

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಚೊಚ್ಚಲ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತ 'GST'ಚಿತ್ರ ಬಿಡುಗಡೆಗೆ ಸಜ್ಜಾಗಿರುವಂತೆಯೇ ಅದರ ಮೊದಲ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿದೆ.
'ಚಮೇಲಿ ಚಲ್' ಎಂಬ ವಿಶೇಷ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದರಲ್ಲಿ ಕನ್ನಡದ ನಟಿ ಸಂಹಿತಾ ವಿನ್ಯಾ ಸಖತ್ ಸ್ಟೆಪ್ ಹಾಕಿದ್ದಾರೆ. ಮಾಡೆಲ್ ಹಾಗೂ ನಟಿ ಸಂಹಿತಾ ವಿನ್ಯಾ ಚಮೇಲಿಯಾಗಿ ಪಡ್ಡೆ ಹೈಕಳ ನಿದ್ದೆ ಕೆಡಿಸುವ ಹಾಗೆ ಡ್ಯಾನ್ಸ್ ಮಾಡಿದ್ದಾರೆ.
ಉಳಿದಂತೆ ನಾಯಕ ನಟ ಸೃಜನ್, ಗಿರಿ ಶಿವಣ್ಣ, ತಬಲಾ ನಾಣಿ, ವಿನೋದ್ ಗೋಬರ್ಗಲಾ ಮತ್ತಿತರರು ಸಂಹಿತಾ ವಿನ್ಯಾ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಯೂ ಟ್ಯೂಬ್ ನಲ್ಲಿ ಹೆಚ್ಚಿನ ವೀಕ್ಷಣೆ, ಲೈಕ್ ಪಡೆದುಕೊಂಡಿದ್ದು, ಯುವ ಜನತೆ ಫಿದಾ ಆಗಿದ್ದಾರೆ.
ರ‍್ಯಾಪರ್ ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಅನಿತಾ ಸಾರಾ ಮಹೇಶ್ ಅವರೊಂದಿಗೆ ಹಾಡಿದ್ದಾರೆ. ವಿಜಯ್ ಈಶ್ವರ್ ಅವರ ಸಾಹಿತ್ಯವಿದೆ. ಜಿಎಸ್‌ಟಿಯನ್ನು ಸೃಜನ್ ಬರೆದು ನಿರ್ದೇಶಿಸಿದ್ದಾರೆ ಮತ್ತು ನಿವೇದಿತಾ ಗೌಡ, ಗಿರಿಜಾ ಲೋಕೇಶ್, ಸುಕೃತ್ ಸೃಜನ್ ಲೋಕೇಶ್, ವಿನಯಾ ಪ್ರಸಾದ್, ರಜನಿ ಭಾರದ್ವಾಜ್, ಅಶೋಕ್ ಶೋಬ್ರಾಜ್, ಸುಂದರ್ ವೀಣಾ, ವೀಣಾ ಸುಂದರ್, ವಿಶಾಲ್ ಹೆಗ್ಡೆ, ಮಹಾಂತೇಶ್ ಹಿರೇಮಠ್ ಸೇರಿದಂತೆ ಅನೇಕರ ತಾರಾಗಣವಿದೆ.
Advertisement