ಉತ್ತರ ಭಾರತದಲ್ಲಿ ಕಾಂತಾರ: ಚಾಪ್ಟರ್ 1 ವಿತರಣೆ ರೈಟ್ಸ್ 'ಎಎ ಫಿಲಂಸ್ ತೆಕ್ಕೆಗೆ

ಈ ಚಿತ್ರವು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಮತ್ತು ಚೀನಾ ಹೊರತುಪಡಿಸಿ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.
Kantara chapter 1 poster
ಕಾಂತಾರ ಚಾಪ್ಟರ್ 1 ಪೋಸ್ಟರ್
Updated on

ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲ್ಮ್ಸ್, ಗಾಂಧಿ ಜಯಂತಿ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್ 2 ರಂದು ಕಾಂತಾರ: ಚಾಪ್ಟರ್ 1ರ ವಿಶ್ವಾದ್ಯಂತ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ 2022ರ ಬ್ಲಾಕ್‌ಬಸ್ಟರ್ ಕಾಂತಾರ ನಂತರ ಬರುತ್ತಿರುವ ಕಾಂತಾರ: ಚಾಪ್ಟರ್ 1 ಚಿತ್ರ ಈಗಾಗಲೇ ದೇಶಾದ್ಯಂತ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.

ಕಾಂತಾರ: ಚಾಪ್ಟರ್ 1ಗಾಗಿ ವಿವಿಧ ಭಾಷೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಉತ್ತರ ಭಾರತದಲ್ಲಿ ಚಿತ್ರದ ವಿತರಣೆಯ ಹಕ್ಕನ್ನು ಎಎ ಫಿಲಂಸ್ ಪಡೆದಿದೆ. ಇದರೊಂದಿಗೆ ಹಿಂದಿ ಮಾತನಾಡುವ ಪ್ರದೇಶಗಳ ಪ್ರೇಕ್ಷಕರು ಸಹ ಈ ಮಹಾಕಾವ್ಯದ ಸಾಹಸಗಾಥೆಯನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಲು ಸಾಧ್ಯವಾಗುತ್ತದೆ.

Kantara chapter 1 poster
'ಕಾಂತಾರ: ಚಾಪ್ಟರ್ 1' ಚಿತ್ರದ ನಾಯಕಿ ರಿವೀಲ್: ಕನಕವತಿ ಪೋಸ್ಟರ್ ರಿಲೀಸ್

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದು, ಕ್ರಿ.ಶ 4ನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ತೆರೆಯ ಮೇಲೆ ತರುವ ಪ್ರಯತ್ನ ಚಿತ್ರತಂಡದ್ದಾಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಅತಿದೊಡ್ಡ ತಾರಾಗಣವಿದೆ.

ಈ ಚಿತ್ರವು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಮತ್ತು ಚೀನಾ ಹೊರತುಪಡಿಸಿ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com