ಬೆಳ್ಳಿ ಪರದೆ ಮೇಲೆ ಬರಲಿದೆ ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ 'ಜುಗಾರಿ ಕ್ರಾಸ್'; ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ!

ರಾಜ್ ಬಿ ಶೆಟ್ಟಿ ಅವರು ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಮತ್ತು ಇತ್ತೀಚೆಗೆ ಬಿಡುಗಡೆಯಾದ ಸು ಫ್ರಮ್ ಸೋ ಚಿತ್ರದಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ.
A poster for Jugari Cross (L) and Raj B Shetty (R)
ಜುಗಾರಿ ಕ್ರಾಸ್ ಚಿತ್ರದ ಪೋಸ್ಟರ್ - ರಾಜ್ ಬಿ ಶೆಟ್ಟಿ
Updated on

ಹಲವು ವರ್ಷಗಳ ನಿರೀಕ್ಷೆಯ ನಂತರ, ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಮೆಚ್ಚುಗೆ ಪಡೆದ ಕಾದಂಬರಿ 'ಜುಗಾರಿ ಕ್ರಾಸ್' ಕೊನೆಗೂ ದೊಡ್ಡ ಪರದೆಯಲ್ಲಿ ಬರಲು ಸಿದ್ಧವಾಗುತ್ತಿದೆ. ನಿರ್ದೇಶಕ ಗುರುದತ್ತ ಗಾಣಿಗ ಅವರು ಜುಗಾರಿ ಕ್ರಾಸ್ ಅನ್ನು ತೆರೆ ಮೇಲೆ ತರಲು ಸಜ್ಜಾಗುತ್ತಿದ್ದಾರೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗುರುದತ್ ಅವರು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು ಮತ್ತು ಸದ್ಯ ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಚಿತ್ರ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ.

ಅನೇಕ ನಿರ್ದೇಶಕರು ಅನೇಕ ವರ್ಷಗಳಿಂದ ಜುಗಾರಿ ಕ್ರಾಸ್‌ಗೆ ಜೀವ ತುಂಬಲು ಪ್ರಯತ್ನಿಸಿದ್ದಾರೆ. ಆದರೆ, ಇದೀಗ ಗುರುದತ್ ಗಾಣಿಗ ಮತ್ತು ರಾಜ್ ಬಿ ಶೆಟ್ಟಿ ಈ ಬಹುದಿನಗಳ ಕನಸನ್ನು ನನಸು ಮಾಡುತ್ತಿರುವುದು ಚಿತ್ರಪ್ರೇಮಿಗಳಲ್ಲಿ ಉತ್ಸಾಹ ಮೂಡಿಸಿದೆ. ಜುಗಾರಿ ಕ್ರಾಸ್ ಕಾದಂಬರಿಯು ಅದರ ಸಸ್ಪೆನ್ಸ್ ನಿರೂಪಣೆ, ಲೇಯರ್ಡ್ ಕಥೆ ಹೇಳುವಿಕೆ ಮತ್ತು ಒಳಸಂಚು ಮತ್ತು ಅಪಾಯವನ್ನು ಬೆರೆಸುವ ತಿರುವುಗಳಿಗೆ ಹೆಸರುವಾಸಿಯಾಗಿದೆ.

ರಾಜ್ ಬಿ ಶೆಟ್ಟಿ ಅವರು ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಮತ್ತು ಇತ್ತೀಚೆಗೆ ಬಿಡುಗಡೆಯಾದ ಸು ಫ್ರಮ್ ಸೋ ಚಿತ್ರದಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ಚಿತ್ರದ ಸಸ್ಪೆನ್ಸ್ ಪ್ರಪಂಚದ ಬಗ್ಗೆ ಸುಳಿವು ನೀಡುವ ಟೀಸರ್ ಬಿಡುಗಡೆಯಾಗಿದೆ. ಟೀಸರ್ ತಲೆಬರುಡೆಗಳನ್ನು ತೋರಿಸಿದ್ದು, ಈಗಲೇ ತೀವ್ರ ನಿರೀಕ್ಷೆ ಹುಟ್ಟುಹಾಕುವಂತಿದೆ.

A poster for Jugari Cross (L) and Raj B Shetty (R)
ತೇಜಸ್ವಿ ಅವರ ‘ಜುಗಾರಿ ಕ್ರಾಸ್‌’ ಬೆಳ್ಳಿ ತೆರೆಗೆ: ಗುರುದತ್‌ ಗಾಣಿಗ ನಿರ್ದೇಶನ

ಈ ಯೋಜನೆಯು ಗುರುದತ್ತ ಗಾಣಿಗ ಮತ್ತು ರಾಜ್ ಬಿ ಶೆಟ್ಟಿ ನಡುವಿನ ಎರಡನೇ ಸಹಯೋಗವನ್ನು ಗುರುತಿಸುತ್ತದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಕರಾವಳಿಯಲ್ಲಿಯೂ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಜುಗಾರಿ ಕ್ರಾಸ್ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಮತ್ತು ಸಚಿನ್ ಬಸ್ರೂರ್ ಅವರ ಸಂಗೀತವಿದೆ.

ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮುಂಬರುವ ವಾರಗಳಲ್ಲಿ ತಾರಾಗಣದ ಬಗ್ಗೆ ಪ್ರಕಟಣೆಗಳನ್ನು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com