
ನಾಗೇಂದ್ರ ಗಾಣಿಗ ನಿರ್ದೇಶನದ ದಿಂಸೋಲ್, ಕರಾವಳಿ ಸಂಸ್ಕೃತಿಯ ಸೊಗಡನ್ನು ಸಾರಲಿದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ನಡೆಸುವ ಆಚರಣೆಯಿಂದ ಪ್ರೇರಿತವಾದ ಶೀರ್ಷಿಕೆಯು ಇದೀಗ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಈ ಪ್ರದೇಶದ ರೋಮಾಂಚಕ ಪದ್ಧತಿಗಳು, ಪುರಾಣಗಳು ಮತ್ತು ದೈವಿಕ ಜ್ಞಾನವನ್ನು ತೆರೆಮೇಲೆ ತರುವ ಗುರಿಯನ್ನು ಹೊಂದಿದೆ.
'ನಮ್ಮ ಕರಾವಳಿ ಸಂಸ್ಕೃತಿಯ ಚೈತನ್ಯವನ್ನು ದೃಶ್ಯರೂಪದಲ್ಲಿ ಜೀವಂತಗೊಳಿಸಲು ನಾವು ಬಯಸಿದ್ದೇವೆ' ಎಂದು ನಾಗೇಂದ್ರ ಗಾಣಿಗ ಹೇಳುತ್ತಾರೆ. ಚಿತ್ರದ ಫಸ್ಟ್ ಲುಕ್ ಈಗಾಗಲೇ ಕುತೂಹಲವನ್ನು ಹುಟ್ಟುಹಾಕಿದೆ. ರಕ್ತೇಶ್ವರಿಯನ್ನು ಒಳಗೊಂಡ ಹೊಸದಾಗಿ ಬಿಡುಗಡೆಯಾದ ಮೋಷನ್ ಪೋಸ್ಟರ್, ಚಿತ್ರದ ನಿರೂಪಣೆಯ ದೈವಿಕ ಮೇಲ್ಪದರಗಳನ್ನು ತೆರೆದಿಟ್ಟಿದೆ.
ಶಿವಾನಿ ರೈ ನಾಯಕಿಯಾಗಿದ್ದು, ರಥಾಕಿರಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿ ಈ ಹಿಂದೆ ಅಭಿರಾಮಚಂದ್ರ ಚಿತ್ರದಲ್ಲಿ ನಟಿಸಿದ್ದರು ಮತ್ತು ಇದೀಗ ಎರಡನೇ ಬಾರಿಗೆ ಮತ್ತೆ ಒಂದಾಗಿದ್ದಾರೆ. ನಟ ರಾಕೇಶ್ ಅಡಿಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ರಂಗಾಯಣ ರಘು, ಮಾನಸಿ ಸುಧೀರ್ ಮತ್ತು ಅಮೃತಾ ಕಾಣಿಸಿಕೊಳ್ಳಲಿದ್ದಾರೆ.
ನಿರ್ಮಾಪಕ ಸಚಿನ್ ವಿ ಅವರ ಬೆಂಬಲದೊಂದಿಗೆ, ದಿಂಸೋಲ್ ಚಿತ್ರಕ್ಕೆ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಅವರ ಸಂಗೀತ ಸಂಯೋಜನೆಯಿದೆ.
'ಈ ಚಿತ್ರವು ಅದರ ಕಥೆಗೆ ಸ್ಫೂರ್ತಿ ನೀಡಿದ ಕರಾವಳಿಯ ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಇದು ಈಗಾಗಲೇ ದೃಶ್ಯ ಮತ್ತು ಕಂಟೆಂಟ್ ಆಧಾರಿತ ಮಹತ್ವಾಕಾಂಕ್ಷೆಯ ಯೋಜನೆಯಾಗಿ ರೂಪುಗೊಳ್ಳುತ್ತಿದೆ' ಎಂದು ನಾಗೇಂದ್ರ ಗಾಣಿಗ ಹೇಳುತ್ತಾರೆ.
Advertisement