ಡಾರ್ಲಿಂಗ್ ಕೃಷ್ಣ ನಟನೆಯ ಬ್ರ್ಯಾಟ್‌ನ 'ಗಂಗಿ ಗಂಗಿ' ಹಾಡು ರಿಲೀಸ್; ಸಿನಿಮಾ ಬಿಡುಗಡೆ ದಿನಾಂಕ ನಿಗದಿ

'ಬಾಲು ಬೆಳಗುಂದಿ ಅವರ ಸಾಹಿತ್ಯ ಮತ್ತು ಗಾಯನವು ಅರ್ಜುನ್ ಜನ್ಯ ಅವರ ಸಂಗೀತದೊಂದಿಗೆ ಸೇರಿಕೊಂಡು ಮಾಂತ್ರಿಕವಾಗಿದೆ. ಈ ಹಾಡು ಬ್ರಾಟ್‌ಗೆ ಹೊಸ ಶಕ್ತಿಯನ್ನು ತರುತ್ತದೆ' ಎಂದು ಡಾರ್ಲಿಂಗ್ ಕೃಷ್ಣ ತಿಳಿಸಿದರು.
L - A still from Brat; R - Singer Baalu Belagundi
ಬ್ರ್ಯಾಟ್ ಚಿತ್ರದ ಸ್ಟಿಲ್ - ಬಾಲು ಬೆಳಗುಂದಿ
Updated on

ನಟ ಡಾರ್ಲಿಂಗ್ ಕೃಷ್ಣ ನಟನೆಯ ಬ್ರ್ಯಾಟ್ ಚಿತ್ರದ ಮತ್ತೊಂದು ಹಾಡು 'ಗಂಗಿ ಗಂಗಿ' ಬಿಡುಗಡೆಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಬಾಲು ಬೆಳಗುಂದಿ ಮತ್ತು ಇಂದು ನಾಗರಾಜ್ ಹಾಡಿರುವ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಇತ್ತೀಚೆಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು. ಈ ಹಾಡು ಈಗಾಗಲೇ ಮೆಚ್ಚುಗೆ ಪಡೆದಿದೆ.

'ನಾನು ಜಾನಪದ ಗೀತೆಗಳೊಂದಿಗೆ ಪ್ರಾರಂಭಿಸಿದೆ ಮತ್ತು ನಂತರ ಅರ್ಜುನ್ ಜನ್ಯ ಮೂಲಕ ಈ ಅವಕಾಶ ಸಿಕ್ಕಿತು. ಈ ಹಾಡಿನ ಮೂಲಕ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ನಾನು ಕೃತಜ್ಞನಾಗಿದ್ದೇನೆ' ಎಂದು ಸಾಹಿತ್ಯ ಬರೆದ ಬಾಲು ಬೆಳಗುಂದಿ ಹೇಳುತ್ತಾರೆ.

'ಬಾಲು ಬೆಳಗುಂದಿ ಅವರ ಸಾಹಿತ್ಯ ಮತ್ತು ಗಾಯನವು ಅರ್ಜುನ್ ಜನ್ಯ ಅವರ ಸಂಗೀತದೊಂದಿಗೆ ಸೇರಿಕೊಂಡು ಮಾಂತ್ರಿಕವಾಗಿದೆ. ಈ ಹಾಡು ಬ್ರಾಟ್‌ಗೆ ಹೊಸ ಶಕ್ತಿಯನ್ನು ತರುತ್ತದೆ ಮತ್ತು ನಿರ್ದೇಶಕ ಶಶಾಂಕ್ ಅವರೊಂದಿಗಿನ ನಮ್ಮ ಕೆಮಿಸ್ಟ್ರಿಯನ್ನು ಪ್ರದರ್ಶಿಸುತ್ತದೆ' ಎಂದು ಡಾರ್ಲಿಂಗ್ ಕೃಷ್ಣ ತಿಳಿಸಿದರು.

'ಬ್ರ್ಯಾಟ್ ಒಂದು ಹೃದಯವಂತ ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿದೆ. ಗಂಗಿ ಗಂಗಿ ಹಾಡು ಚಿತ್ರಕ್ಕೆ ಅಭಿಮಾನಿಗಳು ಆನಂದಿಸುವ ಮೋಜಿನ, ಉತ್ಸಾಹವನ್ನು ಸೇರಿಸಿದೆ' ಎಂದು ನಿರ್ದೇಶಕ ಶಶಾಂಕ್ ಹೇಳುತ್ತಾರೆ. ಬ್ರ್ಯಾಟ್ ಮೂಲಕ ಪದಾರ್ಪಣೆ ಮಾಡುತ್ತಿರುವ ನಟಿ ಮನೀಷಾ ಕಂದಕೂರ್, 'ಗಂಗಿ ಗಂಗಿ' ಹಾಡು ಅದ್ಭುತವಾಗಿದೆ ಮತ್ತು ಇದು ನಾನು ನಿರ್ವಹಿಸಿರುವ ಮಧ್ಯಮ ವರ್ಗದ ಹುಡುಗಿಯ ಪಾತ್ರಕ್ಕೆ ನಿಜವಾಗಿಯೂ ಪೂರಕವಾಗಿದೆ' ಎಂದು ಅವರು ಹೇಳುತ್ತಾರೆ.

L - A still from Brat; R - Singer Baalu Belagundi
ಬ್ರ್ಯಾಟ್ ಚಿತ್ರದ 'ಗಂಗಿ ಗಂಗಿ' ವಿಡಿಯೋ ಸಾಂಗ್ ವೈರಲ್

ಮಂಜುನಾಥ್ ಕಂದಕೂರ್ ನಿರ್ಮಿಸಿರುವ ಈ ಚಿತ್ರವು ನವೆಂಬರ್ 14 ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಭಿಲಾಷ್ ಕಲಾತಿ ಛಾಯಾಗ್ರಹಣ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com