
ನವದೆಹಲಿ: ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಅವರ ನಡುವಿನ ಸಂಬಂಧದ ಬಗ್ಗೆ ದಿನದಿಂದ ದಿನಕ್ಕೆ ವದಂತಿಗಳು ಹೆಚ್ಚಾಗುತ್ತಲೇ ಇವೆ. ಆಗ್ಗಾಗ್ಗೆ ಸಮಂತಾ ಪ್ರವಾಸದ ವಿಡಿಯೋಗಳನ್ನು, ಫೋಟೊಗಳನ್ನು ಹಂಚಿಕೊಂಡಾಗಲೆಲ್ಲಾ ಈ ಇಬ್ಬರ ನಡುವೆ ಏನೋ ಇದೆ ಎಂಬುದನ್ನು ಇಂಟರ್ನೆಟ್ ಬಳಕೆದಾರರು ಎತ್ತಿ ತೋರಿಸಿದ್ದಾರೆ.
ನಟಿ ಸಮಂತಾ ರುತ್ ಪ್ರಭು ಮಂಗಳವಾರ ತಮ್ಮ ದುಬೈ ಪ್ರವಾಸದ ರೀಲ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ರಾಜ್ ನಿಡಿಮೋರು ಅವರ ಮುಖ ಕಾಣಿಸದಿದ್ದರೂ, ನಟಿ ಸಮಂತಾ ಅವರ ಜೊತೆಗೆ ರಾಜ್ ನಿಡಿಮೋರು ಕೂಡ ತೆರಳಿದ್ದಾರೆ ಎಂದು ಹಲವರು ಶಂಕಿಸಿದ್ದಾರೆ.
ಇದಾದ ಕೆಲವು ಗಂಟೆಗಳ ನಂತರ, ರಾಜ್ ನಿಡಿಮೋರು ಅವರ ಪತ್ನಿ ಶ್ಯಾಮಲಿ ದೇ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನಿಗೂಢವಾದ ಸಂದೇಶವನ್ನು ಹಂಚಿಕೊಂಡಿದ್ದಾರೆ.
ನಿರ್ಲಿಪ್ತತೆ ಎಂದರೆ ನಿಮ್ಮಲ್ಲಿರುವ ಎಲ್ಲವನ್ನೂ ನೀವು ತ್ಯಜಿಸುವ ಅಗತ್ಯವಿಲ್ಲ. ಆದರೆ, ನಿಮ್ಮಲ್ಲಿರುವ ಯಾವುದೂ ನಿಮ್ಮನ್ನು ನಿಯಂತ್ರಿಸಬಾರದು- Ali Ibn Abi Talib' ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು, ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ಮತ್ತು ಸಿಟಾಡೆಲ್: ಹನಿ ಬನ್ನಿ ಯಲ್ಲಿ ನಟಿ ಮತ್ತು ನಿರ್ದೇಶಕನಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು ಇವೆರಡೂ ಪ್ರೈಮ್ ವಿಡಿಯೋ ವೆಬ್ ಸರಣಿಗಳಾಗಿವೆ.
ಈ ವರ್ಷದ ಆರಂಭದಲ್ಲಿ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವರ್ಲ್ಡ್ ಪಿಕಲ್‌ಬಾಲ್ ಲೀಗ್ ಪಂದ್ಯದ ಹಲವಾರು ಫೋಟೊಗಳನ್ನು ಹಂಚಿಕೊಂಡಾಗ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಪ್ರಾರಂಭವಾದವು. ಸಮಂತಾ ರುತ್ ಪ್ರಭು, ಪಿಕಲ್‌ಬಾಲ್ ತಂಡವಾದ ಚೆನ್ನೈ ಸೂಪರ್ ಚಾಂಪ್ಸ್‌ನ ಮಾಲೀಕರಾಗಿದ್ದಾರೆ.
ಇತ್ತೀಚೆಗೆ ಸಮಂತಾ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಕೆಲವು ಫೋಟೊಗಳಲ್ಲಿ ರಾಜ್ ನಿಡಿಮೋರು ಇರುವುದು ಕಂಡುಬಂದಿದೆ. ಸಮಂತಾ ಈ ಹಿಂದೆ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು ಮತ್ತು 2021 ರಲ್ಲಿ ವಿಚ್ಛೇದನ ಪಡೆದರು.
ವದಂತಿಯ ಬಗ್ಗೆ ಸಮಂತಾ ರುತ್ ಪ್ರಭು ಅಥವಾ ರಾಜ್ ನಿಡಿಮೋರು ಇಬ್ಬರೂ ಸಾರ್ವಜನಿಕವಾಗಿ ಮಾತನಾಡಿಲ್ಲ.
Advertisement