಷಗಳಿಂದ ಇಬ್ಬರಿಗೂ ಪರಿಚಯವಿದೆ. ಅವರು ಮತ್ತು ಹಿರಿಯ ನಟಿ ಉಮಾಶ್ರೀ ಅವರೊಂದಿಗೆ ತೆರೆ ಹಂಚಿಕೊಳ್ಳುವುದು ಒಂದು ಸ್ಮರಣೀಯ ಅನುಭವವಾಗಿದೆ. ನನ್ನ ಮಗಳು ರಿತನ್ಯಾ ಚಿತ್ರದಲ್ಲಿ ನಟಿಸಿರುವುದು ಅದನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಮತ್ತು ಪ್ರೇಕ್ಷಕರು ಚಿತ್ರವನ್ನು ಸ್ವೀಕರಿಸುತ್ತಾರೆ' ಎಂಬ ಭರವಸೆ ವ್ಯಕ್ತಪಡಿಸಿದರು.
ಕಥೆಯನ್ನು ಕೇಳಿದ ತಕ್ಷಣವೇ ನಾನು ಒಪ್ಪಿಕೊಂಡೆ. "ಕಥೆ ನನಗೆ ತುಂಬಾ ಇಷ್ಟವಾಯಿತು". ದರ್ಶನ್ ಮತ್ತು ಲೋಕೇಶ್ ಕನಕರಾಜ್ ಅವರೊಂದಿಗೆ ಈ ಯೋಜನೆಯ ಬಗ್ಗೆ ಚರ್ಚಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ರಚಿತಾ ರಾಮ್ ತಿಳಿಸಿದರು.
ನಿರ್ದೇಶಕ ಜಡೇಶ್ ಕೆ ಹಂಪಿ, ಲ್ಯಾಂಡ್‌ಲಾರ್ಡ್ ಅನ್ನು 1980ರ ದಶಕದಲ್ಲಿ ನಡೆಯುವ ಕಥೆಯಾಗಿದ್ದು, ಆ ಯುಗವನ್ನು ಮರುಸೃಷ್ಟಿಸುವುದು ಸವಾಲಿನದ್ದಾಗಿದ್ದರೂ, ಪ್ರತಿಫಲದಾಯಕವಾಗಿತ್ತು. ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅವರ ಅಭಿನಯ ಉತ್ತಮವಾಗಿದೆ. ಅಚ್ಯುತ್ ಕುಮಾರ್, ಮಿತ್ರ, ರಾಕೇಶ್ ಅಡಿಗ, ಅಭಿಷೇಕ್ ದಾಸ್ ಮತ್ತು ಶಿಶಿರ್ ಸೇರಿದಂತೆ 50ಕ್ಕೂ ಹೆಚ್ಚು ರಂಗಭೂಮಿ ಕಲಾವಿದರು ಕೆಲಸ ಮಾಡಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜಿಸಿದ್ದಾರೆ, ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ.
ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಅವರು ಈ ಚಿತ್ರವು ಬಲವಾದ ಕಂಟೆಂಟ್ ಜೊತೆಗೆ ಮನರಂಜನೆಯನ್ನು ಹೊಂದಿದೆ ಎಂದು ಹೇಳಿದರು. ಸಹ-ನಿರ್ಮಾಪಕ ಕೆಎಸ್ ಹೇಮಂತ್ ಗೌಡ ಭವಿಷ್ಯದ ಯೋಜನೆಗಳನ್ನು ದೃಢಪಡಿಸಿದರು. ಹಿರಿಯ ನಟಿ ಮತ್ತು ರಾಜಕಾರಣಿ ಉಮಾಶ್ರೀ ಅವರು ದುನಿಯಾ ವಿಜಯ್ ಅವರೊಂದಿಗೆ ಕೆಲಸ ಮಾಡಲು ಸಂತೋಷ ವ್ಯಕ್ತಪಡಿಸಿದರು ಮತ್ತು ಅವರ ತೆರೆಯ ಮೇಲಿನ ಬಾಂಧವ್ಯವು ದೀರ್ಘಕಾಲದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದರು.
Advertisement