

ಬೆಂಗಳೂರು: ಬಿಗ್ ಬಾಸ್ ಕನ್ನಡ 11ನೇ ಸೀಸನ್ ಸ್ಪರ್ಧಿಯಾಗಿದ್ದ ನಟ ಉಗ್ರಂ ಮಂಜು ಬದುಕಿನಲ್ಲಿ ಸಂತೋಷದ ವಿಚಾರ ನಡೆದಿದೆ. ಇಷ್ಟು ದಿನ ಮದುವೆ ಯಾವಾಗ ಎನ್ನುತ್ತಿದ್ದವರಿಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ. ಉಗ್ರಂ ಮಂಜು ಅವರು ಸಂಧ್ಯಾ ಅವರೊಂದಿಗೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಿಶ್ಚಿತಾರ್ಥ ಕಾರ್ಯಕ್ರಮ ಆತ್ಮೀಯರು, ಸ್ನೇಹಿತರ ಸಮ್ಮುಖದಲ್ಲಿ ನೆರವೇರಿದ್ದು, ಜನವರಿಯಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.
ಈ ವಿಚಾರವನ್ನು ಮಂಜು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇಬ್ಬರು ಉಂಗುರ ಬದಲಿಸಿಕೊಳ್ಳುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. 'ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ. ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ' ಎಂದು ಬರೆದಿದ್ದಾರೆ.
ಸಂಧ್ಯಾ ಅವರು ಸ್ಪರ್ಶ್ ಆಸ್ಪತ್ರೆಯಲ್ಲಿ ಟ್ರಾನ್ಸ್ಪ್ಲಾಂಟ್ ಕೋಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ ಬಳಿಕ ಉಗ್ರಂ ಮಂಜು ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Advertisement