SIIMA 2025: ಅಲ್ಲು ಅರ್ಜುನ್ ಜೊತೆ 'ಪುಷ್ಪ 3' ಮಾಡುವುದಾಗಿ ನಿರ್ದೇಶಕ ಸುಕುಮಾರ್ ಘೋಷಣೆ

ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಮತ್ತು ಮೈತ್ರಿ ಮೂವಿ ಮೇಕರ್ಸ್‌ನ ನಿರ್ಮಾಪಕ ನವೀನ್ ಯೆರ್ನೇನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Pushpa 2 Cast and crew
ಪುಷ್ಪ 2 ಚಿತ್ರತಂಡ
Updated on

ಶನಿವಾರ ದುಬೈನಲ್ಲಿ ನಡೆದ ಸೈಮಾ ಚಿತ್ರೋತ್ಸವದಲ್ಲಿ 'ಪುಷ್ಪ 2: ದಿ ರೂಲ್' ಚಿತ್ರತಂಡವು ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಪ್ರಶಸ್ತಿಗಳನ್ನು ಗೆದ್ದ ನಂತರ, ಚಿತ್ರದ ಮೂರನೇ ಭಾಗವಾದ 'ಪುಷ್ಪ 3: ದಿ ರಾಂಪೇಜ್' ಅನ್ನು ಖಂಡಿತವಾಗಿಯೂ ನಿರ್ಮಿಸಲಾಗುವುದು ಎಂದು ನಿರ್ದೇಶಕ ಸುಕುಮಾರ್ ದೃಢಪಡಿಸಿದರು.

ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಮತ್ತು ಮೈತ್ರಿ ಮೂವಿ ಮೇಕರ್ಸ್‌ನ ನಿರ್ಮಾಪಕ ನವೀನ್ ಯೆರ್ನೇನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪುಷ್ಪ ತಂಡ ವೇದಿಕೆಗೆ ಬಂದ ನಂತರ, ನಿರೂಪಕರು ತಮಾಷೆಯಾಗಿ 'ಪಾರ್ಟಿ ಲೇದಾ ಪುಷ್ಪಾ? (ಪಾರ್ಟಿ ಇಲ್ಲವೇ, ಪುಷ್ಪಾ?)' ಎಂದು ಫಹಾದ್ ಫಾಸಿಲ್ ನಟನೆಯ ಭನ್ವರ್ ಸಿಂಗ್ ಶೇಕಾವತ್ ಪಾತ್ರದ ಮಾಸ್ ಡೈಲಾಗ್ ಅನ್ನು ಉಲ್ಲೇಖಿಸಿ ಕೇಳಿದರು. ನಂತರ ಅವರು ಪುಷ್ಪ 3 ಅನ್ನು ಮಾಡುವಿರಾ ಎಂದು ಸುಕುಮಾರ್ ಅವರನ್ನು ಕೇಳಿದರು. ಅದಕ್ಕೆ ಸುಕುಮಾರ್ ಅವರು ನಿರ್ಮಾಪಕ ಮತ್ತು ಅರ್ಜುನ್ ಅವರ ಕಡೆಗೆ ನೋಡಿದರು ಮತ್ತು ಅವರು ಒಪ್ಪಿಗೆ ನೀಡಿದ ನಂತರ, ಖಂಡಿತವಾಗಿಯೂ, ಪುಷ್ಪ 3 ಬರಲಿದೆ ಎಂದು ಹೇಳಿದರು. ಇದು ನಿರೂಪಕರು ಮತ್ತು ಪ್ರೇಕ್ಷಕರನ್ನು ಹುರಿದುಂಬಿಸಿತು.

SIIMA ನಲ್ಲಿ, ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ, ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿ, ಸುಕುಮಾರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ದೇವಿ ಪ್ರಸಾದ್ ಅವರಿಗೆ ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿ ಮತ್ತು ಶಂಕರ್ ಬಾಬು ಕಂದುಕುರಿ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಲಭಿಸಿದೆ.

Pushpa 2 Cast and crew
SIIMA 2025: ಕನ್ನಡ ಅಷ್ಟೊಂದು ಕೆಳಮಟ್ಟಕ್ಕೆ ಇಳಿದಿಲ್ಲ; ವೇದಿಕೆಯಲ್ಲೇ ಆಯೋಜಕರಿಗೆ ದುನಿಯಾ ವಿಜಯ್ ಎಚ್ಚರಿಕೆ, Video!

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಲ್ಲು ಅರ್ಜುನ್, 'ನಿಮ್ಮ ನಿರಂತರ ಪ್ರೀತಿ ಮತ್ತು ಮನ್ನಣೆಗೆ ಧನ್ಯವಾದಗಳು. ಸತತ 3 SIIMA ಪ್ರಶಸ್ತಿಗಳನ್ನು ಗೆದ್ದಿರುವುದು ನಿಜಕ್ಕೂ ಒಂದು ವಿನಮ್ರ ಕ್ಷಣ. ಎಲ್ಲ ವಿಜೇತರು ಮತ್ತು ನಾಮನಿರ್ದೇಶಿತರಿಗೆ ಅಭಿನಂದನೆಗಳು. ಇದನ್ನು ಸಾಧ್ಯವಾಗಿಸಿದ ಶ್ರೇಯಸ್ಸು ನಿರ್ದೇಶಕ ಸುಕುಮಾರ್, ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಮತ್ತು ಪುಷ್ಪ ಚಿತ್ರದ ಸಂಪೂರ್ಣ ತಂಡಕ್ಕೆ ಸಲ್ಲುತ್ತದೆ. ನಾನು ಈ ಪ್ರಶಸ್ತಿಗಳನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ... ಅಚಲ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು' ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com