

ಅಕ್ಟೋಬರ್ 2ರಂದು ತೆರೆಕಂಡ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಪ್ರಮುಖ ಮೈಲಿಗಲ್ಲುಗಳನ್ನು ದಾಟಿದೆ. 2022ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಚಿತ್ರ ಕಾಂತಾರದ ಪ್ರೀಕ್ವೆಲ್ ಆಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ 800 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಹಲವು ದಾಖಲೆಗಳನ್ನು ಮುರಿದಿದೆ.
ಸಿನಿಮಾ ಎಕ್ಸ್‌ಪ್ರೆಸ್ ಜೊತೆಗಿನ ಸಂದರ್ಶನದಲ್ಲಿ 'ಕಾಂತಾರ' ಚಿತ್ರದ ನಂತರ ಕನ್ನಡ ಚಿತ್ರೋದ್ಯಮದಿಂದ ದೂರ ಸರಿಯಲು ಏಕೆ ಬಯಸಲಿಲ್ಲ ಎಂದು ಕೇಳಿದಾಗ, ನಟ-ನಿರ್ದೇಶಕ ರಿಷಭ್, 'ಕಾಂತಾರ ಚಿತ್ರವನ್ನು ಕೇವಲ ಹಣಕ್ಕಾಗಿ ಮಾಡಲಿಲ್ಲ. ನಾನು ಬೇರೆ ಆಫರ್‌ಗಳನ್ನು ತೆಗೆದುಕೊಂಡಿದ್ದರೆ, ನಾನು ಅಪಾಯವನ್ನು ತಪ್ಪಿಸಬಹುದಿತ್ತು ಮತ್ತು ಶಾಲೆಗೆ ಹೋಗುತ್ತಿರುವ ನನ್ನ ಮಕ್ಕಳಿಗೆ ಹೆಚ್ಚಿನ ಸಮಯ ನೀಡುತ್ತಿದ್ದೆ. ಆದರೆ, ದೈವಿಕ ಹಸ್ತಕ್ಷೇಪದಿಂದಾಗಿ ನಾನು ಕಾಂತಾರ: ಚಾಪ್ಟರ್ 1 ಮಾಡಿದ್ದೇನೆ' ಎಂದರು.
'ಕನ್ನಡಿಗರು ಕಾಂತಾರನನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು, ಪ್ರೇಕ್ಷಕರು ಭಾಷೆ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳನ್ನು ಮೀರಿ ಚಿತ್ರದ ಬಗ್ಗೆ ತುಂಬಾ ಮಾತನಾಡಿದಾಗ, ನಾನು ಈ ಕಥೆಯನ್ನು ಮುಗಿಸಬೇಕು ಮತ್ತು ಪ್ರೀಕ್ವೆಲ್ ಮಾಡುವ ಮೂಲಕ ಅದಕ್ಕೆ ನ್ಯಾಯ ಒದಗಿಸಬೇಕು ಎಂದು ನನಗೆ ತಿಳಿದಿತ್ತು' ಎಂದು ಹೇಳಿದರು.
ತಮ್ಮ ಮುಂಬರುವ ಯೋಜನೆಗಳ ಕುರಿತು ಮಾತನಾಡಿದ ಅವರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಕಾಂತಾರ: ಚಾಪ್ಟರ್ 1 ಅನ್ನು ಪೂರ್ಣಗೊಳಿಸುವವರೆಗೆ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳಲು ಬಯಸಿರಲಿಲ್ಲ. ಆದರೆ ಅಂತಹ ಪಾತ್ರಗಳು ನನ್ನ ಬಳಿಗೆ ಬಂದಿರುವುದರಿಂದ ನನಗೆ ಸಂತೋಷವಾಗಿದೆ. ಆದರೆ ನಾನು ಅದನ್ನು ಮುರಿದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಮಾದರಿಯ ಚಿತ್ರವನ್ನು ಮಾಡಲು ಬಯಸುತ್ತೇನೆ. ಒಬ್ಬ ನಟ ಅಥವಾ ನಿರ್ದೇಶಕನಾಗಿ ಒಂದೇ ಶೈಲಿಗೆ ಅಂಟಿಕೊಳ್ಳಲು ಸಾಧ್ಯವಿಲ್ಲ' ಎಂದರು.
'ನಾನು ವೈವಿಧ್ಯಮಯ ಪಾತ್ರಗಳನ್ನು ಅನ್ವೇಷಿಸಲು ಬಯಸುತ್ತೇನೆ. ಜೈ ಹನುಮಾನ್‌ನಂತಹ ಚಿತ್ರಗಳು ನನ್ನನ್ನು ಹುಡುಕಿಕೊಂಡು ಬಂದವು. ವಾಸ್ತವವಾಗಿ, ಅವರು ನನ್ನನ್ನು ಕುಂದಾಪುರದವರೆಗೆ ಬೆನ್ನಟ್ಟಿದರು. ಅದನ್ನು ತಿರಸ್ಕರಿಸಲು ನನಗೆ ಯಾವುದೇ ಕಾರಣವಿರಲಿಲ್ಲ. ನನಗೆ ಪುರಾಣ, ಯಕ್ಷಗಾನ ಮತ್ತು ಇತಿಹಾಸದಲ್ಲಿ ಆಸಕ್ತಿ ಇರುವುದರಿಂದ, ಅಂತಹ ಪಾತ್ರಗಳು ನನ್ನನ್ನು ಆಕರ್ಷಿಸಿದವು' ಎಂದರು.
ಕಾಂತಾರ: ಚಾಪ್ಟರ್ 1 ಅನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ. ಅವರು ಚಿತ್ರದಲ್ಲಿ ಬೆರ್ಮೆ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಸೇರಿದಂತೆ ಇತರರು ನಟಿಸಿದ್ದಾರೆ.
Advertisement