ಅಭಿಮಾನಿಗಳ ಮನಗೆದ್ದ ದರ್ಶನ್ ನಟನೆಯ 'ದಿ ಡೆವಿಲ್' ಹಾಡು 'ಒಂದೇ ಒಂದು ಸಲ'; 53 ಲಕ್ಷಕ್ಕೂ ಅಧಿಕ ವೀಕ್ಷಣೆ

ಚಿತ್ರವನ್ನು ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸಿದ್ದಾರೆ. ಪ್ರಕಾಶ್ ವೀರ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ.
A still from The Devil
ಡೆವಿಲ್ ಚಿತ್ರದ ಸ್ಟಿಲ್
Updated on

'ದಿ ಡೆವಿಲ್' ಚಿತ್ರದ 'ಒಂದೇ ಒಂದು ಸಲ' ಹಾಡು ಇದೀಗ ಅಭಿಮಾನಿಗಳ ಮನಸ್ಸು ಗೆದ್ದಿದ್ದು, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿದೆ. ದರ್ಶನ್ ಮತ್ತು ರಚನಾ ರೈ ಕಾಣಿಸಿಕೊಂಡಿರುವ ಈ ಹಾಡು ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದ್ದು, 53 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ. ಈ ಹಾಡು ಇದೀಗ ಪ್ಲಾಟ್‌ಫಾರ್ಮ್‌ನ ಟ್ರೆಂಡಿಂಗ್ ಮ್ಯೂಸಿಕ್ ವಿಡಿಯೋಗಳ ಪಟ್ಟಿಯಲ್ಲಿ ನಂ. 1 ಸ್ಥಾನದಲ್ಲಿದೆ.

ಪ್ರಕಾಶ್ ವೀರ್ ನಿರ್ದೇಶನದ ಮತ್ತು ರಚನಾ ರೈ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಚಿತ್ರತಂಡ ಮೊದಲ ಹಾಡು 'ಇದ್ರೆ ನೆಮ್ದಿಯಾಗ್ ಇರ್ಬೇಕ್' ಅನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡಿದ್ದು, ಈಗಾಗಲೇ ಭರ್ಜರಿ ಯಶಸ್ಸು ಕಂಡಿದೆ. 'ತಾರಕ್' ಚಿತ್ರದ ನಂತರ ದರ್ಶನ್ ಮತ್ತು ಪ್ರಕಾಶ್ ವೀರ್ ಮತ್ತೆ ಒಂದಾಗಿದ್ದಾರೆ.

ಚಿತ್ರವನ್ನು ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಪ್ರಕಾಶ್ ವೀರ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಕಪಿಲ್ ಕಪಿಲನ್ ಮತ್ತು ಚಿನ್ಮಯಿ ಶ್ರೀಪಾದ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸಿಆರ್ ಬಾಬಿ ಹೆಚ್ಚುವರಿ ಗಾಯನ ಮಾಡಿದ್ದಾರೆ.

ಹಾಡನ್ನು ಥೈಲ್ಯಾಂಡ್‌ನಲ್ಲಿ ಅದ್ಭುತವಾದ ದ್ವೀಪದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಸಂತು ಮಾಸ್ಟರ್ ಅವರ ನೃತ್ಯ ಸಂಯೋಜನೆಯಿದೆ.

A still from The Devil
ದರ್ಶನ್ ನಟನೆಯ 'ದಿ ಡೆವಿಲ್' ಹಾಡು 'ಇದ್ರೆ ನೆಮ್ದಿಯಾಗ್ ಇರ್ಬೇಕ್' ಸದ್ಯಕ್ಕೆ ನಂ.1

ಚಿತ್ರದ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್, ಸಂಗೀತ ಸಂಯೋಜಕ ಬಿ ಅಜನೀಶ್ ಲೋಕನಾಥ್, ಸಂಪಾದಕ ಹರೀಶ್ ಕೊಮ್ಮೆ, ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಮತ್ತು ರಾಮ್-ಲಕ್ಷ್ಮಣ್ ಅವರ ಸಾಹಸ ಸಂಯೋಜನೆಯಿದೆ.

ದರ್ಶನ್‌ಗೆ ನಾಯಕಿಯಾಗಿ ರಚನಾ ರೈ ನಟಿಸಿದ್ದಾರೆ. ತುಳಸಿ, ಅಚ್ಯುತ್ ಕುಮಾರ್, ವಿನಯ್ ಗೌಡ, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು ಮತ್ತು ಶುಭ ರಾಜ್ ಇತರರು ನಟಿಸಿದ್ದಾರೆ. ಡಿಸೆಂಬರ್ 12 ರಂದು ವಿಶ್ವದಾದ್ಯಂತ ತೆರೆಗೆ ಬರಲಿರುವ ದಿ ಡೆವಿಲ್, ಒಂದು ಕಮರ್ಷಿಯಲ್ ಎಂಟರ್‌ಟೈನರ್ ಆಗಿ ಮೂಡಿಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com