
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರದ ಶೀರ್ಷಿಕೆ ಕುರಿತು ಜೋರಾಗಿ ನಡೆಯುತ್ತಿತ್ತು. ಇಲ್ಲಿಯವರೆಗೆ ಸುದೀಪ್ ರ ಮುಂದಿನ ಚಿತ್ರವನ್ನು ತಾತ್ಕಾಲಿಕವಾಗಿ ಕಿಚ್ಚಾ47 ಎಂದು ಕರೆಯಲಾಗುತ್ತಿತ್ತು. ಇದೀಗ ನಿರ್ದೇಶಕ ವಿಜಯ್ ಕಾರ್ತಿಕೇಯ ಶೀರ್ಷಿಕೆಯನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಮ್ಯಾಕ್ಸ್ ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್, ಅಕಾ ಮ್ಯಾಕ್ಸ್ ಪಾತ್ರದಲ್ಲಿ ನಟಿಸಿದ್ದ ಸುದೀಪ್ ಈಗ ಅಜಯ್ ಮಾರ್ಕಂಡಯ್, ಅಕಾ ಮಾರ್ಕ್ ಅವತಾರ ಎತ್ತಿದ್ದಾರೆ.
ನಾಳೆ ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಇಂದು ಮಾರ್ಕ್ ಶೀರ್ಷಿಕೆ ಟೀಸರ್‌ನೊಂದಿಗೆ ಅಧಿಕೃತವಾಗಿ ಘೋಷಿಸಿದೆ. 2025ರ ಕ್ರಿಸ್‌ಮಸ್‌ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 1ರಂದು ಅವರ ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸುದೀಪ್ ಅವರು, ಚಿತ್ರದ ಕುರಿತಂತೆ ತಮ್ಮ ತಂಡ ಏಕೆ ತುಂಬಾ ಆಸಕ್ತಿ ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸಿದ್ದರು.
ಈ ವರ್ಷದ ಅಂತ್ಯದ ವೇಳೆಗೆ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ, ಉಪೇಂದ್ರ ಅವರ UI ಬಿಡುಗಡೆಯಾದ 5 ದಿನಗಳ ನಂತರ ಮ್ಯಾಕ್ಸ್ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ದರ್ಶನ್ ಅವರ 'ದಿ ಡೆವಿಲ್' ಚಿತ್ರ, ಅವತಾರ್ ಫ್ರಾಂಚೈಸಿಯ ಮೂರನೇ ಭಾಗ ಮತ್ತು ಅರ್ಜುನ್ ಜನ್ಯ ಅವರ ನಿರ್ದೇಶನದ ಚೊಚ್ಚಲ ಚಿತ್ರ '45' ನೊಂದಿಗೆ ಸಂಭಾವ್ಯ ಘರ್ಷಣೆ ಎದುರಾಗಲಿದೆ. ಆದರೂ ಈ ವರ್ಷವೂ ಸಹ ಮ್ಯಾಕ್ಸ್ ಪುನರಾವರ್ತನೆಯಾಗುವ ಭರವಸೆಯಲ್ಲಿದ್ದಾರೆ.
Advertisement